ಬೆಂಗಳೂರು ಮಾರ್ಗದಿಂದ ಸಂಚಾರ ಆರಂಭಿಸಿದ ವಂದೇ ಭಾರತ್ ರೈಲು ಅರಸೀಕೆರೆ ನಿಲ್ದಾಣ ದಾಟಿ ಬೀರೂರು ಮಾರ್ಗದಲ್ಲಿ ಸಾಗುತ್ತಿದ್ದಂತೆ ಬೆಳಗ್ಗೆ 8-30ರ ಸುಮಾರಿಗೆ ಕೆಲಕಿಡಿಗೇಡಿಗಳು ಕಲ್ಲೆಸೆದಿರುವ ಬಗ್ಗೆ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ದಾವಣಗೆರೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ರೈಲು ಪರಿಶೀಲಿಸಿ ಮಾಹಿತಿ ಕಲೆಹಾಕಿದ್ದಾರೆ.
ಬೀರೂರು/ದಾವಣಗೆರೆ(ಜು.06): ಕರ್ನಾಟಕದ 2ನೇ ಹಾಗೂ ಧಾರವಾಡ-ಬೆಂಗಳೂರು ನಡುವೆ ಸಂಚರಿಸುತ್ತಿರುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕೆಲಕಿಡಿಗೇಡಿಗಳು ಚಿಕ್ಕಮಗಳೂರು ಜಿಲ್ಲೆಯ ಬೀರೂರು ಮಾರ್ಗದಲ್ಲಿ ಕಲ್ಲುತೂರಿದ ಘಟನೆ ಬುಧವಾರ ನಡೆದಿದೆ.
ಘಟನೆಯಲ್ಲಿ ರೈಲಿನ ಕಿಟಕಿ ಗಾಜಿಗೆ ಹಾನಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ದಾವಣಗೆರೆಯಲ್ಲೂ ಇದೇ ರೀತಿ ಕಲ್ಲು ತೂರಾಟ ನಡೆದಿದ್ದು, ರೈಲಿನ ಗಾಜು ಬಿರುಕು ಬಿಟ್ಟಿತ್ತು. ದಾವಣಗೆರೆ ಪ್ರಕರಣಕ್ಕೆ ಸಂಬಂಧಿಸಿ ರೈಲ್ವೇ ಪೊಲೀಸರು ಬಾಲಕನೊಬ್ಬನನ್ನು ಮಂಗಳವಾರ ವಶಕ್ಕೆ ಪಡೆದಿದ್ದು, ಬಾಲಮಂದಿರದಲ್ಲಿ ಬಿಟ್ಟಿದ್ದಾರೆ.
ಧಾರವಾಡ-ಬೆಂಗ್ಳೂರು ‘ವಂದೇ ಭಾರತ್’ ರೈಲಿಗೆ ಕಲ್ಲೆಸೆತ, ಗಾಜು ಪುಡಿಪುಡಿ
ಬೆಳಗ್ಗೆ ಘಟನೆ:
ಬೆಂಗಳೂರು ಮಾರ್ಗದಿಂದ ಸಂಚಾರ ಆರಂಭಿಸಿದ ವಂದೇ ಭಾರತ್ ರೈಲು ಅರಸೀಕೆರೆ ನಿಲ್ದಾಣ ದಾಟಿ ಬೀರೂರು ಮಾರ್ಗದಲ್ಲಿ ಸಾಗುತ್ತಿದ್ದಂತೆ ಬೆಳಗ್ಗೆ 8-30ರ ಸುಮಾರಿಗೆ ಕೆಲಕಿಡಿಗೇಡಿಗಳು ಕಲ್ಲೆಸೆದಿರುವ ಬಗ್ಗೆ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ದಾವಣಗೆರೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ರೈಲು ಪರಿಶೀಲಿಸಿ ಮಾಹಿತಿ ಕಲೆಹಾಕಿದ್ದಾರೆ.
ಬಾಲಕ ವಶಕ್ಕೆ: ಇನ್ನು ದಾವಣಗೆರೆಯಲ್ಲಿ ಶನಿವಾರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲುತೂರಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಕನೊಬ್ಬನನ್ನು ರೈಲ್ವೇ ಪೊಲೀಸರು ವಿಜಯನಗರ ಬಡಾವಣೆಯ ಬಾಲಕನೊಬ್ಬನನ್ನು ವಶಕ್ಕೆ ಪಡೆದು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಂತರ ಬಾಲಕನನ್ನು ಬಾಲ ಮಂದಿರದಲ್ಲಿ ಬಿಡಲಾಗಿದೆ.