ಸದಾ ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿ ಕಳೆದ ಏಳೆಂಟು ವರ್ಷಗಳಿಂದ ಬತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿ ಬತ್ತಿ ಬರಿದಾಗಿದ್ದು, ನೀರಿಲ್ಲದೆ ಒಣಗಿದೆ. ಆದರೆ, ನದಿ ಪಾತ್ರದಲ್ಲಿ .1, 2 ಮತ್ತು 5ರ ನಾಣ್ಯಗಳು ಗೋಚರಿಸುತ್ತಿದ್ದು, ಇಲ್ಲೊಬ್ಬ ವೃದ್ಧನಿಗೆ ನದಿ ಪಾತ್ರದಲ್ಲಿ ನಾಣ್ಯ ಆಯುವುದೇ ಒಂದು ನಿತ್ಯದ ಕಾಯಕವಾಗಿದೆ.
ಶಿವಾನಂದ ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ(ಜು.05): ಮುಂಗಾರು ಕೈಕೊಟ್ಟು ಕೃಷ್ಣೆ ಒಡಲು ಗಂಗೆ ಇಲ್ಲದೇ ಬರಿದಾಗಿದೆ. ಆದರೆ, ನದಿ ಪಾತ್ರದಲ್ಲಿ ಲಕ್ಷ್ಮೀ ಕೃಪಾಕಟಾಕ್ಷಕ್ಕೇನು ಬರವಿಲ್ಲ! ಹೌದು, ಸದಾ ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿ ಕಳೆದ ಏಳೆಂಟು ವರ್ಷಗಳಿಂದ ಬತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿ ಬತ್ತಿ ಬರಿದಾಗಿದ್ದು, ನೀರಿಲ್ಲದೆ ಒಣಗಿದೆ. ಆದರೆ, ನದಿ ಪಾತ್ರದಲ್ಲಿ .1, 2 ಮತ್ತು 5ರ ನಾಣ್ಯಗಳು ಗೋಚರಿಸುತ್ತಿದ್ದು, ಇಲ್ಲೊಬ್ಬ ವೃದ್ಧನಿಗೆ ನದಿ ಪಾತ್ರದಲ್ಲಿ ನಾಣ್ಯ ಆಯುವುದೇ ಒಂದು ನಿತ್ಯದ ಕಾಯಕವಾಗಿದೆ.
ರಬಕವಿ-ಬನಹಟ್ಟಿ ತಾಲೂಕಿನ ಪಕ್ಕದಲ್ಲೇ ಕೃಷ್ಣಾ ನದಿ ಹರಿದಿದ್ದು, ಮಳೆಗಾಲದಲ್ಲಿ ರಬಕವಿಯಿಂದ ಮಹಿಷವಾಡಗಿ ಮಾರ್ಗವಾಗಿ ಅಥಣಿ ತಾಲೂಕು ಸಂಪರ್ಕ ಕಲ್ಪಿಸಲು ಬೋಟ್ ವ್ಯವಸ್ಥೆ ಮಾಡಲಾಗಿರುತ್ತದೆ. ಬೋಟ್‌ನಲ್ಲಿ ಸಂಚರಿಸುವವರು ಕೃಷ್ಣೆಗೆ ಇಚ್ಛಾನುಸಾರ ನಾಣ್ಯಗಳನ್ನು ಅರ್ಪಿಸುವುದು ವಾಡಿಕೆ. ಅಲ್ಲದೇ, ಪೂಜೆ-ಪುನಸ್ಕಾರ, ಬಾಗಿನ ಅರ್ಪಿಸಲೆಂದು ಬಂದವರು ನಾಣ್ಯ ಸಮರ್ಪಿಸಿ ನಮಿಸುತ್ತಾರೆ.
undefined
ಬೆಳೆ ವಿಮೆ: ರೈತರಿಗೆ ಎಫ್‌ಐಡಿ ಕಡ್ಡಾಯ
ಈಗ ಕೃಷ್ಣಾ ನದಿ ನೀರಿಲ್ಲದೆ ಒಣಗಿದ್ದು, ಮಣ್ಣಿನಲ್ಲಿ ನಾಣ್ಯಗಳು ಗೋಚರಿಸುತ್ತಿವೆ. ಆಸಂಗಿ ಗ್ರಾಮದ ವೃದ್ಧ ಶ್ರೀಶೈಲ ತೇಲಿ ಎಂಬುವರು ಕೃಷ್ಣಾ ನದಿ ಪಾತ್ರದಲ್ಲಿ ಕಳೆದ ಕೆಲ ದಿನಗಳಿಂದ ನಿತ್ಯವೂ ನಾಣ್ಯ ಆಯುವ ಕಾಯಕದಲ್ಲಿ ತೊಡಗಿದ್ದಾರೆ. ಪ್ರತಿ ದಿನ ಕಡಿಮೆ ಎಂದರೂ ಇನ್ನೂರು-ಮುನ್ನೂರು ರುಪಾಯಿ ಸಿಗುತ್ತಿದೆ. ಬೋಟು ಹೋಗುವ ಮಾರ್ಗದಲ್ಲಿ ಕಲ್ಲು ಸಂದಿ, ಮಣ್ಣಿನಲ್ಲಿ ಹುದುಗಿದ ನಾಣ್ಯಗಳನ್ನು ವೃದ್ಧ ಹೆಕ್ಕಿ ಕಿಸೆ ತುಂಬಿಸಿಕೊಳ್ಳುತ್ತಿದ್ದಾರೆ.
9 ತಾಸು ಕಾಸು ಆಯುವ ಕಾಯಕ:
ವೃದ್ಧ ಶ್ರೀಶೈಲ್‌ನಿಗೆ ಇದೀಗ ಅಂದಾಜು 69 ವಯಸ್ಸು. ಗಂಡು ಮಕ್ಕಳು ಬೇರೆ ಊರಿಗೆ ದುಡಿಯಲು ಹೋಗಿದ್ದಾರೆ. ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಮಳೆಯಾಗದ ಹಿನ್ನೆಯಲ್ಲಿ ಇದೀಗ ಕೃಷ್ಣೆಯ ಒಡಲು ಬರಿದಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಭಕ್ತಿಯಿಂದ ಕೃಷ್ಣಾನದಿಗೆ ನಾಣ್ಯಗಳನ್ನು ಎಸೆಯುತ್ತಿದ್ದಾರೆ. ಹೀಗೆ ಎಸೆದ ನಾಣ್ಯಗಳು ಇದೀಗ ಎಲ್ಲೆಡೆ ಕಾಣಸಿಗುತ್ತಿವೆ. ಹೀಗಾಗಿ ವೃದ್ಧ ಶ್ರೀಶೈಲ್ ಅಲ್ಲಿ ಬಿದ್ದ ನಾಣ್ಯಗಳನ್ನು ಆಯುವ ಕಾಯಕದಲ್ಲಿ ನಿರತರಾಗಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೂ ನಾಣ್ಯ ಆಯುತ್ತಿದ್ದಾರೆ. ಒಮ್ಮೊಮ್ಮೆ ದಿನಕ್ಕೆ .1000 ಸಾವಿರ, .500, .600ರವರೆಗೆ ನಾಣ್ಯಗಳೂ ಸಿಗುತ್ತಿವೆ.
ಕಳೆದ 15 ದಿನಗಳಿಂದ ನಿತ್ಯ ಬೆಳಗ್ಗೆ 8 ಗಂಟೆಗೆ ಬರುತ್ತೇನೆ. ಸಂಜೆ 5 ಗಂಟೆವರೆಗೆ ನಾಣ್ಯ ಆರಿಸುತ್ತಿದ್ದೇನೆ. .1, 2 ಮತ್ತು 5ರ ನೂರಿನ್ನೂರು ನಾಣ್ಯಗಳು ಪ್ರತಿದಿನ ಕೈಗೆ ಸಿಗುತ್ತಿದ್ದು, ದಿನಂಪ್ರತಿ .500ರಿಂದ .1000 ಲಭ್ಯವಾಗುತ್ತಿದೆ. ತುಂಬಿದ ನದಿಗೆ ಜನರು ಭಕ್ತಿಯಿಂದ ನಾಣ್ಯ ಎಸೆದು ಕೈ ಮುಗಿಯುತ್ತಾರೆ. ಕಳೆದ 8 ವರ್ಷಕ್ಕೂ ಹೆಚ್ಚು ಸಮಯ ನದಿ ಪಾತ್ರ ತಳ ಕಂಡಿರಲಿಲ್ಲ. ಈಗ ಬರಿದಾಗಿದ್ದರಿಂದ ಆ ನಾಣ್ಯಗಳು ದೊರೆಯುತ್ತಿವೆ ಅಂತ ವೃದ್ಧ ಶ್ರೀಶೈಲ ತೇಲಿ ತಿಳಿಸಿದ್ದಾರೆ.