Chikkamagaluru: ಕಳ್ಳತನವಾಗಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ಮತ್ತೆ ಮಾಲೀಕರ ಮಡಿಲಿಗೆ

By Gowthami K  |  First Published Dec 29, 2022, 7:52 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ವಸ್ತುಗಳು ಮತ್ತೆ ಮಾಲೀಕರ ಮಡಿಲಿಗೆ ಸೇರಿವೆ. ಕಳವು ಪ್ರಕರಣಗಳನ್ನು ಜಿಲ್ಲಾ ಪೊಲೀಸ್ ವತಿಯಿಂದ ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದ್ದ ಅಪಾರ ಪ್ರಮಾಣದ ಸ್ವತ್ತು ಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಡಿ.29): ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ವಸ್ತುಗಳು ಮತ್ತೆ ಮಾಲೀಕರ ಮಡಿಲಿಗೆ ಸೇರಿವೆ. ಕಳವು ಪ್ರಕರಣಗಳನ್ನು ಜಿಲ್ಲಾ ಪೊಲೀಸ್ ವತಿಯಿಂದ ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದ್ದ ಅಪಾರ ಪ್ರಮಾಣದ ಸ್ವತ್ತು ಗಳನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಈ ಮೂಲಕ ಕಳ್ಳತನವಾಗಿದ್ದ ವಸ್ತುಗಳು ಮತ್ತೆ ಸಿಕ್ಕಿದ ಹಿನ್ನೆಲೆಯಲ್ಲಿ ಮಾಲೀಕರಲ್ಲಿ ಸಂತಸ ಮನೆ ಮಾಡಿತ್ತು. 

Tap to resize

Latest Videos

ಸ್ವತ್ತುಗಳನ್ನು ಮಾಲೀಕರಿಗೆ ಹಸ್ತಾಂತರ ಮಾಡಿದ ಎಸ್ ಪಿ:
ಚಿಕ್ಕಮಗಳೂರು ನಗರದ ರಾಮನಹಳ್ಳಿ ಡಿಎಆರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವತ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನಂತರ ಮಾತನಾಡಿ, ಈ ವರ್ಷ 6 ಕೆ.ಜಿ. ಚಿನ್ನಾಭರಣ, 11 ಕೆ.ಜಿ. ಬೆಳ್ಳಿ ವಸ್ತುಗಳು, 70 ವಾಹನಗಳು, 8.30 ಲಕ್ಷ ರೂ ನಗದು ಸೇರಿ ಒಟ್ಟು 5.58 ಕೋಟಿ ರೂ.ಗಳಿಗೂ ಹೆಚ್ಚಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.ಅದನ್ನು ನ್ಯಾಯಾಲಯದ ಅನುಮತಿ ಪಡೆದು ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಈ ಪೈಕಿ ಇಂದು 60 ಪ್ರಕರಣಗಳಿಗೆ ಸಂಬಂಧಿಸಿದಂತೆ 1. 31 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ.

 

 ಸಾಲ ತೀರಿಸಲು ಮಂಗಳಮುಖಿ ಮನೆಯಲ್ಲಿ ಚಿನ್ನ ಕಳ್ಳತನ: ಇಬ್ಬರ ಬಂಧನ

ಕಳ್ಳತನವಾಗಿದ್ದ ಮೊಬೈಲ್ ಗಳು ಕೂಡ ಪತ್ತೆ:
ಮೂರು ವರ್ಷಗಳಲ್ಲಿ ಕಳವು ಮಾಡಲಾಗಿದ್ದ 181 ಮೊಬೈಲ್ಗಳನ್ನು ಮಾಲೀಕರಿಗೆ ಹಿಂತಿರುಗಿಸುತ್ತಿದ್ದೇವೆ. ನಗರ ಠಾಣೆ ವ್ಯಾಪ್ತಿಯಲ್ಲಿ 52.58 ಲಕ್ಷ ರೂ. ಬೆಲೆಯ 899 ಗ್ರಾಂ ಚಿನ್ನ ಕಳವಾಗಿತ್ತು ಅದನ್ನು ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲೆಯ ವಿವಿಧ ಠಾನೆಗಳಲ್ಲಿ ಒಟ್ಟು ಚಿನ್ನಾಭರಣ 2 ಕೆಜಿ 536 ಗ್ರಾಂ, ಬೆಳ್ಳಿ 12 ಕೆಜಿ 471 ಗ್ರಾಂ, ಹೀಗೆ ಎಲೆಕ್ಟ್ರಾನಿಕ್ ಉಪಕರಣಗಳು, ಕಾಫಿ, ಅಡಿಕೆ, ಮೆಣಸು, 63 ವಾಹನಗಳು, 15.19 ಲಕ್ಷ ನಗದು ಸೇರಿ 2.23 ಕೋಟಿ ರೂ. ಸ್ವತ್ತುಗಳನ್ನು ಇಂದು ಹಸ್ತಾಂತರಿಸಲಾಗಿದೆ ಎಂದರು.

Kalaburagi: ಘತ್ತರಗಿ ದೇವಸ್ಥಾನದಲ್ಲಿ ಕಳ್ಳತನ: ಹುಂಡಿಯ ನಾಣ್ಯ ರಸ್ತೆಯಲ್ಲಿ ಸುರಿದು ಚಿನ್ನ ಹೊತ್ತೊಯ್ದರು

ಕಳವು ಪ್ರಕರಣವನ್ನು ತಡೆಯಲು ಸಾರ್ವಜನಿಕರ ಸಹಕಾರವೂ ತುಂಬಾ ಅಗತ್ಯವಾಗಿರುತ್ತದೆ. ಅದರಲ್ಲೂ ಸೈಬರ್ ಕ್ರೈಂಗಳು ತುಂಬಾ ಸುಲಭವಾಗಿ ನಡೆಯುತ್ತಿದೆ. ಈ ಬಗ್ಗೆ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಸಿಬ್ಬಂದಿಗಳು ಜಾಗೃತಿ ಮೂಡಿಸಲಾಗುತ್ತಿದೆ. ಕರ್ನಾಟಕ ಪೊಲೀಸ್ ಸರ್ವೀಸ್ ಆಪ್ನಲ್ಲಿ ಇ-ಎಫ್ಐಆರ್ ಮಾಡಿಸಲಾಗುತ್ತಿದೆ. 112 ಹೆಚ್ಚು ಹೆಚ್ಚು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿವೈಎಸ್ಪಿಗಳು, ಜಿಲ್ಲೆಯ ವಿವಿಧ ಠಾಣೆಗಳ ಇನ್ಸ್ಪೆಕ್ಟರ್ಗಳು, ಠಾಣಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕಳವುವಾದ ಸ್ವತ್ತಿನ ಮಾಲೀಕರು ಉಪಸ್ಥಿತರಿದ್ದರು.

click me!