ಗದಗದಲ್ಲಿ ಕೋವಿಡ್ ಸ್ಥಿತಿಗತಿಯನ್ನು ಅವಲೋಕಿಸುವ ನಿಟ್ಟಿನಲ್ಲಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಉಸ್ತುವಾರಿ ಸಚಿವ ಬಿಸಿ ಪಾಟೀಲ ಆನ್ ಲೈನ್ ಮೀಟಿಂಗ್ ನಡೆಸಿದರು. ಬೆಳಗಾವಿಯ ಸುವರ್ಣ ಸೌಧದ ಸಚಿವರ ಅಚೇರಿಯಿಂದಲೇ ಜೂಮ್ ಮೀಟಿಂಗ್ ನಡೆಸಿ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪಾಲಿಸಿ ಎಂದರು.
ಗದಗ(ಡಿ.29): ಜಿಲ್ಲೆಯ ಕೋವಿಡ್ ಸ್ಥಿತಿಗತಿಯನ್ನ ಅವಲೋಕಿಸುವ ನಿಟ್ಟಿನಲ್ಲಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಉಸ್ತುವಾರಿ ಸಚಿವ ಬಿಸಿ ಪಾಟೀಲ ಆನ್ ಲೈನ್ ಮೀಟಿಂಗ್ ನಡೆಸಿದರು. ಬೆಳಗಾವಿಯ ಸುವರ್ಣ ಸೌಧದ ಸಚಿವರ ಅಚೇರಿಯಿಂದ್ಲೆ ಜೂಮ್ ಮೀಟಿಂಗ್ ನಡೆಸಿದ ಸಚಿವರು, ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪಾಲಿಸ್ಬೇಕು ಅಂತಾ ತಿಳಿಸಿದ್ರು. ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಆನ್ ಲೈನ್ ನಲ್ಲೇ ಸಭೆ ನಡೆಸಿದ ಸಚಿವರು ಕೋವಿಡ್ ಸೋಂಕು ಉಲ್ಬಣವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಉಲ್ಬಣವಾಗದಂತೆ ವಹಿಸಿರುವ ಮುಂಜಾಗ್ರತಾ ಕ್ರಮಗಳು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮಾಡಿಕೊಂಡ ಸಿದ್ಧತೆ, ಬೆಡ್ ವ್ಯವಸ್ಥೆ, ಮಾನವ ಸಂಪನ್ಮೂಲ ಅಗತ್ಯತೆ, ಆಕ್ಸಿಜನ್ ಉತ್ಪಾದನೆ, ಸಂಗ್ರಹ, ಕೋವಿಡ್ ಸಲಕರಣೆಗಳಾದ ಪಿಪಿಇ ಕಿಟ್ ಮಾಸ್ಕ್, ಸ್ಯಾನಿಟೈಜರ್, ಆಕ್ಸಿಜನ್ ಕಾನ್ಸನ್ಸ ಟ್ರೇಟರ್ , ಆಕ್ಸಿಜನರೇಟೆಡ್ ಬೆಡ್, ಆಂಬುಲೆನ್ಸ್, ತಾಂತ್ರಿಕ ಸಿಬ್ಬಂದಿ, ಔಷಧಿ ಕುರಿತು ಮಾಹಿತಿ ಪಡೆದ ಅವರು ಜಿಲ್ಲಾಡಳಿತ ಶಿಸ್ತು ಬದ್ಧವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಪಾಲನೆ ಮಾಡುವಂತೆ ಕ್ರಮ ವಹಿಸಲು ತಿಳಿಸಿದರು.
undefined
ಸೋಂಕು ಪತ್ತೆಗಾಗಿ ಸರ್ಕಾರ ನಿಗದಿಪಡಿಸಿದ ಗುರಿಯಂತೆ ತಪಾಸಣೆಗೊಳಪಡಿಸಬೇಕು. ಸೋಂಕು ಪತ್ತೆಯಾದಲ್ಲಿ ಅದು ಇನ್ನೊಬ್ಬರಿಗೆ ಹರಡದಂತೆ ಮುಂಜಾಗ್ರತೆ ವಹಿಸಲು ಸೋಂಕಿತರಿಗೆ ಕ್ವಾರಂಟೈನ್ ಮಾಡಬೇಕು. ಸೋಂಕಿತರ ಚಿಕಿತ್ಸೆ ಹಾಗೂ ತಪಾಸಣೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಅಂತಾ ಸಚಿವರು ಸೂಚಿಸಿದ್ರು.
ಈಗಾಗಲೇ ಅರ್ಹ ಎಲ್ಲ ಸಾರ್ವಜನಿಕರು ಕೋವಿಡ್ ಲಸಿಕೆ ನೀಡಲಾಗಿದೆ. ಮೊದಲ ಲಸಿಕೆ ಪಡೆದವರು 2 ನೇ ಲಸಿಕೆ, 2 ನೇ ಲಸಿಕೆ ಪಡೆದವರು ಮುಂಜಾಗ್ರತಾ ಲಸಿಕೆ ಪಡೆಯಬೇಕು. ಆದಷ್ಟು ಮಾಸ್ಕ್ ಸ್ಯಾನಿಟೈಜರ್ ಬಳಕೆಯಡಿ ಗಮನಹರಿಸಬೇಕು ಎಂದರು.
ಸಂತೆ, ಶಾಲಾ ಕಾಲೇಜು ಚಿತ್ರ ಮಂದಿರ, ಬಸ್ ನಿಲ್ದಾಣ ಸೇರಿದಂತೆ ಜನವಸತಿ ಪ್ರದೇಶಗಳಲ್ಲಿ ಸಾರ್ವಜನಿಕರೆಲ್ಲರೂ ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸಿ ವ್ಯವಹರಿಸಬೇಕು. ಜೊತೆಗೆ ಶುಚಿತ್ವದೆಡೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಗಮನ ಹರಿಸಬೇಕು. ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ಪರೀಕ್ಷೆಗೊಳಗಾಗಬೇಕು. ಸೋಂಕು ದೃಢವಾದಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಚಿಕಿತ್ಸೆ ಪಡೆಯಬೇಕು. ಈ ಎಲ್ಲ ಹಂತಗಳನ್ನು ಅಧಿಕಾರಿಗಳು ನಿಯಮಾನುಸಾರ ಕಾರ್ಯಗತಗೊಳಿಸುವಂತೆ ತಿಳಿಸಿದರು.
ಜಿಲ್ಲೆಯ ಕೋವಿಡ್ ನಿಯಂತ್ರಣಕ್ಕಾಗಿ ಅಗತ್ಯವಿರುವ ಮೆಡಿಸಿನ್, ಸಾಧನ ಸಲಕರಣೆ ಅಗತ್ಯವಿದ್ದಲ್ಲಿ ಸರ್ಕಾರದ ಹಂತದಲ್ಲಿ ಪ್ರಯತ್ನಿಸಿ ಜಿಲ್ಲೆಯ ಕೋವಿಡ್ ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯ ಸುರಕ್ಷತೆ ಹಾಗೂ ಜೀವ ಹಾನಿ ತಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಭಾರತದ ಕೋವಿಡ್ ಔಷಧಕ್ಕೆ ಚೀನಾದಲ್ಲಿ ಭಾರೀ ಡಿಮ್ಯಾಂಡ್: ಕಾಳಸಂತೆಯ ಮೊರೆ ಹೋದ ಚೀನಿಯರು..!
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ ಕಳೆದ ನವೆಂಬರ್ 6 ರಿಂದ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಸೋಂಕು ಪತ್ತೆಯಾಗಿಲ್ಲ. ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಒಟ್ಟಾರೆ 873 ಬೆಡ್ ಖಾಸಗಿಯಲ್ಲಿ 302 ಬೆಡ್ ಸೇರಿ ಒಟ್ಟು 1175 ಬೆಡಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ 104 ವೆಂಟಿಲೇಟರ್, 119 ಐ.ಸಿ.ಯು ಒಳಗೊಂಡಿವೆ. ಜಿಮ್ಸ್ ನಲ್ಲಿ 453, ಮುಂಡರಗಿ, ನರಗುಂದ , ರೋಣ ತಾಲೂಕಾ ಆಸ್ಪತ್ರೆಗಳಲ್ಲಿ ತಲಾ 100 ಬೆಡ್, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ ಹಾಗೂ ಬೆಟಗೇರಿ ಆಸ್ಪತ್ರೆಗಳಲ್ಲಿ ತಲಾ 30 ಬೆಡ್ ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ.
ಭಾರತಕ್ಕೆ ಕೋವಿಡ್ 4ನೇ ಅಲೆ ಭೀತಿ, ಹೊಸ ವರ್ಷದ ಆರಂಭದಿಂದ ನಿರ್ಬಂಧ ಜಾರಿ!
ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲಿ 205 ಬೆಡ್ ಗಳನ್ನು ಮೀಸಲಿರಿಸಿದೆ. ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಔಷಧಿ ಸಂಗ್ರಹಣೆ ಕುರಿತಂತೆ ಮಾತನಾಡಿದ ಜಿಲ್ಲಾದಿಕಾರಿ ಅಗತ್ಯ ಔಷಧಿ ಶೇಖರಿಸಿಟ್ಟುಕೊಳ್ಳಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ 27620 ಪಿಪಿಇ ಕಿಟ್, 3079 ಎನ್-95 ಮಾಸ್ಕ್ ಸಂಗ್ರಹವಿದೆ ಅಂತಾ ಮಾಹಿತಿ ನೀಡಿದ್ರು.