ಸ್ಟಾರ್ ಏರ್ ತನ್ನ ಸಂಸ್ಥೆಯ ಬಸ್ಸನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕಳುಹಿಸಿದೆ. ಟರ್ಮಿನಲ್‌ನಿಂದ ವಿಮಾನ ಹತ್ತುವ ಸ್ಥಳ ಏಪ್ರಾನ್‌ಗೆ ಪ್ರಯಾಣಿಕರನ್ನು ಕರೆದೊಯ್ಯಲು ಮತ್ತು ಅಲ್ಲಿಂದ ಟರ್ಮಿನಲ್‌ಗೆ ಕರೆತರಲು ಈ ಬಸ್ ಬಳಕೆಯಾಗುತ್ತದೆ. ಲಾರಿಯ ಮೂಲಕ ಬಸ್ ಅನ್ನು ವಿಮಾನ ನಿಲ್ದಾಣಕ್ಕೆ ತರಲಾಗಿದೆ.
ಶಿವಮೊಗ್ಗ(ನ.19): ಸೋಗಾನೆಯ ವಿಮಾನ ನಿಲ್ದಾಣದಿಂದ ನ.21 ರಿಂದ ಸ್ಟಾರ್ ಏರ್ ವಿಮಾನ ಸೇವೆ ಆರಂಭಿಸುತ್ತಿದೆ. ಇದಕ್ಕೆ ಪೂರಕ ಸಿದ್ಧತೆ ನಡೆಯುತ್ತಿದ್ದು, ಸ್ಟಾರ್ ಏರ್‌ನ ಬಸ್ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಸ್ಟಾರ್ ಏರ್ ತನ್ನ ಸಂಸ್ಥೆಯ ಬಸ್ಸನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕಳುಹಿಸಿದೆ. ಟರ್ಮಿನಲ್‌ನಿಂದ ವಿಮಾನ ಹತ್ತುವ ಸ್ಥಳ ಏಪ್ರಾನ್‌ಗೆ ಪ್ರಯಾಣಿಕರನ್ನು ಕರೆದೊಯ್ಯಲು ಮತ್ತು ಅಲ್ಲಿಂದ ಟರ್ಮಿನಲ್‌ಗೆ ಕರೆತರಲು ಈ ಬಸ್ ಬಳಕೆಯಾಗುತ್ತದೆ. ಲಾರಿಯ ಮೂಲಕ ಬಸ್ ಅನ್ನು ವಿಮಾನ ನಿಲ್ದಾಣಕ್ಕೆ ತರಲಾಗಿದೆ.
ಸ್ಟಾರ್ ಏರ್ ಸಂಸ್ಥೆ ಶಿವಮೊಗ್ಗದಿಂದ ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ ಬಿರುಸುಗೊಂಡಿದೆ. ವಿಮಾನ ನಿಲ್ದಾಣದಲ್ಲಿ ಕಸ್ಟಮರ್ ಸರ್ವಿಸ್ ಮತ್ತು ಸೆಕ್ಯೂರಿಟಿಗಾಗಿ ಈಚೆಗೆ ನೇಮಕಾತಿ ನಡೆಸಲಾಗಿತ್ತು. ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೌಂಟರ್ ಕೂಡ ಆರಂಭವಾಗಿದೆ.
ಸ್ಟಾರ್ ಏರ್ ಶಿವಮೊಗ್ಗದಿಂದ ಮೂರು ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಲಿದೆ. ಶಿವಮೊಗ್ಗದಿಂದ ಹೈದರಾಬಾದ್, ಗೋವಾ ಮತ್ತು ತಿರುಪತಿಗೆ ಸಂಪರ್ಕ ಕಲ್ಪಿಸಲಿದೆ. ನ.೨೧ರಿಂದ ವಿಮಾನಯಾನ ಸೇವೆ ಆರಂಭವಾಗಲಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಕೂಡ ಬಿರುಸುಗೊಂಡಿದೆ.