ಪ್ರಿಯಕರನೋರ್ವ ಕೈ ಕೊಟ್ಟ ಹಿನ್ನೆಲೆಯಲ್ಲಿ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಡೆತ್ ನೋಟ್ ಬರೆದಿಟ್ಟಿದ್ದು ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ.
ಮೈಸೂರು (ಜ.20): ಮದುವೆ ಆಗುವುದಾಗಿ ನಂಬಿಸಿ ಪ್ರಿಯಕರ ಕೈಕೊಟ್ಟಿದ್ದು ಪ್ರಿಯತಮೆ ನೇಣಿಗೆ ಶರಣಾಗಿದ್ದಾಳೆ.
ಮೈಸೂರಿನ ರಾಘವೇಂದ್ರ ನಗರದಲ್ಲಿ ಘಟನೆ ನಡೆದಿದ್ದು, ರಶ್ಮಿ (26) ಎಂಬಾಕೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆಕೆ ಬರೆದಿಟ್ಟ ಡೆತ್ ನೋಟ್ ನಲ್ಲಿ ಪ್ರಿಯಕರ ಅಕ್ಷಿತ್ ಕುಮಾರ್, ಪ್ರಿಯಕರನ ತಾಯಿ ಲಕ್ಷ್ಮಿ ಹಾಗೂ ಅಕ್ಷಿತ್ ಕುಮಾರ್ ಹೊಸ ಗರ್ಲ್ ಫ್ರೆಂಡ್ ವರ್ಷಿಣಿ ಹೆಸರು ಉಲ್ಲೇಖ ಮಾಡಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ರಶ್ಮಿ ಹಾಗೂ ಅಕ್ಷಿತ್ ಕುಮಾರ್ ನಡುವೆ ಪ್ರೇಮವಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ರಶ್ಮಿಯನ್ನು ಪ್ರತಿದಿನ ಮನೆಯಿಂದ ಕರೆದೊಯ್ಯುವುದು, ಕರೆತರುವುದು ಮಾಡುತ್ತಿದ್ದ.
ಎದುರಾಳಿಯ ಹತ್ಯೆಗೆ ಸಂಚು ರೂಪಿಸಿದ್ದ ಕಿಡಿಗೇಡಿಗೆ ಗುಂಡೇಟು ..
ಆದರೆ ಕಳೆದ 15 ದಿನಗಳಿಂದ ಅಕ್ಷಿತ್ ಬೇರೆ ಯುವತಿಯೊಂದಿಗೆ ಸುತ್ತಾಡಲಾರಮಭಿಸಿದ್ದ. ಇದನ್ನು ಕಮಡು ಮನನೊಂದ ರಶ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಹೆಸರನ್ನು ಉಲ್ಲೇಖಿಸಿದ್ದಾಳೆ. ಅಕ್ಷಿತ್‌ಗೆ ತಾಯಿ ಲಕ್ಷ್ಮೀ ಪ್ರೋತ್ಸಾಹವೂ ಇದೆ ಎಂದು ಹೇಳಿದ್ದಾರೆ.
ರಶ್ಮಿ ಆತ್ಮಹತ್ಯೆ ಸಂಬಂಧ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.