ಪೊಲೀಸ್‌ ದಳಕ್ಕೆ ಮುಧೋಳ ತಳಿಯ ಶ್ವಾನ

By Kannadaprabha News  |  First Published Jan 20, 2021, 10:11 AM IST

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮುಧೋಳ ತಳಿ ನಾಯಿ ಬಳಕೆಗೆ ಸರ್ಕಾರ ಅನುಮತಿ| ಬಾಗಲಕೋಟೆ ಎಸ್ಪಿ ಲೋಕೇಶ ಜಗಲಾಸರ್‌ ಅವರಿಗೆ ಶ್ವಾನ ಹಸ್ತಾಂತರ| ಕ್ರಿಸ್‌ಗೆ ಮೂರು ತಿಂಗಳು ತುಂಬುತ್ತಿದ್ದಂತೆಯೇ ಮೈಸೂರಿನ ಶ್ವಾನ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗುವುದು. ಅಲ್ಲಿ ಒಂದು ವರ್ಷ ತರಬೇತಿ ಪಡೆದ ನಂತರ ಬಾಗಲಕೋಟೆಗೆ ಮರಳಲಿದೆ| 


ಬಾಗಲಕೋಟೆ(ಜ.20): ಜಿಲ್ಲಾ ಪೊಲೀಸ್‌ ದಳಕ್ಕೆ ಹೊಸದಾಗಿ ಮುಧೋಳ ತಳಿಯ ಶ್ವಾನವನ್ನು ಸೇರ್ಪಡೆಗೊಳಿಸಲಾಗಿದ್ದು, ತರಬೇತಿಯ ನಂತರ ಅಪರಾಧ ಪತ್ತೆಗಾಗಿ ಬಳಸಿಕೊಳ್ಳಲಾಗುವುದು ಎಂದು ಬಾಗಲಕೋಟೆ ಎಸ್ಪಿ ಲೋಕೇಶ ಜಗಲಾಸರ ತಿಳಿಸಿದ್ದಾರೆ.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮುಧೋಳ ತಳಿ ನಾಯಿ ಬಳಕೆಗೆ ಸರ್ಕಾರ ಅನುಮತಿ ನೀಡಿದ್ದು, ಜನವರಿ 19ರಿಂದ ‘ಕ್ರಿಸ್‌’ ಹೆಸರಿನ 1.5 ತಿಂಗಳ ನಾಯಿ ಮರಿ ಇದಾಗಿದೆ. ಮುಧೋಳ ತಾಲೂಕಿನ ತಿಮ್ಮಾಪುರದ ಶ್ವಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಮಹೇಶ ಕ್ರಿಸ್‌ನನ್ನು ಬಾಗಲಕೋಟೆ ಎಸ್ಪಿ ಲೋಕೇಶ ಜಗಲಾಸರ್‌ ಅವರಿಗೆ ಹಸ್ತಾಂತರಿಸಿದರು. ಕ್ರಿಸ್‌ಗೆ ಮೂರು ತಿಂಗಳು ತುಂಬುತ್ತಿದ್ದಂತೆಯೇ ಮೈಸೂರಿನ ಶ್ವಾನ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗುವುದು. ಅಲ್ಲಿ ಒಂದು ವರ್ಷ ತರಬೇತಿ ಪಡೆದ ನಂತರ ಬಾಗಲಕೋಟೆಗೆ ಮರಳಲಿದೆ ಎಂದು ತಿಳಿದುಬಂದಿದೆ.

Tap to resize

Latest Videos

ಶ್ರೀಗಂಧ ರಕ್ಷಣೆಗೆ ಮುಧೋಳ ನಾಯಿಗಳು: ಖದೀಮರ ಹಾವಳಿ ತಡೆಗೆ ಸಹಕಾರಿ

ಅಷ್ಟೇ ಅಲ್ಲದೇ ಶ್ವಾನ ದಳದಲ್ಲಿ ಮುಧೋಳ ತಳಿಯ ಕಾರ್ಯವೈಖರಿ ಗಮನಿಸಿ ನಂತರ ಬೇರೆ ಬೇರೆ ಜಿಲ್ಲೆಗೆ ನಿಯೋಜನೆ ಮಾಡಲು ನಿರ್ಧರಿಸಿರುವ ಗೃಹ ಇಲಾಖೆ ಮೊದಲ ಹಂತದಲ್ಲಿ ಬಾಗಲಕೋಟೆ ಜಿಲ್ಲೆಗೆ ಅವಕಾಶ ಮಾಡಿಕೊಟ್ಟಿದೆ. ದೈನಂದಿನ ಕಾರ್ಯಚಟುವಟಿಕೆಯಲ್ಲಿ ಕ್ರಿಸ್‌ನ ಸ್ಪಂದನೆ ಗಮನಿಸಿ ಬಾಗಲಕೋಟೆ ಎಸ್ಪಿ ವರದಿ ಸಲ್ಲಿಸಲಿದ್ದಾರೆ. ಸದ್ಯ ಮರಿಯಾಗಿರುವ ಮುಧೋಳ ತಳಿಯ ಶ್ವಾನಕ್ಕೆ ಕ್ರಿಸ್‌ ಎಂದು ಹೆಸರಿಡಲಾಗಿದ್ದು ತರಬೇತಿಗೆ ಅಣಿಗೊಳಿಸಬೇಕಾಗಿದೆ.
 

click me!