ಎಸ್ಸೆಸ್ಸೆಲ್ಸಿ ವೇಳಾಪಟ್ಟಿ ಮೇ 18ಕ್ಕೆ ಪ್ರಕಟ ಸಾಧ್ಯತೆ: ಸುರೇಶ್‌ ಕುಮಾರ್

By Kannadaprabha NewsFirst Published May 16, 2020, 10:45 AM IST
Highlights

ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಶಿಕ್ಷಣ ತಜ್ಞರೊಂದಿಗೆ ಸೋಮವಾರ ಸಭೆ ನಡೆಯಲಿದ್ದು, ಅಂದೇ ಪರೀಕ್ಷಾ ವೇಳಾಪಟ್ಟಿಪ್ರಕಟಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಚಾಮರಾಜನಗರ(ಮೇ 16): ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಶಿಕ್ಷಣ ತಜ್ಞರೊಂದಿಗೆ ಸೋಮವಾರ ಸಭೆ ನಡೆಯಲಿದ್ದು, ಅಂದೇ ಪರೀಕ್ಷಾ ವೇಳಾಪಟ್ಟಿಪ್ರಕಟಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

"

ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಪರೀಕ್ಷೆ ನಡೆಸಬೇಕೆಂದು ಒಲವಿದೆ. ಯಾವ ರೀತಿ ಪರೀಕ್ಷೆ ನಡೆಸಬಹುದೆಂದು ತಜ್ಞರ ಜೊತೆ ಮುಕ್ತವಾಗಿ ಸೋಮವಾರ ಮಾತನಾಡುತ್ತೇವೆ. ಶಾರೀರಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದು ಜೊತೆಗೆ ವಿದ್ಯಾರ್ಥಿಗಳಿಗೆ ಮಾಸ್ಕ್‌, ಸ್ಯಾನಿಟೈಸರ್‌ ನೀಡಲಾಗುವುದು ಎಂದು ಹೇಳಿದರು.

Viral Check: ಸಾಧುಗಳ ಮೇಲೆ ಮುಸ್ಲಿಮರಿಂದ ಹಲ್ಲೆ?

ಎಸ್ಸೆಸ್ಸೆಲ್ಸಿ ರಿವಿಶನ್‌ ತರಗತಿಗಳನ್ನು ದೂರದರ್ಶನದ ಮೂಲಕ ಮಾಡಲಾಗುತ್ತಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗಾಗಿಯೇ ಹೊಸ ಚಾನೆಲ್‌ವೊಂದನ್ನು ಪ್ರಾರಂಭಿಸುವ ಚಿಂತನೆ ಇದೆ. ಕೇವಲ ಮಕ್ಕಳ ಶಿಕ್ಷಣಕ್ಕಾಗಿಯೇ ಇದು ಬಳಕೆಯಾಗಲಿದೆ ಎಂದು ತಿಳಿಸಿದರು.

ಅಬ್ಬಬ್ಬಾ! ಐಎಎಸ್ ಸಂದರ್ಶನದಲ್ಲಿ ಇಂಥಾ ಪ್ರಶ್ನೆಗಳನ್ನೂ ಕೇಳ್ತಾರಾ?

ಇನ್ನು, ಲಾಕ್‌ಡೌನ್‌ನಿಂದ ಶೈಕ್ಷಣಿಕ ವರ್ಷ ಎಷ್ಟುಕಡಿತವಾಗಲಿದೆ ಎಂಬುದರ ಕುರಿತು ಪರಿಶೀಲಿಸಲಾಗುತ್ತಿದೆ. ಎಷ್ಟುದಿನ ಕಡಿತವಾಗುತ್ತದೆಯೋ ಅಷ್ಟುಪಠ್ಯವನ್ನು ಕೈ ಬಿಡಲು ಚಿಂತನೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಹೊರೆಯಾಗದಂತೆ ಇಲಾಖೆ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.

click me!