ಉತ್ತರ ಕನ್ನಡದಲ್ಲಿ ಐದು ಸಾವಿರಕ್ಕೂ ಅಧಿಕ ಜನರ ಕ್ವಾರಂಟೈನ್‌

By Kannadaprabha News  |  First Published May 16, 2020, 9:55 AM IST

ಕೋವಿಡ್‌ -19 ದಾಳಿ ಇಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ವಿವಿಧ ಕಡೆ 5 ಸಾವಿರಕ್ಕೂ ಅಧಿಕ ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸಿದ ವ್ಯಕ್ತಿಗಳನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ.


ಕಾರವಾರ(ಮೇ 16): ಕೋವಿಡ್‌ -19 ದಾಳಿ ಇಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ವಿವಿಧ ಕಡೆ 5 ಸಾವಿರಕ್ಕೂ ಅಧಿಕ ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸಿದ ವ್ಯಕ್ತಿಗಳನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ.

ಹೋಂ ಹಾಗೂ ಸರ್ಕಾರಿ ಕ್ವಾರಂಟೈನ್‌ ಒಳಗೊಂಡು ಒಟ್ಟು 5,467 ಜನರು ಕ್ವಾರಂಟೈನ್‌ನಲ್ಲಿದ್ದು, ಅವರಲ್ಲಿ 4,546 ಜನರು ಈಗಾಗಲೇ 14 ದಿನವನ್ನು ಪೂರ್ಣಗೊಳಿಸಿದ್ದಾರೆ. 921 ಜನರು 14ರಿಂದ 28 ದಿನಗಳ ನಡುವೆ ಇದ್ದಾರೆ. ಹೊರಗಿನಿಂದ ಬಂದವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್‌ ಸೀಲ್‌ ಹಾಕಿ ಹೊರಗಡೆ ಓಡಾಡದಂತೆ ಸೂಚಿಸಿ ಕಳಿಸಲಾಗುತ್ತಿದೆ.

Latest Videos

undefined

ಕೊರೋನಾ ಅತಂಕ: 'ಅನ್ಯ ಮಾರ್ಗದಲ್ಲಿ ಬಂದವರ ಮೇಲೆ ನಿಗಾ, ನಿರ್ಲಕ್ಷ್ಯ ವಹಿಸಿದ್ರೆ ಅಧಿಕಾರಿಗಳೇ ಹೊಣೆ'

ಕಾರವಾರ 1104, ಅಂಕೋಲಾ 1048, ಕುಮಟಾ 1248, ಹೊನ್ನಾವರ 81, ಭಟ್ಕಳ 472, ಶಿರಸಿ 75, ಸಿದ್ದಾಪುರ 111, ಯಲ್ಲಾಪುರ 140, ಮುಂಡಗೋಡ 575, ಹಳಿಯಾಳ 540, ಜೋಯಿಡಾ 37 ಜನರು ಕ್ವಾರಂಟೈನ್‌ನಲ್ಲಿದ್ದಾರೆ.

ಕಾರವಾರ, ಕುಮಟಾ, ಅಂಕೋಲಾದಲ್ಲಿ ಅತ್ಯಂತ ಹೆಚ್ಚಿನ ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಕ್ವಾರಂಟೈನ್‌ ಒಳಗಾದವರಲ್ಲಿ ಜೊಯಿಡಾದಲ್ಲಿ ಕಡಿಮೆ ಸಂಖ್ಯೆ ಇದೆ. ಸರ್ಕಾರಿ ಹಾಗೂ ಹೋಂ ಕ್ವಾರಂಟೈನ್‌ ಎಂದು ವಿಂಗಡಿಸಲಾಗಿದ್ದು, ಹೋಮ್‌ ಕ್ವಾರಂಟೈನ್‌ನಲ್ಲಿ ಅತಿ ಹೆಚ್ಚಿನ ಜನರಿದ್ದಾರೆ.

ಅನಾಥ ಮಹಿಳೆ ರಕ್ಷಿಸಿ ಮಾನವೀಯತೆ ಮೆರೆದ‌ ಸರ್ಕಾರಿ ಅಧಿಕಾರಿ..!

ತಾಲೂಕಿನ ಮಾಜಾಳಿ ಹಾಗೂ ಬೋರೆ ತಪಾಸಣಾ ಗೇಟ್‌ ಮೂಲಕ ತಾಲೂಕಿನ ವಿವಿಧ ಕಡೆಗೆ ಸಾವಿರಕ್ಕೂ ಅಧಿಕ ಜನರು ಹೊರ ರಾಜ್ಯ, ಜಿಲ್ಲೆಯಿಂದ ಆಗಮಿಸಿದ್ದಾರೆ. ಅದರಲ್ಲಿ 361 ಜನರು ಬೇರೆ ರಾಜ್ಯದಿಂದ, 396 ನಮ್ಮ ರಾಜ್ಯದ ವಿವಿಧ ಕಡೆಯಿಂದ ಬಂದವರಾಗಿದ್ದಾರೆ. ಆರೋಗ್ಯ ಇಲಾಖೆ ಹೊರಗಿನಿಂದ ಬಂದವರ ಬಗ್ಗೆ ಮಾಹಿತಿ ಕಲೆ ಹಾಕಿದ್ದು, 400 ಜನ ನೋಂದಣಿಯಾಗಿದೆ. ಮಾಜಾಳಿಯಿಂದ 206, ಬೊರೆಯಿಂದ 78 ಜನರ ಉತ್ತರ ಕನ್ನಡ ಗಡಿ ಪ್ರವೇಶವಾಗಿದೆ.

click me!