ಶಾಲೆಗೆ ಮೊಬೈಲ್‌ ತಂದ ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿದ ಶಿಕ್ಷಕಿ, ಬರೀ ಮೈಯ್ಯಲ್ಲಿ ಕೂರಿಸಿ ವಿಕೃತಿ!

Published : Jan 07, 2022, 04:43 AM IST
ಶಾಲೆಗೆ ಮೊಬೈಲ್‌ ತಂದ ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿದ ಶಿಕ್ಷಕಿ, ಬರೀ ಮೈಯ್ಯಲ್ಲಿ ಕೂರಿಸಿ ವಿಕೃತಿ!

ಸಾರಾಂಶ

* ಫ್ಯಾನ್‌ ಕೆಳಗೆ ಬರೀ ಮೈಯಲ್ಲಿ ಕೂಡಿಸಿ ಶಿಕ್ಷಕಿಯಿಂದ ವಿಕೃತಿ * ಶಾಲೆಗೆ ಮೊಬೈಲ್‌ ತಂದ ವಿದ್ಯಾರ್ಥಿನಿ ಬಟ್ಟೆಬಿಚ್ಚಿಸಿದ ಮುಖ್ಯ ಶಿಕ್ಷಕಿ

ಶ್ರೀರಂಗಪಟ್ಟಣ(ಜ.07): ಶಾಲೆಗೆ ಮೊಬೈಲ್‌ ತಂದಿದ್ದ ವಿದ್ಯಾರ್ಥಿನಿಯರ ಪೈಕಿ ಓರ್ವ ವಿದ್ಯಾರ್ಥಿನಿಯ ಬಟ್ಟೆಬಿಚ್ಚಿಸಿ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಮುಖ್ಯಶಿಕ್ಷಕಿಯೊಬ್ಬರು ಅಮಾನವೀಯವಾಗಿ ಶಿಕ್ಷಿಸಿರುವ ಘಟನೆ ತಾಲೂಕಿನ ಗಣಂಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ವಾರದ ಹಿಂದೆಯೇ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರು ಶಾಲೆಗೆ ಮೊಬೈಲ್‌ ತೆಗೆದುಕೊಂಡು ಬಂದಿದ್ದ ವಿಚಾರ ತಿಳಿದ ಮುಖ್ಯಶಿಕ್ಷಕಿ ಕೊಠಡಿಗೆ ಕರೆಸಿ, ಯಾರಾರ‍ಯರು ಮೊಬೈಲ್‌ ತಂದಿದ್ದೀರೋ ಎಲ್ಲರೂ ಕೊಟ್ಟುಬಿಡಿ. ಇಲ್ಲದಿದ್ದರೆ ನಿಮ್ಮಗಳ ಬಟ್ಟೆಬಿಚ್ಚಿಸುತ್ತೇನೆ. ಹುಡುಗರಿಂದ ನಿಮ್ಮನ್ನು ಚೆಕ್‌ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಕೆಲ ವಿದ್ಯಾರ್ಥಿನಿಯರ ಬಳಿ ಮೊಬೈಲ್‌ ಇರುವುದು ತಿಳಿಯುತ್ತಿದ್ದಂತೆ, ಓರ್ವ ವಿದ್ಯಾರ್ಥಿನಿಯ ಬಟ್ಟೆಕಳಚಿ ಹಲ್ಲೆ ನಡೆಸಿದ್ದಾರೆ. ಕೆಲವರ ಸ್ವೆಟರ್‌ ಬಿಚ್ಚಿಸಿದರೆ, ಮತ್ತೋರ್ವಳ ಸ್ಕರ್ಟ್‌ ಹರಿದಿದ್ದಾರೆ. ನಗ್ನವಾದ ಹುಡುಗಿಯನ್ನು ನೆಲದ ಮೇಲೆ ಕೂರಿಸಿ ಚಳಿಯಾಗಲೆಂದು ಜೋರಾಗಿ ಫ್ಯಾನ್‌ ಹಾಕಿಸಿದ್ದಾರೆ. ಊಟ, ನೀರು ಕೊಡದೆ ಕೊಠಡಿಯಲ್ಲೇ ಇರಿಸಿದ್ದರು. ಸಂಜೆ ಮನೆಗೆ ಹೋದ ವಿದ್ಯಾರ್ಥಿನಿ ಮನೆಗೆ ಹೋದ ಬಳಿಕ ಪೋಷಕರಿಗೆ ವಿಷಯ ತಿಳಿದು ಮುಖ್ಯ ಶಿಕ್ಷಕಿ ಸ್ನೇಹಲತಾ ವಿರುದ್ಧ ಬಿಇಒಗೆ ದೂರು ನೀಡಿದ್ದಾರೆ. ಬಿಇಒ ವಿದ್ಯಾರ್ಥಿನಿಯರ ವಿಚಾರಣೆ ನಡೆಸಿ ಡಿಡಿಪಿಐಗೆ ವರದಿ ಸಲ್ಲಿಸಿದ್ದಾರೆ. ವರದಿ ಆಧರಿಸಿ ಮುಖ್ಯ ಶಿಕ್ಷಕಿ ಅಮಾನತಿಗೆ ಡಿಡಿಪಿಐ ಜವರೇಗೌಡ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ