ರಾಜೀವ್ ಭ್ರಷ್ಟ ಹೇಳಿಕೆ: ಮೋದಿ ವಿರುದ್ಧ ಹರಿಹಾಯ್ದ ರಾಜ್ಯ ಬಿಜೆಪಿ ಹಿರಿಯ ಮುಖಂಡ

By Web DeskFirst Published May 8, 2019, 3:53 PM IST
Highlights

ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್ ಗಾಂಧಿ ಕುರಿತಾಗಿ ನೀಡಿದ್ದ ಹೇಳಿಕೆಗೆ ಸಹಜವಾಗಿ ವಿಪಕ್ಷ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ಬಿಜೆಪಿಯ ಹಿರಿಯ ನಾಯಕರು ಮೋದಿ ಹೇಳಿಕೆಗೆ ಅಪಸ್ವರ ಎತ್ತಿದ್ದಾರೆ.

ಮೈಸುರು(ಮೇ. 08)  ರಾಜೀವ್ ಗಾಂಧಿ ಭ್ರಷ್ಟಾಚಾರಿ ಎಂಬ ಮೋದಿ ಹೇಳಿಕೆಗೆ ನನ್ನ ವಿರೋಧ ಇದೆ ಎಂದು ಮೈಸೂರಿನಲ್ಲಿ ಬಿಜೆಪಿ ಹಿರಿಯ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಮೋದಿ ಹೇಳಿಕೆಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. ರಾಜೀವ್‌ಗಾಂಧಿ ಎಂದು ಸಹ ಭ್ರಷ್ಟಾಚಾರದ ಬಗ್ಗೆ ಮಾತನಾಡಿದವರಲ್ಲ. ಭ್ರಷ್ಟಾಚಾರ ಆರೋಪ ಬಂದಾಗ ರಾಜಕೀಯ ಬಿಟ್ಟು ಎಲ್ಲಾದ್ರೂ ಹೋಗ್ತಿನಿ ಎಂದಿದ್ರು. ರಾಜೀವ್ ಅವರನ್ನು ದೆಹಲಿ ಹೈಕೋರ್ಟ್ ಸಹ ಆರೋಪ ಮುಕ್ತ ಮಾಡಿದೆ. ಅಂತವರ ಬಗ್ಗೆ ಮೋದಿ ಲಖ್ನೋದಲ್ಲಿ ಮಾತನಾಡಿರೋದು ಸರಿಯಲ್ಲ ಎಂದಿದ್ದಾರೆ.

"

ನಂ. 1 ಭ್ರಷ್ಟಾಚಾರಿ ಹೇಳಿಕೆ: ಮೋದಿಗೆ ಸಂಕಷ್ಟ!

ಆ ಮಾತು ಮೋದಿ ಬಾಯಿಂದ ಬರಬಾರಾದಿತ್ತು. ರಾಜೀವ್ ಗಾಂಧಿ ರಾಜಕೀಯಕ್ಕೆ ಬಂದಾಗಲೇ ಶುದ್ದ ಹಸ್ತರು ಅಂತ ಸಾಬೀತು ಮಾಡಿದ್ದಾರೆ. ನಾನು ಹಣ ಮಾಡಲು ಅಧಿಕಾರಕ್ಕೆ ಬಂದಿಲ್ಲ ಅಂತ ಹೇಳಿದ್ದಾರೆ. ಜನರು ನಮ್ಮ ಕುಟುಂಬದ ಬಗ್ಗೆ ಇಟ್ಟ ಗೌರವಕ್ಕೆ ಬಂದಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂತವರ ಬಗ್ಗೆ ವಾಜಪೇಯಿಯವರು ಒಳ್ಳೆ ಮಾತು ಆಡಿದ್ದಾರೆ. ಮೋದಿಯವರು ಆ ಮಾತು ಹೇಳಿದ್ದು ನನಗೆ ಬೇಸರ ತಂದಿತು ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ರಾಜೀವ್ ಗಾಂಧಿ ನಿಧನ ದೇಶಕ್ಕೋಸ್ಕರ ಆಗಿದ್ದು. ಅಂತವರ ತ್ಯಾಗದ ಬಗ್ಗೆ ಭ್ರಷ್ಟಾಚಾರದ ಮಾತನಾಡಿದೋ ಸರಿಯಲ್ಲ. ಮೋದಿಯವರು ರಾಜೀವ್ ಗಾಂಧಿ ಬಗ್ಗೆ ಮಾತನಾಡಿದ್ದು ನನಗೆ ಸರಿ ಅನ್ನಿಸಿಲ್ಲ ಎನ್ನುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

click me!