ಪವಿತ್ರ ರಂಜಾನ್ ಮಾಸ ಆರಂಭ, ತಿಂಗಳ ಕಾಲ ಉಪವಾಸ ಆಚರಣೆ

By Web DeskFirst Published May 6, 2019, 11:41 PM IST
Highlights

ಪವಿತ್ರ ರಂಜಾನ್ ಮಾಸ ನಾಳೆ ಅಂದರೆ ಮೇ 7 ರಂದು ಆರಂಭವಾಗಲಿದೆ. ರಾಜ್ಯಾದ್ಯಂತ ಮುಸ್ಲಿಮರು ಉಪವಾಸ ವ್ರತ ಕೈಗೊಳ್ಳಲಿದ್ದಾರೆ.

ಬೆಂಗಳೂರು[ಮೇ. 06]  ಪವಿತ್ರ ರಂಜಾನ್ ತಿಂಗಳು ರಾಜ್ಯಾದ್ಯಂತ ನಾಳೆ ಅಂದರೆ ಮೇ. 7 ರಿಂದ ಆರಂಭವಾಗಲಿದೆ. ಸೋಮವಾರ ಚಂದ್ರ ದರ್ಶನ ಆಗದ ಕಾರಣ ಮಂಗಳವಾರದಿಂದ ಉಪವಾಸ ಆರಂಭವಾಗಲಿದೆ ಎಂದು ರಾಜ್ಯ ಚಂದ್ರ ದರ್ಶನ ಸಮಿತಿ ತಿಳಿಸಿದೆ.

ಕೆಆರ್ ಮಾರುಕಟ್ಟೆಯ ಜಾಮೀಯಾ ಮಸೀದಿಯ ಹಿರಿಯ ಮೌಲ್ವಿಗಳಾದ ಮಕ್ಸೂದ್ ಇಮ್ರಾನ್ ರಶಾದಿ ಉಪವಾಸ ಆಚರಣೆಯ ವಿಧಿ ವಿಧಾನ ತಿಳಿಸಿದ್ದಾರೆ. 30ದಿನ ಅಂದರೆ ಒಂದು ತಿಂಗಳ ಕಾಲ ಮುಸ್ಲಿಮರು ಉಪವಾಸ ವ್ರತ ಕೈಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ದಾನ ಮಾಡುವುದಕ್ಕೆ ವಿಶೇಷ ಪ್ರಾಮುಖ್ಯವಿದೆ. ಮೂಲ ಸೌಕರ್ಯ  ಇಲ್ಲದವರಿಗೆ ಅದನ್ನು ಕೊಡಮಾಡುವುದು ಈ ತಿಂಗಳ ವಿಶೇಷಗಳಲ್ಲೊಂದು. ಕರಾವಳಿ ಕರ್ನಾಟಕದಲ್ಲಿ ಭಾನುವಾರವೇ ಚಂದ್ರರ್ಶನವಾಗಿರುವುದರಿಂದ ಸೋಮವಾರದಿಂದಲೇ ರಂಜಾನ್ ಮಾಸ ಆರಂಭವಾಗಿದೆ.

click me!