ಕಾಂಗ್ರೆಸ್ ನಾಯಕರ ರಹಸ್ಯ ಸಭೆ ನಂತರ ಇದ್ದಕ್ಕಿದ್ದಂತೆ ಶೆಟ್ಟರ್ ಹೊಗಳಿದ ಡಿಕೆಶಿ!

By Web DeskFirst Published May 6, 2019, 8:54 PM IST
Highlights

ಕುಂದಗೋಳ ಚುನಾವಣಾ ಕಣದಲ್ಲಿ ಸಚಿವ ಡಿಕೆ ಶಿವಕುಮಾರ್ ಬೀಡು ಬಿಟ್ಟಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆಯನ್ನು ಮಾಡಿದ್ದಾರೆ.

ಹುಬ್ಬಳ್ಳಿ[ಮೇ. 06] ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್  ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮಾಡಿದ್ದಾರೆ. ಧಾರವಾಡದ ರಾಯಾಪುರದ ಬಳಿಯಿರುವ ಓಸಿಯನ್ ಪರ್ಲ್ ರೆಸಾರ್ಟ್‌ನಲ್ಲಿ‌ ಸಭೆ ನಡೆಯಿತು.

ಕೈ ಅಭ್ಯರ್ಥಿ ಕುಸುಮಾ ಶಿವಳ್ಳಿ ಗೆಲುವಿಗೆ ರಣತಂತ್ರ ಹೆಣೆಯಲಾಯಿತು. ಯಡಿಯೂರಪ್ಪ ಪ್ರವಾಸದ ಬೆನ್ನಲ್ಲೇ ಚುರುಕುಗೊಂಡ ಡಿಕೆಶಿ ಬಿಜೆಪಿ ಉರುಳಿಸಿದ ದಾಳಕ್ಕೆ ಪ್ರತಿಯಾಗಿ ಯಾವೆಲ್ಲ ಕ್ರಮ ತೆಗೆದುಕೊಳ್ಳಬಹುದು  ಎಂಬುದನ್ನು ಪರಾಮರ್ಶಿಸಿದರು.

ಗನ್ ಮ್ಯಾನ್ ಗಳ ಹೊರಕಳಿಸಿ ಬೆಳಗಾವಿಯಲ್ಲಿ ಡಿಕೆಶಿ ಭೇಟಿ ಮಾಡಿದ ಹೊಸ ಮುಖ

ನಾಗರಾಜ್ ಛಬ್ಬಿ, ಅಲ್ತಾಫ್ ಹಳ್ಳೂರ್, ಅನಿಲ್ ಪಾಟೀಲ್, ಷಣ್ಮುಖ ಶಿವಳ್ಳಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಸಭೆಯ ಬಳಿಕ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ನಾಳೆ ಕುಂದಗೋಳದ‌ ಶಂಭುಲಿಂಗೇಶ್ವರ ದೇವರ ಆಶೀರ್ವಾದ ಪಡೆದು ಪ್ರಚಾರ ಪ್ರಾರಂಭಿಸುತ್ತೇವೆ. ಜಗದೀಶ್ ಶೆಟ್ಟರ್ ಏನು ಟೀಕೆ ಮಾಡಿದ್ರೂ ಸಂತೋಷದಿಂದ ಸ್ವೀಕರಿಸುತ್ತೇನೆ. ಜಗದೀಶ್ ಶೆಟ್ಟರ್ ಕಾರ್ಯದಕ್ಷತೆ, ಪ್ರಾಮಾಣಿಕತೆ ಬಗ್ಗೆ ನಾವು ಯಾವತ್ತೂ ಮಾತಾಡಿಲ್ಲ. ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುವ ಹಾಗೆ ವರ್ತಿಸಿಲ್ಲ ಎಂದು ಹೇಳಿದರು.

ಯಡಿಯೂರಪ್ಪ ಬಿಜೆಪಿ ಬಿಟ್ಟುಹೋಗಿ ಕೆಜೆಪಿ ಮಾಡಿದ್ರು. ಬಿಜೆಪಿ ಪಕ್ಷವನ್ನು ನಿರ್ನಾಮ ಮಾಡುವುದಾಗಿ ಹೇಳಿದ್ರು. ಅದೇ ಯಡಿಯೂರಪ್ಪನವರನ್ನು ಯಾಕೆ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ? ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದಾರೆ? ಜಗದೀಶ್ ಶೆಟ್ಟರ್ ಇದಕ್ಕೆ ಮೊದಲು ಉತ್ತರ ಕೊಡಲಿ ಎಂದರು. ಡಿಕೆಶಿ ಹಣ, ಹೆಂಡದ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವ್ರು ಇನ್ನೊಂದು ಏಜೆನ್ಸಿ ಇದ್ದರೆ ಕರೆದುಕೊಂಡು ಬರಲಿ. ನಾನು ಹಣ, ಹೆಂಡ ತಂದಿದ್ದರೆ ಅದರ ಬಗ್ಗೆಯೂ ತನಿಖೆ ಮಾಡಿಸಲಿ. ಅವರೇ ಎಲ್ಲ ಹೆಂಡವನ್ನು ತೆಗೆದುಕೊಂಡು ಕುಡಿದು ಪಾರ್ಟಿ ಮಾಡಲಿ ಎಂದು, ಶೆಟ್ಟರ್, ಬಿಎಸ್‌ವೈ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಮಾತಿನ ಚಾಟಿ ಬೀಸಿದ್ರು.

 

click me!