ಗುಡ್ ನ್ಯೂಸ್ : ಕೊರೋನಾಗೆ ಶೃಂಗೇರಿಯ ಮೂರು ಔಷಧ

By Kannadaprabha News  |  First Published Apr 24, 2021, 7:41 AM IST

ಕೊರೋನಾ ಹೆಸರು ಹೇಳಿದರೇನೆ ಆತಂಕ ಉಂಟಾಗುವಾಗ ಇಲ್ಲೊಂದು ಗುಡ್ ನ್ಯೂಸ್ ಇದೆ. ಶೃಂಗೇರಿ ಶಾರದಾ ಆಯುರ್ವೇದಿಕ್ ಕೇಂದ್ರವು ಮೂರು ರೀತಿಯ ಔಷಧಗಳನ್ನು ಅಭಿವೃದ್ಧಿಪಡಿಸಿದೆ. 


ಶೃಂಗೇರಿ (ಏ.24):  ಶೃಂಗೇರಿ ಶಾರದಾ ಪೀಠದ ಭಾಗವಾದ ಶ್ರೀ ಶಾರದಾ ಆಯುರ್ವೇದಿಕ್‌ ಚಿಕಿತ್ಸಾಲಯ, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು ಕೊರೋನಾ ಸೋಂಕು ನಿವಾರಣೆಗೆ ಮೂರು ಆಯುರ್ವೇದಿಕ್‌ ಔಷಧಿಗಳನ್ನು ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದೆ.

ಕೊರೋನಾ ವಿರುದ್ಧ ಹೋರಾಡಲು ಜೀವನೀಯಂ, ಓಜೋವರ್ಧಿನಿ ಮತ್ತು ಅಮೃತ ಸಂಜೀವಿನಿ ಎಂಬ ಮಾತ್ರೆಗಳನ್ನು ಸಿದ್ಧಪಡಿಸಿದ್ದು, ಇವುಗಳನ್ನು ಆರಂಭಿಕ ಲಕ್ಷಣಗಳುಳ್ಳ ಮತ್ತು ಲಕ್ಷಣರಹಿತ ಸೋಂಕಿತರಿಗೆ ಔಷಧಿಯಾಗಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಕೋವಿಡ್‌ ನಂತರ ಕಾಣಿಸಿಕೊಳ್ಳುವ ಅನಾರೋಗ್ಯ ಲಕ್ಷಣಗಳಿಂದ ಶೀಘ್ರ ಚೇತರಿಸಿಕೊಳ್ಳಬಹುದು ಎಂದು ಅಧ್ಯಯನ ವರದಿಯಲ್ಲಿ ದೃಢಪಟ್ಟಿದೆ.

Tap to resize

Latest Videos

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌) ನಿರ್ದೇಶಕಿ ಡಾ.ಸಿ.ಆರ್‌. ಜಯಂತಿ ಮೇಲ್ವಿಚಾರಣೆಯಲ್ಲಿ ನಡೆಸಿದ ಪರಿಣಾಮ ವೈದ್ಯಕೀಯ ಪರೀಕ್ಷೆಯಲ್ಲಿ ಶೇ.92ರಷ್ಟುಪರಿಣಾಮಕಾರಿ ಎಂದು ಪ್ರಕಟಗೊಂಡಿದೆ ಎಂದು ಕೇಂದ್ರವು ತಿಳಿಸಿದೆ.

ಜರ್ಮನಿಯಿಂದ 23 ಆಕ್ಸಿಜಿನ್ ಉತ್ಪಾದಕ ಘಟಕ ಏರ್‌ಲಿಫ್ಟ್‌ಗೆ ಮುಂದಾದ ಭಾರತ!

ಶೃಂಗೇರಿ ಮಠದ ಉಭಯ ಸದ್ಗುರುಗಳ ಆಶೀರ್ವಾದ ಮತ್ತು ಕೇಂದ್ರದ ಆಡಳಿತಾಧಿಕಾರಿ ವಿ.ಆರ್‌.ಗೌರೀಶಂಕರ್‌ ಅವರ ಮಾರ್ಗದರ್ಶನದಲ್ಲಿ ಈ ಔಷಧಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಈ ಔಷಧಗಳ ಕ್ಲಿನಿಕಲ್‌ ಟ್ರಯಲ್‌ ಮಾಡಿದ್ದು, ಈ ಮಾತ್ರೆಗಳನ್ನು ಪಡೆಯದೆ ಇರುವವರಿಗಿಂತ ಪಡೆದವರ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬಂದಿದೆ.

ಶೃಂಗೇರಿ ಪೀಠದಲ್ಲಿ ಜಗದ್ಗುರುಗಳ 71ನೇ ವರ್ಧಂತಿ ಉತ್ಸವ .

ಜೀವನೀಯಂ ಉಸಿರಾಟ ತೊಂದರೆಯ ಚಿಕಿತ್ಸೆಗೆ ಪ್ರಬಲ ಪದಾರ್ಥಗಳಿಂದ ತಯಾರಿಸಿದ ಮಾತ್ರೆಗಳಾಗಿದೆ. ಓಜೋವರ್ಧಿನಿ ಉಸಿರಾಟಕ್ಕೆ ಸಂಬಂಧಿಸಿದ ಹಲವಾರು ರೀತಿಯ ರೋಗಗಳ ನಿವಾರಣೆಗೆ ಬಳಕೆಯಾಗಲಿದೆ. ಉರಿಯೂತ ಲಕ್ಷಣಗಳ ಪರಿಣಾಮ ನಿವಾರಣೆಗೆ ಹಾಗೂ ರೋಗನಿರೋಧಕ ಸಮತೋಲನಕ್ಕೆ ಸಹಕಾರಿಯಾಗಿದೆ. ಅದೇ ರೀತಿ ಅಮೃತ ಸಂಜೀವಿನಿ ರೋಗನಿರೋಧಕ ಶಕ್ತಿಯ ಸಮತೋಲನ ಕಾಯ್ದುಕೊಳ್ಳಲು ಶಿಫಾರಸು ಮಾಡಲಾಗಿದೆ ಎಂದು ಶಾರದಾ ಚಿಕಿತ್ಸಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

click me!