* ಹಿಂದೆ ಇಂದಿರಾಗಾಂಧಿ ಸೋತಂತೆ ಬಿಜೆಯೂ ಸೋಲುತ್ತದೆ
* ಬಿಜೆಪಿಗರ ವಿರುದ್ಧ ಹರಿಹಾಯ್ದ ಹಿರೇಮಠ
* ಕೊರೋನಾ ವೇಳೆ ಕುಂಭ ಮೇಳಕ್ಕೆ ಅವಕಾಶ ಕೊಟ್ಟ ಅಮಿತ್ ಶಾವೊಬ್ಬ ಮಹಾನ್ ವ್ಯಕ್ತಿ
ಬಳ್ಳಾರಿ(ಆ.29): ಸೆ.18ರಂದು ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲು ದೆಹಲಿಯಲ್ಲಿ ಸಮಾನ ಮನಸ್ಕರ ಸಭೆ ಮಾಡಲಿದ್ದೇವೆ. ನಾಚಿಕೆ ಇಲ್ಲದ ಈ ಸರ್ಕಾರಕ್ಕೆ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಕಷ್ಟ ಗೊತ್ತಾಗುತ್ತಿಲ್ಲ. ದೇಶದಲ್ಲಿ ಎಮರ್ಜೆನ್ಸಿಗಿಂತ ಗಂಭೀರವಾಗಿದೆ ಪರಿಸ್ಥಿತಿ ಇದೆ ಅಂತ ಮೋದಿ ಸರ್ಕಾರದ ವಿರುದ್ಧ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೊರೋನಾ ನಿರ್ವಹಣೆ ಮಾಡಲು ವಿಫಲವಾದ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ದೇಶದಲ್ಲಿ ಕೊರೋನಾ ನಿರ್ವಹಣೆ ವಿಫಲವೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಲು ಕಾರಣವಾಗಿದೆ ಅಂತ ಹೇಳಿದ್ದಾರೆ.
undefined
ಅರ್ಜಿ ಸಲ್ಲಿಸಿ ಫೀ ಕಟ್ಟದ್ದಕ್ಕೆ ಹೈಕೋರ್ಟ್ ಕ್ಷಮೆಯಾಚಿಸಿದ ಎಸ್.ಆರ್. ಹಿರೇಮಠ
ಚುನಾವಣೆ ಆಯೋಗದ ವಿರುದ್ಧವೂ ಆಕ್ರೋಶ ಹೊರಹಾಕಿದ ಎಸ್.ಆರ್.ಹಿರೇಮಠ, ಕೊರೋನಾ ವೇಳೆ ಕುಂಭ ಮೇಳಕ್ಕೆ ಅವಕಾಶ ಕೊಟ್ಟ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಬೇಕು. ಹಿಂದೆ ಇಂದಿರಾಗಾಂಧಿ ಸೋತಂತೆ ಸೋಲುತ್ತದೆ. ಬಿಜೆಪಿ, ಆರ್‌ಎಸ್‌ಎಸ್ ಸಂಘ ಪರಿವಾರ ಸೇರಿದಂತೆ ಎನ್‌ಡಿಎ ಎಲ್ಲ ಅಂಗಪಕ್ಷಗಳು ಸೋಲಬೇಕು ಎಂದು ಹೇಳಿದ್ದಾರೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ನಾಗೇಂದ್ರ, ಸಚಿವ ಆನಂದ್ ಸಿಂಗ್, ಸತೀಶ್ ಶೈಲ್, ಸುರೇಶ್ ಬಾಬು , ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ ಹಿರೇಮಠ ಅವರು, ಅಕ್ರಮ ಗಣಿಗಾರಿಕೆ ತಡೆಯೋದು ಬಿಟ್ಟು ಅಕ್ರಮ ಮಾಡಿದವರ ಬೆನ್ನಿಗೆ ನಿಂತಿದೆ ಕೇಂದ್ರ ಸರ್ಕಾರ ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.