Chitradurga: ಅಂಗವಿಕಲ ವ್ಯಕ್ತಿಯ ಕೃಷಿ ಸಾಧನೆಗೆ ಶಹಬ್ಬಾಶ್ ಎಂದ ಜನರು!

By Govindaraj SFirst Published Jun 12, 2022, 10:06 PM IST
Highlights

ಕೈ ಕಾಲುಗಳು ಗಟ್ಟಿ ಮುಟ್ಟಾಗಿ ಇರೋ ಎಷ್ಟೋ ಜನರು ಇನ್ನೂ ನಿತ್ಯ ರಸ್ತೆಗಳಲ್ಲಿ ಅಣ್ಣಾ-ಅಪ್ಪ ಅಂತ ಭಿಕ್ಷೆ ಬೇಡ್ತಿದ್ದಾರೆ. ಅಂತದ್ರಲ್ಲಿ ಹುಟ್ಟುತ್ತಲೇ ಅಂಗವಿಕಲನಾಗಿರೋ ಈ ಮನುಷ್ಯ ಇನ್ನೊಬ್ಬರ ಹಂಗಲ್ಲಿ ನಾನು ಬದುಕಬಾರದು ಎಂದು ಛಲ ಬಿಡದೇ ಕೃಷಿ ಕಾಯಕ ಮಾಡಿ ಎಲ್ಲರಿಗೂ ಮಾದರಿ ಆಗಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಜೂ.12): ಕೈ ಕಾಲುಗಳು ಗಟ್ಟಿ ಮುಟ್ಟಾಗಿ ಇರೋ ಎಷ್ಟೋ ಜನರು ಇನ್ನೂ ನಿತ್ಯ ರಸ್ತೆಗಳಲ್ಲಿ ಅಣ್ಣಾ-ಅಪ್ಪ ಅಂತ ಭಿಕ್ಷೆ ಬೇಡ್ತಿದ್ದಾರೆ. ಅಂತದ್ರಲ್ಲಿ ಹುಟ್ಟುತ್ತಲೇ ಅಂಗವಿಕಲನಾಗಿರೋ ಈ ಮನುಷ್ಯ ಇನ್ನೊಬ್ಬರ ಹಂಗಲ್ಲಿ ನಾನು ಬದುಕಬಾರದು ಎಂದು ಛಲ ಬಿಡದೇ ಕೃಷಿ ಕಾಯಕ ಮಾಡಿ ಎಲ್ಲರಿಗೂ ಮಾದರಿ ಆಗಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ. ಹೀಗೆ ಹತ್ತಾರು ಜಾನುವಾರುಗಳಿಗೆ ಮೇವನ್ನು ತಿನ್ನಿಸುತ್ತಾ, ತನ್ನ ನೆಚ್ಚಿನ ಕುದುರೆಯನ್ನು ನೋಡುತ್ತಾ ನಿಂತಿರೋ ವ್ಯಕ್ತಿಯ ಹೆಸರು ಬೋರಯ್ಯ ಅಂತ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದ ನಿವಾಸಿ.

ಕೂಲತಃ ಹುಟ್ಟುವಾಗಲೇ ಪೊಲಿಯೋ ಅಟ್ಯಾಕ್‌ನಿಂದ ಅಂಗವಿಕಲನಾಗಿರೋ ಕಾರಣ ಈತನನ್ನು ಎಲ್ಲರೂ ಕುಂಟು ಬೋರಯ್ಯ ಅಂತ ಕರೆಯುತ್ತಾರೆ. ಎಷ್ಟೋ ಮಂದಿ ತಾನು ಅಂಗವಿಕಲನಾಗಿದ್ದೇನೆ ಎಂದು ನೋವಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಪ್ರಾಣ ಬಿಟ್ಟಿರೋ ಉದಾಹರಣೆಗಳಿವೆ. ಜೊತೆಗೆ ತನ್ನಿಂದ ಏನೂ ಮಾಡಲು ಆಗಲ್ಲ ಎಂದು ಮನೆಯವರಿಗೆ ಹೊರೆಯಾಗಿ ಅವರ ಹಂಗಲ್ಲೇ ಎಷ್ಟೋ ಮಂದಿ ಈಗಲೂ ತನ್ನ ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಅಂಗವಿಕಲ ಬೋರಯ್ಯ ಅವರು ಮಾತ್ರ ನಾನು ಇನ್ನೊಬ್ಬರಿಗೆ ಹೊರೆ ಆಗಲಾರೆ, ನನ್ನ ಸ್ವಂತ ಛಲದಿಂದಲೇ ಬದುಕುತ್ತೀನಿ ಎಂದು ಅಂಗವಿಕಲ ಮಾದರಿಯಾಗಿದ್ದಾನೆ. 

ಜೆಡಿಎಸ್‌ ತೊರೆದು ಬಿಜೆಪಿ ಸೇರಿದ ಜನತಾ ಪರಿವಾರದ ಪ್ರಭಾವಿ ನಾಯಕ

ನೂರಾರು ಜಾನುವಾರುಗಳು, ತನ್ನ ಜಮೀನುಗಳಲ್ಲಿ ವಿಧ ವಿಧವಾದ ಬೆಳೆಗಳು, ಮೆಕ್ಕೆಜೋಳ, ರಾಗಿ, ರೇಷ್ಮೆ ಇನ್ನಿತರ ಬೆಳೆಗಳನ್ನು ಬೆಳೆದು ಎಲ್ಲರಿಗೂ ಮಾದರಿಯಾಗಿದ್ದಾನೆ. ಅಲ್ಲದೇ ಅವರ ಸಾಕಿರೋ ಕುದುರೆ ಅವರಿಗೆ ಪಂಚ ಪ್ರಾಣ ಮೊದಲಿನಿಂದಲೂ ಅವರ ಸವಾರಿ ಈ ಕುದುರೆಯೇ ಆಗಿದೆ ಅಂತಾರೆ ಮಾದರಿ ಅಂಗವಿಕಲ. ಇನ್ನೂ ಬೋರಯ್ಯನ ಈ ಕಾಯಕವನ್ನು ನೋಡಿ ಇಡೀ ಜಿಲ್ಲೆಯ ಜನರೇ ಭೇಷ್ ಎನ್ನುತ್ತಿದ್ದಾರೆ. ಅರೋಗ್ಯವಾಗಿ ಗಟ್ಟಿ ಮುಟ್ಟಾಗಿ, ಕೈ ಕಾಲು ನೆಟ್ಟಗಿರೋ ಸುಮಾರು ಜನರು ತಮ್ಮ ವೈಯಕ್ತಿಕ ಜೀವನಕ್ಕಾಗಿ ರಸ್ತೆ ಮೇಲೆ ಬಂದು ಅಣ್ಣಾ-ಅಪ್ಪ ಅಂತ ಜನರು ಮುಂದೆ ಕೈ ಹೊಡ್ಡು ಭಿಕ್ಷೆ ಬೇಡ್ತಿರೋರಿಗೆ ನಾಚಿಕೆಗೇಡಿನ ಸಂಗತಿ. 

'ನಾಡಿನ ಅಭಿವೃದ್ಧಿ ಮರೆತು ಮಸೀದಿಗಳಲ್ಲಿ ಶಿವಲಿಂಗ ಹುಡುಕಾಟ'

ಈತ ಮೊದಲಿನಿಂದಲೂ ಯಾರ ಹಂಗಿನಲ್ಲೂ ಬದುಕಿಲ್ಲ, ಯಾರಿಗೂ ಮೋಸ ಮಾಡದೇ ತನ್ನ ಪಾಡಿಗೆ ತಾನು ಜೀವನ ಮಾಡಿಕೊಂಡು ಬರ್ತಿದ್ದಾನೆ. ಆತನನ್ನು ನೋಡಿದ್ರೆ ನಮಗೆ ತುಂಬಾ ಸಂತೋಷವಾಗುತ್ತೆ ಅಂತಾರೆ ಸ್ಥಳೀಯರು. ಒಟ್ಟಾರೆಯಾಗಿ ತನ್ನಿಂದ ಪರರಿಗೆ ಯಾವುದೇ ತೊಂದರೆಯಾಗಬಾರದು ಎಂದು ತನ್ನ ಸ್ವಂತ ಶಕ್ತಿಯಿಂದಲೇ ಕೃಷಿ ಕಾಯಕ‌ ಮಾಡುತ್ತಾ ಜಾನುವಾರುಗಳನ್ನು ಸಾಕಾಣಿಕೆ ಮಾಡ್ತಿರೋ ಈ ಬೋರಯ್ಯನ ಪರಿಶ್ರಮಕ್ಕೆ ಹಾಟ್ಸ್ ಆಪ್ ಹೇಳಲೇ‌ ಬೇಕು ಬಿಡ್ರಿ.

click me!