ಮಂಗಳವಾರದಿಂದ 11 ದಿನಗಳ ಕಾಲ ಬನಶಂಕರಿ ದೇವಿಗೆ ಬಿಲ್ವಾರ್ಚನೆ| ಕೊರೋನಾ ವೈರಸ್ ಮಹಾಮಾರಿಯಿಂದ ದೇಶ ಮುಕ್ತವಾಗಲಿ, ಕೊರೋನಾಗೆ ಬೇಗನೆ ಔಷಧಿ ಸಿಗಲಿ ಎಂದು ದೇವಿಯಲ್ಲಿ ಅರ್ಚಕರು ಪ್ರಾರ್ಥಿಸಲಿದ್ದಾರೆ|
ಬಾಗಲಕೋಟೆ(ಜು.22): ಶ್ರಾವಣ ಮಾಸದ ಪವಿತ್ರ ದಿನಗಳಲ್ಲಿ ಕೊರೋನಾ ತೊಲಗಿಸಲು ನಾಡಿನ ಶಕ್ತಿದೇವತೆಯಾಗಿರುವ ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಿಗೆ ಲಕ್ಷ ಬಿಲ್ವಾರ್ಚನೆ ಅರ್ಪಿಸಲು ದೇವಾಲಯದ ಅರ್ಚಕರು ನಿರ್ಧರಿಸಿದ್ದಾರೆ.
ಮಂಗಳವಾರದಿಂದ 11 ದಿನಗಳ ಕಾಲ ಬನಶಂಕರಿ ದೇವಿಗೆ ಬಿಲ್ವಾರ್ಚನೆ ನಡೆಸಲಿದ್ದಾರೆ. ಕೊರೋನಾ ವೈರಸ್ ಮಹಾಮಾರಿಯಿಂದ ದೇಶ ಮುಕ್ತವಾಗಲಿ, ಕೊರೋನಾಗೆ ಬೇಗನೆ ಔಷಧಿ ಸಿಗಲಿ ಎಂದು ದೇವಿಯಲ್ಲಿ ಅರ್ಚಕರು ಪ್ರಾರ್ಥಿಸಲಿದ್ದಾರೆ.
ಹುನಗುಂದ: ಕೊರೋನಾ ಮಧ್ಯೆ ಪ್ರವಾಹ ಬಾರದಿರಲೆಂದು ಸಂಗಮನಾಥನಿಗೆ ವಿಶೇಷ ಪೂಜೆ
ಲೋಕ ಕಲ್ಯಾಣಾರ್ಥವಾಗಿ ದೇವಿಗೆ ವಿಶೇಷ ಪೂಜೆ ಹಾಗೂ ಮಹಾರುದ್ರಾಭಿಷೇಕವನ್ನೂ ಸಹ ಮಾಡಲು ಮುಂದಾಗಿದ್ದಾರೆ.