* ಕರ್ತವ್ಯನಿಷ್ಠೆ ಹಾಗೂ ಸಮಯ ಪ್ರಜ್ಞೆಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದ ಎಸ್‌ಪಿ ಶಿವಪ್ರಕಾಶ್
* ಎರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶ
* ಪೊಲೀಸರ ಕಾರ್ಯಕ್ಷಮತೆ ಹಾಗೂ ಸಮಯ ಪ್ರಜ್ಞೆಗೆ ಸಾರ್ವಜನಕರಿಂದಲೂ ಪ್ರಶಂಸೆ
ಗದಗ(ಜು.10): ಕಳ್ಳತನ ಮಾಡುವ ಇರಾದೆಯಿಂದ ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನ ಹಿಡಿದ ಇಬ್ಬರು ಪೇದೆಗಳಿಗೆ ಗದಗ ಎಸ್‌ಪಿ ಶಿವಪ್ರಕಾಶ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಗದಗ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸಸ್ಟೆಬಲ್, ಪ್ರವೀಣ್ ಶಾಂತಪ್ಪನವರ್, ಅನಿಲ್ ಬನ್ನಿಕೊಪ್ಪ ಅವರ ಕರ್ತವ್ಯನಿಷ್ಠೆ ಹಾಗೂ ಸಮಯ ಪ್ರಜ್ಞೆಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದ ಎಸ್ ಪಿ ಶಿವಪ್ರಕಾಶ್ ದೇವರಾಜು ಪ್ರಶಂಸೆ ಪತ್ರ ನೀಡಿ ಗೌರವಿಸಿದ್ದಾರೆ.
ಜುಲೈ 6 ರಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಜೀವಪ್ಪ ವಡ್ಡರ್ ಎಂಬ ವ್ಯಕ್ತಿ ನಗರದ ಸಾರಿಗೆ ಬಡಾವಣೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡ್ತಿದ್ದ. ಗಸ್ತಿನಲ್ಲಿದ್ದ ಪಿಸಿ ಪ್ರವೀಣ್, ಅನುಮಾನಗೊಂಡು ವಿಚಾರಿಸಿದ್ದಾರೆ. ಜೊತೆಗೆ ಅನಿಲ್ ಬನ್ನಿಕೊಪ್ಪ ಅವರಿಗೂ ವಿಷಯ ತಿಳಿಸಿದ್ದಾರೆ. ಬೈಕ್ ಮೇಲೆ ಬೆಳಗಿನಜಾವ ಓಡಾಡ್ತಿದ್ದ ಜೀವಪ್ಪನ ಬಗ್ಗೆ ಅನುಮಾನ ಮೂಡಿ ವಿಚಾರಿಸಲಾಗಿದೆ. ಈ ವೇಳೆ ಜೀವಪ್ಪನ ಬಳಿ ಪಿಕಾಸಿ, ಕಬ್ಬಿಣದ ರಾಡ್ ಸಿಕ್ಕಿದೆ.. ಯಾವಾಗ ಪೊಲೀಸರು ವಿಚಾರಣೆ ನಡೆಸಿದ್ರೋ ಆಗ ಜೀವಪ್ಪ ಅಲ್ಲಿಂದ ಓಡಿ ಹೋಗೋದಕ್ಕೆ ಪ್ರಯತ್ನಿಸಿದ್ದ.. ಜೀವಪ್ಪ ಬಳಿ ಪಿಕಾಸಿ ರಾಡ್ ಗಳಿದ್ರೂ ಹೆದ್ರದೆ ಇಬ್ಬರೂ ಪೊಲೀಸರು ಬೆನ್ನಟ್ಟಿದ್ರು. ಕಳ್ಳತನಕ್ಕೆ ಹೊಂಚುಹಾಕಿದ್ದ ಖದೀಮನನ್ನ ಸಿಪಿಐ ರವಿಕುಮಾರ್ ಕಪ್ಪತ್ತನವರ್ ಅವರ ಮುಂದೆ ಹಾಜರು ಪಡೆಸಲಾಯ್ತು.
undefined
Gadag; ಸಭೆಯಲ್ಲೇ ಗಳಗಳನೇ ಅತ್ತ ನಗರಸಭೆ ಅಧ್ಯಕ್ಷೆ!
ಎರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶ
ಆರೋಪಿ ಜೀವಪ್ಪ ನೆರೆಯ ಹಾವೇರಿ, ಧಾರವಾಡ ಜಿಲ್ಲೆಯಲ್ಲೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದವನು.. ಕಳೆದ ತಿಂಗಳು 24 ನೇ ತಾರೀಕು ಹುಲಕೋಟೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲೂ ಜೀವಪ್ಪ ಭಾಗಿಯಾಗಿದ್ದ.. ತಲೆ ಮರೆಸಿಕೊಂಡಿದ್ದ ಜೀವಪ್ಪ 6 ನೇ ತಾರೀಕು ರಾತ್ರಿ ಮತ್ತೊಮ್ಮೆ ಫೀಲ್ಡಿಗೆ ಇಳಿದಿದ್ದ. ರಾತ್ರಿ ಕಸ್ತಿನ ಪೊಲೀಸರ ಕೈಗೆ ಸಿಕ್ಕ ಜೀವಪ್ಪನ ವಿಚಾರಿಸಿ ನಂತ್ರ ಆತನಿಂದ ಸುಮಾರು ಎರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಕಳ್ಳತನಕ್ಕೂ ಮುಂಚಿತವಾಗಿ ಖದೀಮನನ್ನ ಅರೆಸ್ಟ್ ಮಾಡಲಾಗಿದೆ ಹಳೆ ಪ್ರಕರಣವೊಂದ್ರಲ್ಲಿ ಕಳ್ಳತನವಾಗಿದ್ದ ಚಿನ್ನಾಭರಣ ಪತ್ತೆ ಹಚ್ಚೋದಕ್ಕೆ ಬೀಟ್ ಪೊಲೀಸರು ಸಹಾಯವಾಗಿದ್ರು. ಪೊಲೀಸರ ಕಾರ್ಯಕ್ಷಮತೆ ಹಾಗೂ ಸಮಯ ಪ್ರಜ್ಞೆಗೆ ಸಾರ್ವಜನಕರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.