ಸಹೋದ್ಯೋಗಿಗಳ ಜೊತೆ ಕಬಡ್ಡಿ ಆಡಿದ ಎಸ್ ಪಿ ರವಿ ಚನ್ನಣ್ಣನವರ್

Suvarna News   | Asianet News
Published : Dec 21, 2019, 12:46 PM ISTUpdated : Dec 21, 2019, 01:13 PM IST
ಸಹೋದ್ಯೋಗಿಗಳ ಜೊತೆ ಕಬಡ್ಡಿ ಆಡಿದ ಎಸ್ ಪಿ ರವಿ ಚನ್ನಣ್ಣನವರ್

ಸಾರಾಂಶ

ಬೆಂಗಳೂರು ಗ್ರಾಮಾಂತರ ವಿಭಾಗದ ಎಸ್ ಪಿ ರವಿ.ಡಿ.ಚನ್ನಣ್ಣನವರ್ ಸಹೋದ್ಯೋಗಿಗಳೊಂದಿಗೆ ಕಬಡ್ಡಿ ಆಟವಾಡಿದ್ದಾರೆ. ಈ ಮೂಲಕ ಸದಾ ಕೆಲಸದ ಒತ್ತಡದಲ್ಲಿದ್ದ ಸಹೋದ್ಯೋಗಿಗಳನ್ನು ಹುರಿದುಂಬಿಸಿದ್ದಾರೆ. 

ನೆಲಮಂಗ (ಡಿ.21) : ಖಡಕ್ ಪೊಲೀಸ್ ಅಧಿಕಾರಿ ಎಂದೇ ಹೆಸರಾಗಿರುವ ರವಿ.ಡಿ.ಚನ್ನಣ್ಣನವರ್, ಸಹೋದ್ಯೋಗಿಗಳೊಂದಿಗೆ ಕಬಡ್ಡಿ ಆಡಿದ್ದಾರೆ. 

ಬೆಂಗಳೂರು ಸಮೀಪದ ಬ್ಯಾಡರಹಳ್ಳಿ ಪೊಲೀಸ್ ಮೈದಾನದಲ್ಲಿ ನಡೆದ ವಾರ್ಷಿಕ ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಬಡ್ಡಿ ಆಟ ಆಡಿದ್ದಾರೆ. 

ಕಾನೂನು ಪಾಲನೆ ಹಾಗೂ ತಮ್ಮ ವೃತ್ತಿ ಜೀವನದಲ್ಲಿ ಖಡಕ್ ಅಧಿಕಾರಿ ಎಂದೇ ಎಲ್ಲೆಡೆ ಹೆಸರಾಗಿರುವ ಜನರ ಅಚ್ಚುಮೆಚ್ಚಿನ ಅಧಿಕಾರಿ ಎಂದೇ ಕರೆಸಿಕೊಳ್ಳುವ  ಪೊಲೀಸ್ ಅಧಿಕಾರಿ ರವಿ ಚನ್ನಣ್ಣನವರ್ ಸಹೋದ್ಯೋಗಿಗಳ ಜೊತೆ ಆಟವಾಡಿ ಆಟಕ್ಕೂ ಸೈ,  ಕಾನೂನು ಪಾಲನೆಗೂ ಸೈ ಎನಿಸಿಕೊಂಡಿದ್ದಾರೆ. 

ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ SP ರವಿ ಚನ್ನಣ್ಣನವರ್..

ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ  ಸದಾ ಕೆಲಸದ ಒತ್ತಡದಲ್ಲಿ ಇರುವ ಸಹೋದ್ಯೋಗಿ ಪೊಲೀಸ್ ಅಧಿಕಾರಿಗಳನ್ನು ಹುರಿದುಂಬಿಸುವ ಮೂಲಕ ರವಿ.ಡಿ ಚನ್ನಣ್ಣನವರ್ ರಂಜಿಸಿದ್ದಾರೆ. 

ದೇಶದಲ್ಲಿ ಪೌರತ್ವಕ್ಕೆ‌ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದು, ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಗ್ಗೆ ಯಾವುದೇ ರೀತಿಯ ಗಲಭೆಗಳು ನಡೆಯುತ್ತಿಲ್ಲ. ಇಲ್ಲಿನ ಎಸ್ ಪಿ ರವಿ.ಡಿ.ಚನ್ನಣ್ಣನವರ್ ಇಲ್ಲಿನ ಎಲ್ಲಾ ಪರಿಸ್ಥಿತಿಗಳನ್ನು ಸೂಕ್ತವಾಗಿ ನಿಭಾಯಿಸುತ್ತಿದ್ದು, ಶಾಂತಿ ನೆಲೆಸುವಂತೆ ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.  

ತಮ್ಮ ಅವಧಿಯಲ್ಲಿ ಹಲವೆಡೆ ಕಾರ್ಯನಿರ್ವಹಿಸುತ್ತಾ ಬಂದಿರುವ ಪೊಲೀಸ್ ಅಧಿಕಾರಿ ರವಿ ಚನ್ನಣ್ಣನವರ್  ಎಲ್ಲೆಡೆಯೂ ಕೂಡ ತಮ್ಮ ಕರ್ತವ್ಯ ನಿಷ್ಠೆಯಿಂದ ಜನಮೆಚ್ಚುಗೆ ಗಳಿಸುತ್ತಲೇ ಬಂದಿದ್ದು, ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ಅವರ ಕಾರ್ಯ ಮುಂದುವರಿದಿದೆ.

"

PREV
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್