'ಸಿಟಿ ರವಿ, ಸುರೇಶ್ ಅಂಗಡಿ ಹೇಳಿಕೆ ಪ್ರಚೋದನಕಾರಿ ಅಲ್ವಾ..? ಅವರ ವಿರುದ್ಧ ಕ್ರಮ ಏಕಿಲ್ಲ'..?

By Suvarna News  |  First Published Dec 21, 2019, 12:43 PM IST

ಸಿ.ಟಿ.ರವಿ, ಸುರೇಶ್ ಅಂಗಡಿ ಹೇಳಿಕೆ ಪ್ರಚೋದನೆ ಅಲ್ವಾ? ಇವರ ಮೇಲೆ ಹಾಗಾದ್ರೆ ಯಾವುದೇ ಕ್ರಮ ಏಕಿಲ್ಲ? ನಾನು ಒಂದು ಬಾರಿ ಹೇಳಿದ್ರೆ ಇವರು ಸಾಕಷ್ಟು ಬಾರಿ ಹೇಳಿದ್ದಾರೆ ಎಂದು ಶಾಸಕ ಯು. ಟಿ. ಖಾದರ್ ಹೇಳಿದ್ದಾರೆ.


ಮಂಗಳೂರು(ಡಿ.21): ನಾನು ವಿದ್ಯಾರ್ಥಿ ನಾಯಕನಾಗಿದ್ದಾಗಲೇ ನನ್ನನ್ನು ದಮನಿಸುವ ಕೆಲಸ ನಡೆದಿದೆ ಎಂದು ಶಾಸಕ ಯು. ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ನಾನು ಶಾಸಕನಾಗುವ ಮುನ್ನವೇ ನನ್ನ ಬೆಳವಣಿಗೆಯನ್ನು ಸಹಿಸುತ್ತಿರಲಿಲ್ಲ ಎಂದಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್, ಸಿ.ಟಿ.ರವಿ, ಸುರೇಶ್ ಅಂಗಡಿ ಹೇಳಿಕೆ ಪ್ರಚೋದನೆ ಅಲ್ವಾ? ಇವರ ಮೇಲೆ ಹಾಗಾದ್ರೆ ಯಾವುದೇ ಕ್ರಮ ಏಕಿಲ್ಲ? ನಾನು ಒಂದು ಬಾರಿ ಹೇಳಿದ್ರೆ ಇವರು ಸಾಕಷ್ಟು ಬಾರಿ ಹೇಳಿದ್ದಾರೆ ಎಂದಿದ್ದಾರೆ.

Tap to resize

Latest Videos

ಹಿಂದೆ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸರು ಮತ್ತೆ ಮಂಗಳೂರಿಗೆ

ಗನ್ ಇರೋದು ಪೂಜೆ ಮಾಡೋಕೆ ಅಲ್ಲ ಅಂತ ಸುರೇಶ್ ಅಂಗಡಿ ಹೇಳ್ತಾರೆ. ಸಿ.ಟಿ‌.ರವಿ ಪಾಕಿಸ್ತಾನಕ್ಕೆ ಕಳುಹಿಸೋ ಮಾತು ಆಡ್ತಾರೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗಲೂ ನನ್ನನ್ನ ದಮನಿಸೋ ಕೆಲಸ ನಡೆದಿತ್ತು ಎಂದು ಅವರು ಆಋಓಪಿಸಿದ್ದಾರೆ.

2006ರಲ್ಲೇ ನನಗೆ ಸಿಮಿ ಸಂಘಟನೆ ಜೊತೆ ಸಂಪರ್ಕ ಇದೆ ಅಂತ ಸದಾನಂದ ಗೌಡರು ಹೇಳಿದ್ದರು. ಆಗ ನಾನು ಶಾಸಕನೂ ಆಗಿರಲಿಲ್ಲ, ಆಗಲೇ ನನ್ಮ ಬೆಳವಣಿಗೆ ಇವರಿಗೆ ಆಗುತ್ತಿರಲಿಲ್ಲ. ಈಗಲೂ ನನ್ನನ್ನ ಬಂಧಿಸಿದರೂ ಪರವಾಗಿಲ್ಲ, ಕ್ಷೇತ್ರದ ಜನ ನನ್ನ ಜೊತೆ ಇದ್ದಾರೆ. ನನ್ನ ಹೇಳಿಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

ಕಬ್ಬಿಣದ ಪೈಪು ಹೇರಿ ಬರುತ್ತಿದ್ದ ಲಾರಿ ಅಡಿಯಲ್ಲಿ ಕಾರು, ಮೂವರು ಸ್ಥಳದಲ್ಲೇ ಸಾವು

click me!