ದೆಹಲಿ ನಿರ್ಭಯಾ ಹತ್ಯೆಯಂತೆಯೇ ಕರ್ನಾಟಕದಲ್ಲಿಯೂ ಸೌಜನ್ಯಳ ಮೇಲೆ ನಡೆದ ಅತ್ಯಾಚಾರ, ಕೊಲೆ ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಈ ಪ್ರಕರಣದಲ್ಲಿ ಬಲವಾದ ಸಂಶಯಗಳು ಕಂಡು ಬರುತ್ತಿವೆ. ರಾಜ್ಯ ಸರ್ಕಾರ ಕೂಡಲೇ ಈ ಪ್ರಕರಣದ ಮರು ತನಿಖೆಗೆ ಕ್ರಮ ಕೈಗೊಳ್ಳುವಂತೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ (ಆ.18): ದೆಹಲಿ ನಿರ್ಭಯಾ ಹತ್ಯೆಯಂತೆಯೇ ಕರ್ನಾಟಕದಲ್ಲಿಯೂ ಸೌಜನ್ಯಳ ಮೇಲೆ ನಡೆದ ಅತ್ಯಾಚಾರ, ಕೊಲೆ ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಈ ಪ್ರಕರಣದಲ್ಲಿ ಬಲವಾದ ಸಂಶಯಗಳು ಕಂಡು ಬರುತ್ತಿವೆ. ರಾಜ್ಯ ಸರ್ಕಾರ ಕೂಡಲೇ ಈ ಪ್ರಕರಣದ ಮರು ತನಿಖೆಗೆ ಕ್ರಮ ಕೈಗೊಳ್ಳುವಂತೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯ ಪ್ರಕರಣದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ಮುರುಡೇಶ್ವರದಲ್ಲಿ 2010ರಲ್ಲಿ ಯಮುನಾ ನಾಯಕ್ ಎಂಬ ಮಹಿಳೆ ಮುಸ್ಲಿಂರ ಮನೆಗೆ ಕೆಲಸಕ್ಕೆ ಹೋಗಿದ್ದಳು. ಈ ವೇಳೆ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ವೆಂಕಟೇಶ ಹರಿಕಾಂತ ಎಂಬುವನನ್ನು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕೋರ್ಚ್ ಯಾವುದೇ ಸಾಕ್ಷಿ ಇಲ್ಲ ಎಂದು ವೆಂಕಟೇಶನನ್ನು ಬಿಡುಗಡೆ ಮಾಡಿತ್ತು. ಇದೇ ರೀತಿ ಸೌಜನ್ಯ ಪ್ರಕರಣದಲ್ಲೂ ಆಗಿದೆ. ಪೊಲೀಸರ ನಿರ್ಲಕ್ಷ್ಯದಿಂದ ಇಂತಹ ಘಟನೆ ಮರುಕಳಿಸುತ್ತಿವೆ ಎಂದರು.
ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ್ದ ಆಯನೂರು ಮಂಜುನಾಥ್ ಈಗ ಕಾಂಗ್ರೆಸ್‌ಗೆ?
ಸಂತೋಷ ನಿರ್ದೋಷಿ ಆಗಿದ್ದಾರೆ. ಆದರೆ, ಇನ್ನುಳಿದವರು ಯಾರು? ಪ್ರಕರಣದ ಪ್ರಮುಖ ಆರೋಪಗಳು ಯಾರು? ಸೌಜನ್ಯ ಮನೆಯಿಂದ ಕಾಲೇಜಿಗೆ ಹೋಗುವಾಗ ಉಪವಾಸದಿಂದ ಹೋಗಿದ್ದಳು. ಆದರೆ, ಪೋಸ್ವ್ ಮಾರ್ಟಂನಲ್ಲಿ ಸೌಜನ್ಯ ಹೊಟ್ಟೆಯಲ್ಲಿ ಅಜೀರ್ಣ ಆಹಾರ ಇತ್ತು ಎಂದು ವರದಿ ಬಂದಿದೆ. ಇದು ಯಾವ ಆಹಾರ, ವಿಷವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಸೌಜನ್ಯ ಶವ ಸಿಕ್ಕಾಗ ಮಳೆಯಲ್ಲಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆದರೆ, ಆಕೆಯ ಪಠ್ಯ ಪುಸ್ತಕ ನೆನದಿರಲಿಲ್ಲ ಈ ಎಲ್ಲ ಅಂಶಗಳು ಸಾಕಷ್ಟುಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಧರ್ಮಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಾವುತ ಮತ್ತು ಮಗಳನ್ನು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಮಾವುತನ ಹೆಂಡತಿ ದೂರು ದಾಖಲಿಸಿದರೆ ಇಲ್ಲಿವರೆಗೂ ಯಾವುದೇ ತನಿಖೆ ಆಗಿಲ್ಲ. ಇದಕ್ಕೆಲ್ಲ ಸರ್ಕಾರದ ನಿರ್ಲಕ್ಷ್ಯ ಧೋರಣೆ ಕಾರಣ. ಸಂತೋಷ ರಾವ್ ಕುಟುಂಬ ಸಾಕಷ್ಟುಸಂಕಷ್ಟದಲ್ಲಿದೆ. ಅವರ ಕುಟುಂಬಕ್ಕೆ .25 ಲಕ್ಷ ಪರಿಹಾರ ನೀಡಬೇಕು. ಸೌಜನ್ಯ ಕುಟುಂಬಸ್ಥರಿಗೆ ಇಂದಿಗೂ ನಿತ್ಯ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಹಾಗಾಗಿ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.
ವಿಶೇಷ ಮಹಿಳಾ ಪಡೆ ರಚಿಸಿ: ಕಳೆದ ವಾರದಲ್ಲಿ ಎರಡು ಆಘಾತಕಾರಿ ಸುದ್ದಿಗಳು ಪ್ರಕಟವಾಗಿದೆ. ರಾಜ್ಯದಲ್ಲಿ 3 ವರ್ಷಗಳಲ್ಲಿ 18-30 ವಯಸ್ಸಿನ 40 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ. 45 ಸಾವಿರ ಅಪ್ರಾಪ್ತ ಯುವತಿಯರು ಗರ್ಭಿಣಿಯಾಗಿದ್ದಾರೆ. ದೇಶದಲ್ಲಿ 13 ಲಕ್ಷ ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ. ಇದು ಆಘಾತಕಾರಿ ಬೆಳವಣಿಗೆ. ಈ ವಿಷಯ ಸರ್ಕಾರ, ಸಮಾಜ, ಸಂಘಟನೆಗಳು ಗಂಭೀರವಾಗಿ ಪರಿಗಣಿಸಲಿ. ಕಾಣೆಯಾದವುಗಳಲ್ಲಿ ಲವ್ ಜಿಹಾದ್ ಪ್ರಕರಣಗಳಿವೆ. ಈ ಕುರಿತು ತನಿಖೆಯಾಗಬೇಕಿದೆ. ಸರ್ಕಾರ ಈ ಕೂಡಲೇ ವಿಶೇಷ ಮಹಿಳಾ ಪಡೆ ರಚಿಸುವ ಮೂಲಕ ಇಂತಹ ಪ್ರಕರಣಗಳಿಗೆ ಮುಕ್ತಿ ಹಾಡುವಂತಾಗಬೇಕಿದೆ ಎಂದರು.
ಕಲುಷಿತ ನೀರು ಸೇವನೆ ಪ್ರಕರಣ: ಕವಾಡಿಗರಹಟ್ಟಿ ಅಭಿವೃದ್ಧಿಗೆ 4 ಕೋಟಿ ಅನುದಾನ ಮಂಜೂರು!
ಬುರುಡೆ ಬಿಡುವ ಬಿಜೆಪಿ: ಹಿಂದೂ ಕಾರ್ಯಕರ್ತರ ರಕ್ತ, ಬೆವರಿನಿಂದ ಅಧಿಕಾರಕ್ಕೆ ಬಂದ ಬಿಜೆಪಿ ಅಧಿಕಾರವಧಿಯಲ್ಲಿ ಏನೂ ಮಾಡಿಲ್ಲ. ಲವ್ ಜಿಹಾದ್ ಕುರಿತು ಬಿಜೆಪಿಗರು ಬರಿ ಬುರುಡೆ ಬಿಡುತ್ತಾರೆ. ಒಂದೇ ಒಂದು ಹುಡುಗಿಯನ್ನು ಲವ್ ಜಿಹಾದ್‌ದಿಂದ ಕಾಪಾಡಿಲ್ಲ. ಸೌಜನ್ಯಗೆ ನ್ಯಾಯ ಸಿಗುವಂತೆ ಒತ್ತಾಯಿಸಿ ಈ ತಿಂಗಳ ಕೊನೆಗೆ ಸೌಜನ್ಯ ತಾಯಿಯ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಈ ವೇಳೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಧಾರವಾಡ ವಿಭಾಗದ ಅಧ್ಯಕ್ಷ ಗದಿಗೆಪ್ಪ ಕುರವತ್ತಿ, ಜಿಲ್ಲಾಧ್ಯಕ್ಷ ಅನ್ನಪ್ಪ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ್, ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಬಸು ದುರ್ಗದ ಸೇರಿದಂತೆ ಹಲವರಿದ್ದರು.