ಜಿಲ್ಲಾ ಪೋಲಿಸ್ ಕಚೇರಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು ಧಾರವಾಡ ಜಿಲ್ಲೆಯ ಪೋಲಿಸ್ ಇಲಾಖೆಗೆ ಸಂಭಂದಪಟ್ಟಂತೆ ಪ್ರಗತಿ ಪರಿಶಿಲನಾ ಸಭೆ ನಡೆಸಿದರು.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಆ.18): ಜಿಲ್ಲಾ ಪೋಲಿಸ್ ಕಚೇರಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು ಧಾರವಾಡ ಜಿಲ್ಲೆಯ ಪೋಲಿಸ್ ಇಲಾಖೆಗೆ ಸಂಭಂದಪಟ್ಟಂತೆ ಪ್ರಗತಿ ಪರಿಶಿಲನಾ ಸಭೆ ನಡೆಸಿದರು. ಗೃಹ ಸಚಿವರಿಗೆ ಧಾರವಾಡ ಎಸ್ಪಿ ಲೋಕೇಶ್ ಜಗಲಾಸರ ಜಿಲ್ಲೆಯ ಎಲ್ಲ ಮಾಹಿತಿಗಳನ್ನ ನೀಡಿದರು. ಧಾರವಾಡ ಎಸ್ಪಿ ಜೊತೆ ಸಭೆ ಮಾಡಿದ್ದೆನೆ. ಬೇರೆ ಜಿಲ್ಲೆಗೆ ಹೋಲಿಸದರೆ ಧಾರವಾಡದಲ್ಲಿ ಅಪರಾಧಗಳು ಕಡಿಮೆ ಆಗಿವೆ ಅಧಿಕಾರಿಗಳು ಜನಸ್ನೇಹಿಯಾಗಿ ಪೋಲಿಸರು ಕೆಲಸ ಮಾಡಬೇಕು ಜನರ ಜೊತೆ ಸಹಬಾಗಿತ್ವದಲ್ಲಿ ಸಹಕರಿಸಬೇಕು ಎಂದು ಸೂಚನೆ ಕೊಟ್ಟಿದ್ದೆನೆ.
ರಾಜ್ಯದಲ್ಲಿ ಡ್ರಗ್ಸ್ ಮೆಲೆ ಯುದ್ದನೆ ಸಾರಿದ್ದೆವೆ. ನಾನು ಅನೇಕ ಬಾರಿ ಘೋಷಣೆ ಮಾಡಿದ್ದೆನೆ. ಬಹಳ ಕಡಿಮೆ ಸಂಖ್ಯೆಯಲ್ಲಿ ಡ್ರಗ್ಸ್ ಬಳಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ 6 ತಿಂಗಳಲ್ಲಿ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಿ ಎಂದು ಸೂಚನೆ ಕೊಟ್ಟಿದ್ದೆನೆ ಎಂದು ಹೇಳಿದರು. ನಮ್ಮಲ್ಲಿ ಸೈಬರ್ ಕ್ರೈಂಗಳ ಬಗ್ಗೆ ಹೆಚ್ಚಿನ ನಿಗಾ ಇಡಲು ಸೂಚನೆ ನೀಡಿದ್ದೆನೆ. ಸಾಮಾಜಿಕ ಜಾಲತಾಣಗಳಲ್ಲಿ ಅಶಾಂತಿ ಉಂಟುಮಾಡುವ ಪೋಸ್ಟ್‌ಗಳನ್ನ ಮಾಡುವವರ ಮೆಲೆ ಹದ್ದಿನ ಕಣ್ಣು ಇಡಲು ಹೇಳಿದ್ದೆನೆ. 545 ಪಿಎಸ್ಐ ನೇಮಕಾತಿ ವಿಚಾರದಲ್ಲಿ ಸರಕಾರ ಕೋರ್ಟ ತೀರ್ಪಿನತ್ತ ಮುಖ ಮಾಡಿದೆ. ಸದ್ಯ ಪ್ರಕರಣ ತನಿಖೆಯಲ್ಲಿ ನಡೆದಿದೆ, ಸ್ಕ್ಯಾಂನಲ್ಲಿ ಸಿಕ್ಕಾಕಿಕ್ಕೊಳ್ಳದೆ ಇರೋರಿಗೆ ನಾವು ಮರು ಪರೀಕ್ಷೆ ಮಾಡುತ್ತೆವೆ ಎಂದು ಹೇಳಿದ್ದೆವೆ.
ಸಾಕು ನಾಯಿ ಕಚ್ಚಿದರೆ ಮಾಲೀಕನಿಗೆ 6 ತಿಂಗಳು ಜೈಲು ಶಿಕ್ಷೆ ಫಿಕ್ಸ್!
ಆದರೆ ಅವರು ಕೋರ್ಟ್‌ಗೆ ಹೋಗಿದ್ದಾರೆ. ಮರು ಪರೀಕ್ಷೆ ಆಗಬಾರದು ಎಂದು ಆದರೆ ಕೋರ್ಟ್ ತೀರ್ಪು ಬಂದ ಮೆಲೆ ನಾವು ಮರು ಪರೀಕ್ಷೆ ಮಾಡುತ್ತೆವೆ. 545 ಪಿಎಸ್ಐ ನೇಮಕಾತಿ ಪ್ರಕರಣ ಇತ್ಯರ್ಥವಾಗುವರೆಗೆ ಯಾವುದೆ ಪಿಎಸ ಐ ನೇಮಕಾತಿ ಆಗಲ್ಲ ಎಂದು ಸ್ಪಷ್ಟಿಕರಣ ವನ್ನ ನೀಡಿದರು. ಇನ್ನು ಹುಬ್ಬಳ್ಳಿ ಗಲಭೆ ಪ್ರಕರಣ ವಿಚಾರವಾಗಿ ಮಾತನಾಡಿದ ಗೃಹ ಸಚಿವರು ಪ್ರಕರಣದ ವಿಚಾರವಾಗಿ ಕೆಲವರು ಶಾಸಕರು ನಮಗೆ ಪತ್ರ ಬರೆದಿದ್ದಾರೆ. ಪ್ರಕರಣದಲ್ಲಿ ಕೆಲವೊಂದಿಷ್ಟು ಅಮಾಯಕರನ್ನ ಬಂದಿಸಿದ್ದಾರೆ ಎಂದು ಪತ್ರ ಬರೆದಿದ್ದಾರೆ. ನಾನು ಇಡಿ ರಾಜ್ಯದಲ್ಲಿ ಪ್ರಕರಣದ ಬಗ್ಗೆ ಮಾಹಿತಿಯನ್ನ ನೋಡಿದ್ದೆನೆ ದೂರು ಕೊಟ್ಟಾಗ ಪೋಲಿಸರು ದೂರು ದಾಖಲು ಮಾಡಿಕೊಳ್ಳುತ್ತಾರೆ.
ರಾತ್ರೋರಾತ್ರಿ ಬಾಲಕಿಯರ ಹಾಸ್ಟೆಲ್ಗೆ ನುಗ್ಗಿದ ಯುವಕ: ಆರೋಪಿಯ ಬಂಧನ
ಶಾಸಕರಿಗೆ ಜನರು ಕೇಳಿಕ್ಕೊಂಡಾಗ ಶಾಸಕರು ನಮಗೆ ಪತ್ರ ಬರೆಯುತ್ತಾರೆ. ನಾನು ಆ ಪತ್ರವನ್ನ ಇಲಾಖೆಗೆ ಬರೆಯುತ್ತೆನೆ ಇಲಾಖೆ ಪರಿಶಿಲನೆ ಮಾಡುತ್ತೆ ಕ‌್ಯಾಬಿನೆಟ್ ಸಬ್ ಕಮಿಟಿ ತಿರ್ಮಾನ ಮಾಡುತ್ತೆ. ಆಮೆಲೆ ಕ‌್ಯಾಬಿನೆಟ್‌ನಲ್ಲಿ ಚರ್ಚೆ ಆಗುತ್ತೆ. ಅಲ್ಲಿ ಇಂತಹ ಪ್ರಕರಣಗಳ ಬಗ್ಗೆ ಇತ್ಯರ್ಥ ಪಡಿಸಿಬೇಕಾಗುತ್ತದೆ. ಸುಮ್ಮನೆ ಯಾರೋ ಹೇಳಿದ್ರೆ ಪ್ರಕರಣ ಇತ್ಯರ್ಥ ಮಾಡಲು ಆಗೋದಿಲ್ಲ. ಬಿಜೆಪಿಯವರು ಕೇವಲ ಆರೋಪ ಮಾಡುತ್ತಿದ್ದಾರೆ. ಆದರೆ ಎಲ್ಲ ಇಲಾಖೆ ನೋಡಿಕೊಳ್ಳುತ್ತೆ ಎಂದು ಹೇಳಿದರು. ಸಭೆಯಲ್ಲಿ ಗ್ರಾಮೀಣ ಭಾಗದ ಎಸ್ಪಿ ಲೋಕೇಶ್ ಜಗಲಾಸರ್, ಐಜಿಪಿ ವಿಕಾಸ್ ಕುಮಾರ, ಮತ್ತುಎಲ್ಲ ಡಿವೈ ಎಸ್ಪಿಗಳು ಮತ್ತುಪಿಐಗಳು ಸಭೆಯಲ್ಲಿ ಬಾಗಿಯಾಗಿದ್ದರು.