Chikkaballapura : ಜಿಲ್ಲೆಯಲ್ಲಿ ಈ ಬಾರಿ ಗುರಿ ಮೀರಿ ಸಿರಿಧಾನ್ಯ ಬಿತ್ತನೆ

By Kannadaprabha News  |  First Published Oct 15, 2022, 5:54 AM IST

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೈ ಹಿಡಿದ ಪರಿಣಾಮ ಈ ಬಾರಿ ಜಿಲ್ಲಾದ್ಯಂತ ನಿರೀಕ್ಷೆಗೂ ಮೀರಿ ಸಿರಿಧಾನ್ಯಗಳು ಬಿತ್ತನೆಯಲ್ಲಿ ಜಿಲ್ಲೆ ಉತ್ತಮ ಪ್ರಗತಿ ತೋರಿದ್ದು ಕೃಷಿ ಇಲಾಖೆ ಹೊಂದಿದ್ದ 156 ಹೆಕ್ಟೇರ್‌ ಗುರಿ ಮೀರಿ 396 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಹಾಗಿದೆ.


 ಚಿಕ್ಕಬಳ್ಳಾಪುರ (ಅ.15):  ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೈ ಹಿಡಿದ ಪರಿಣಾಮ ಈ ಬಾರಿ ಜಿಲ್ಲಾದ್ಯಂತ ನಿರೀಕ್ಷೆಗೂ ಮೀರಿ ಸಿರಿಧಾನ್ಯಗಳು ಬಿತ್ತನೆಯಲ್ಲಿ ಜಿಲ್ಲೆ ಉತ್ತಮ ಪ್ರಗತಿ ತೋರಿದ್ದು ಕೃಷಿ ಇಲಾಖೆ ಹೊಂದಿದ್ದ 156 ಹೆಕ್ಟೇರ್‌ ಗುರಿ ಮೀರಿ 396 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಹಾಗಿದೆ.

ಹಿಂದಿನ ಹಲವು ದಶಕಗಳಿಗೆ ಹೋಲಿಸಿದರೆ ಇತ್ತೀಚಿನ ವರ್ಷಗಳಲ್ಲಿ ಸಿರಿ ಧಾನ್ಯ ಬೆಳೆಯುವರ ಸಂಖ್ಯೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿತ್ತು. ಆದರೆ ಆರೋಗ್ಯ (Health) ಸುಧಾರಣೆಯಲ್ಲಿ ಸಿರಿ ಧಾನ್ಯಗಳ ಮಹತ್ವದ ಬಗ್ಗೆ ಅರಿವು ಆಗಿರುವುದರ ಜೊತರೆಗೆ ಮಾರು ಕಟ್ಟೆಯಲ್ಲಿ (Market)  ಕೂಡ ಉತ್ತಮ ಬೇಡಿಕೆ ಇರುವ ಕಾರಣ ಜಿಲ್ಲೆಯ ರೈತರು (farmers)  ಇದೀಗ ಮತ್ತೆ ಸಿರಿ ಧಾನ್ಯಗಳ ಕಡೆ ಒಲವು ತೋರಿದ್ದಾರೆ.

Tap to resize

Latest Videos

ಕೃಷಿ ಇಲಾಖೆ 2022-23ನೇ ಸಾಲಿನಲ್ಲಿ ಜಿಲ್ಲಾದ್ಯಂತ ಬರಿ 156 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಸಿರಿಧಾನ್ಯಗಳ ಬಿತ್ತನೆ ಗುರಿ ಹೊಂದಿತ್ತು. ಆದರೆ ಮಳೆಯ ಕೃಪೆ ಜೊತೆಗೆ ವಿಪರೀತ ಮಳೆ ಆಗಿದ್ದರಿಂದ ಕೆಲ ಬೆಳೆಗಳ ಬಿತ್ತನೆಗೆ ಹದ ಸಿಗದ ಕಾರಣ ರೈತರು ಸಿರಿಧಾನ್ಯಗಳ ಬಿತ್ತನೆ ಮಾಡಿರುವ ಪರಿಣಾಮ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಬರೋಬ್ಬರಿ 396 ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬಿತ್ತನೆ ಮಾಡಿ ಬರೋಬ್ಬರಿ ಶೇ

253.53 ರಷ್ಟುಪ್ರಗತಿ ಸಾಧಿಸುವ ಮೂಲಕ ಜಿಲ್ಲೆಯ ರೈತರು ಗಮನ ಸೆಳೆದಿದ್ದು ಇನ್ನಷ್ಟುಬಿತ್ತನೆ ಪ್ರಮಾಣ ಹೆಚ್ಚಳ ಆಗುವ ಸಾಧ್ಯತೆ ಇದೆ.

ಬಾಗೇಪಲ್ಲಿ ಪ್ರಥಮ:

ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಯವಲ್ಲಿ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಪ್ರಥಮ ಸ್ಥಾನದಲ್ಲಿದ್ದು ಬಾಗೇಪಲ್ಲಿ ತಾಲೂಕಿನ ಒಂದರಲ್ಲಿಯೆ ಗುರಿ ಇದ್ದ 26 ಹೆಕ್ಟೇರ್‌ ಮೀರಿ ಬರೋಬ್ಬರಿ 310 ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯಗಳ ಬಿತ್ತನೆ ಆಗಿದೆ. ಇನ್ನೂ ನಂತರದ ಸ್ಥಾನದಲ್ಲಿ ಚಿಂತಾಮಣಿ ತಾಲೂಕಿನಲ್ಲಿ ಗುರಿ ಇದ್ದ 36 ಹೆಕ್ಟೇರ್‌ ಪೈಕಿ 76 ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬಿತ್ತನೆಗೊಂಡು ಎರಡು ಸ್ಥಾನದಲ್ಲಿದ್ದರೆ. ಮೂರನೇ ಸ್ಥಾನದಲ್ಲಿ ಕ್ರಮವಾಗಿ ಗೌರಿಬಿದನೂರು ಹಾಗೂ ಗುಡಿಬಂಡೆ ಹಂಚಿಕೆಕೊಂಡಿವೆ, ಗೌರಿಬಿದನೂರಲ್ಲಿ 38 ಹೆಕ್ಟೇರ್‌ ಗುರಿಗೆ 5 ಹೆಕ್ಟರ್‌, ಗುಡಿಬಂಡೆಯಲ್ಲಿ 12 ಹೆಕೇರ್‌ ಗುರಿಗೆ 5 ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ.

ಸಿರಿಧಾನ್ಯಗಳು ಎಂದರೆ ಇವು..

ಹಲವು ಸಂಶೋಧನೆಗಳ ಪ್ರಕಾರ ಆಹಾರದಲ್ಲಿ ಪೌಷ್ಟಿಕತೆ ಕಾಯ್ದುಕೊಳ್ಳುವುದರ ಜೊತೆಗೆ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳ ಜೊತೆಗೆ ಮನುಷ್ಯನಲ್ಲಿ ರೋಗನಿರೋಧ ಶಕ್ತಿ ಹೆಚ್ಚಿಸಿ ಆರೋಗ್ಯ ಸುಧಾರಣೆಯಲ್ಲಿ ಹೆಚ್ಚು ಪ್ರಭಾವ ಬೀರುವ ಸಿರಿಧಾನ್ಯಗಳಾದ ಸಾಮೆ, ಹಾರಕ, ಊದಲು, ಕೊರಲು, ಬರಗು, ನವಣೆ, ಜೋಳ ಮತ್ತಿತರ ಬೆಳೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಜೊತೆಗೆ ಬೆಲೆಯು ಅಧಿಕ.

ಜಿಲ್ಲೆಯಲ್ಲಿ ಈ ಬಾರಿ ಗುರಿ ಮೀರಿ ಸಿರಿಧಾನ್ಯ ಬಿತ್ತನೆ

ಆರೋಗ್ಯ (Health) ಸುಧಾರಣೆಯಲ್ಲಿ ಸಿರಿ ಧಾನ್ಯಗಳ ಮಹತ್ವದ ಬಗ್ಗೆ ಅರಿವು

 ಮಾರು ಕಟ್ಟೆಯಲ್ಲಿ (Market)  ಕೂಡ ಉತ್ತಮ ಬೇಡಿಕೆ ಇರುವ ಕಾರಣ ಜಿಲ್ಲೆಯ ರೈತರು (farmers)  ಇದೀಗ ಮತ್ತೆ ಸಿರಿ ಧಾನ್ಯಗಳ ಕಡೆ ಒಲವು

396 ಹೆಕ್ಟೇರ್‌ಲ್ಲಿ ಬಿತ್ತನೆ

ಬಾಗೇಪಲ್ಲಿ 310 ಹೆಕ್ಟೇರ್‌ನಲ್ಲಿ ಬೆಳೆ

ಹೆಚ್ಚು ಮಳೆಯಾದ ಪರಿಣಾಮ

ಗುರಿ ಮೀರಿ ಸಾಧನೆ

* ಜಿಲ್ಲಾದ್ಯಂತ ಗುರಿ ಮೀರಿ ಸಾಧನೆ

* 156 ಹೆಕ್ಟೇರ್‌ ಮೀರಿ 396 ಹೆಕ್ಟೇರ್‌ಲ್ಲಿ ಬಿತ್ತನೆ

* ಬಾಗೇಪಲ್ಲಿ, ಚಿಂತಾಮಣಿಯಲ್ಲಿ ಹೆಚ್ಚು ಬೆಳೆ

* ಮಳೆ ಕೈ ಹಿಡಿದಕ್ಕೆ ಬಂಪರ್‌ ಬೆಳೆ ನಿರೀಕ್ಷೆ

* ಮಾರುಕಟ್ಟೆಯಲ್ಲಿ ಬೇಡಿಕೆ ಕಾರಣಕ್ಕೆ ಬೆಳೆ ಪ್ರದೇಶ ಹೆಚ್ಚಳ

click me!