Karnataka Politics : 14ರ ನಂತರ 2 ಜಿಲ್ಲೆಗಳಲ್ಲಿ ಬದಲಾಗಲಿದೆ ರಾಜಕೀಯ ಸ್ಥಿತಿ : ಸುಧಾಕರ್‌ ಸ್ಪೋಟಕ ಹೇಳಿಕೆ

By Kannadaprabha News  |  First Published Dec 11, 2021, 7:24 AM IST
  • ವಿಧಾನ ಪರಿಷತ್ತು ಚುನಾವಣೆ ಬಳಿಕ  14ರ ನಂತರ 2 ಜಿಲ್ಲೆಗಳಲ್ಲಿ ಬದಲಾಗಲಿದೆ 
  •  ಜೆಡಿಎಸ್‌, ಕಾಂಗ್ರೆಸ್‌ನಿಂದ ಅನೇಕ ನಾಯಕರು ಬಿಜೆಪಿಗೆ ಬರಲಿದ್ದಾರೆ

 ಚಿಕ್ಕಬಳ್ಳಾಪುರ(ಡಿ.11):  ವಿಧಾನ ಪರಿಷತ್ತು ಚುನಾವಣೆ (MLC Election) ಬಳಿಕ ಚಿಕ್ಕಬಳ್ಳಾಪುರ (Chikkaballapura), ಕೋಲಾರ (Kolar), ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಗಳಲ್ಲಿ ಜೆಡಿಎಸ್‌ (JDS), ಕಾಂಗ್ರೆಸ್‌ನಿಂದ (Congress) ಅನೇಕ ನಾಯಕರು ಬಿಜೆಪಿಗೆ (BJP) ಬರಲಿದ್ದಾರೆಂದು ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸ್ಫೋಟಕ ಹೇಳಿಕೆ ನೀಡಿದ್ದು, ಮೂರು ಜಿಲ್ಲೆಗಳಲ್ಲಿ ರಾಜಕೀಯ ಹೊಸ ಧ್ರುವೀಕರಣಗೊಳ್ಳಲಿದೆಯೆಂದು ಭವಿಷ್ಯ ನುಡಿದ್ದಾರೆ.

ನಗರಸಭೆಯಲ್ಲಿ ಶುಕ್ರವಾರ ವಿಧಾನ ಪರಿಷತ್ತು ಚುನಾವಣೆಯ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ನಾಯಕರು ನಮ್ಮ ಜತೆ ಸೇರಿದ್ದಾರೆ. ಬೇರೆ ಪಕ್ಷದ ನಾಯಕರು ನಮ್ಮ ಜತೆ ಕೈ ಜೋಡಿಸಿದ್ದಾರೆ. ಹಾಗಾಗಿ ರಾಜಕೀಯ ಧ್ರುವೀಕರಣ ದಿಕ್ಕಿನಲ್ಲಿ ಹೋಗುತ್ತಿದೆ. ನಾನು ಕೂಡ ನಿರೀಕ್ಷೆ ಮಾಡಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್‌, ಜೆಡಿಎಸ್‌ ಪ್ರಮುಖರು ಬಿಜೆಪಿ ಸೇರುವ ಬಗ್ಗೆ ಸುಧಾಕರ್‌ (Minister Sudhakar) ಸುಳಿವು ನೀಡಿದರು.

Tap to resize

Latest Videos

undefined

ವಿಧಾನ ಪರಿಷತ್‌ ಚುನಾವಣೆ (MLC Election) ಸ್ಥಳೀಯ ಸಂಸ್ಥೆಗಳ ಸದಸ್ಯರ ಧ್ವನಿಯಾಗಿ ಕೆಲಸ ಮಾಡುವಂತ ವ್ಯಕ್ತಿಯನ್ನು ಆಯ್ಕೆ ಮಾಡುವ ಚುನಾವಣೆ. ಮೇಲ್ಮನೆ ಚುನಾವಣೆಗೆ ವಿಶೇಷವಾಗಿ ಬಹಳ ಪ್ರಾಶಸ್ತ್ಯ ಇದೆ. ಯಾವುದೇ ಬಿಲ್‌ ಪಾಸ್‌(Bill Pass) ಆಗಬೇಕಾದರೆ, ಸಂವಿಧಾನದ ಆಶಯದಂತೆ ಯಾವುದೇ ಬಿಲ್‌ ಕೆಳಮನೆಯಲ್ಲಿ ಪಾಸ್‌ ಆದರೆ, ಬಳಿಕ ಮೇಲ್ಮನೆಯಲ್ಲಿ ಕೂಡ ಅನುಮೋದನೆ ಸಿಗಬೇಕಾಗಲಿದೆ. ಅದಾದರೆ ಮಾತ್ರ ಬಿಲ್‌ ಪಾಸ್‌ ಆಗಲಿದೆ. ಕೆಳಮನೆಯಲ್ಲಿ ಬಿಜೆಪಿಗೆ (BJP)  ಸ್ಪಷ್ಟಬಹುಮತ ಇದೆ. ಆದರೆ, ಮೇಲ್ಮನೆಯಲ್ಲಿ ಬಹುಮತ ಬೇಕಾಗಲಿದೆ. ಇಲ್ಲೂ ಸ್ಪಷ್ಟ ಬಹುಮತಕ್ಕಾಗಿ ಬಿಜೆಪಿ (BJP) ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯದಲ್ಲಿ (Karnataka) ಬಿಜೆಪಿ ಸರ್ಕಾರ ಇದೆ. ಹಾಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ, ಒಳ್ಳೆಯ ಆಡಳಿತ ನೀಡಲು ಸರ್ಕಾರಕ್ಕೆ ಸಾಧ್ಯವಾಗಲಿದೆ ಎಂಬ ಕಾರಣ ಮನವಿ ಮಾಡಿದ್ದೆ. ಎರಡು ಜಿಲ್ಲೆಗಳ ಮತದಾರರು ನನ್ನ ಮನವಿಗೆ ಸ್ಪಂದಿಸಿರುವ ವಿಶ್ವಾಸ ಇದೆ ಎಂದರು.

ನನಗೆ ನಂಬಿಕೆ ಇದೆ. ಬಹಳ ಜನ ಗೇಲಿ ಮಾಡುತ್ತಿದ್ದರು. ಭಾರತೀಯ ಜನತಾ ಪಕ್ಷ ಎರಡು ಜಿಲ್ಲೆಗಳಲ್ಲಿ ನೋಡಿದರೂ ಕಾಣಸಿಗದು. 500 ಮತ ದಾಟುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದರು. ಡಿ.14ರಂದು ಎರಡು ಜಿಲ್ಲೆಯ ಮತದಾರರು ಬಿಜೆಪಿಗೆ 500 ಮತ ಕೊಡ್ತಾರಾ, ಗೆಲ್ಲಿಸುತ್ತಾರಾ ಎಂಬುದನ್ನು ನೋಡಬೇಕಿದೆ. ಆದರೆ ನನಗೆ ವಿಶ್ವಾಸವಿದೆ. ನಮ್ಮ ಅಭ್ಯರ್ಥಿ ಡಾ.ವೇಣುಗೋಪಾಲ್‌ ಬಹುಮತದೊಂದಿಗೆ ಗೆಲ್ಲುತ್ತಾರೆಂದು ಸಚಿವ ಸುಧಾಕರ್‌ ತಿಳಿಸಿದರು.

ಬಿಜೆಪಿಗೆ ಮತ ನೀಡಲು ಕಾಂಗ್ರೆಸ್‌, ಜೆಡಿಎಸ್‌ ಬೆಂಬಲಿತರು ಮುಂದು:

ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷರ್‌ ಚುನಾವಣೆಯಲ್ಲಿ ಬಿಜೆಪಿ (BJP) ಮುಂಚೂಣಿಯಲ್ಲಿದೆ. ಈ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇದೆ. ಮೂರು ಪಕ್ಷದಗಳು ಒಂದೇ ಶ್ರೇಣಿಯಲ್ಲಿ ಹೋಗುತ್ತಿವೆ. ಆದರೆ ಬಿಜೆಪಿ (BJP) ಸ್ವಲ್ಪ ಮಟ್ಟಿಗೆ ಮುಂದಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಬಿ.ಎಸ್‌.ಯಡಿಯೂರಪ್ಪ (BS Yediyurappa), ಈಗಿನ ಸಿಎಂ ಬಸವರಾಜ ಬೊಮ್ಮಾಯಿ (Basvaraja Bommai) ನೇತೃತ್ವದ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯ, ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನವನ್ನು ನೀಡುತ್ತಿದೆ. ಇದರಿಂದ ಗ್ರಾಪಂ ಸದಸ್ಯರು, ಪಪಂ, ನಗರಸಭೆ, ಪುರಸಭೆ ಜೆಡಿಎಸ್‌ (JDS), ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಬಿಜೆಪಿಗೆ ಒಮ್ಮತದಿಂದ ಮತ ನೀಡಲು ಇಷ್ಟಪಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸ ಇದೆ ಎಂದರು.

ಶಾಲೆ ಕಾಲೇಜು ಮುಚ್ಚುವುದಿಲ್ಲ:ಸಚಿವ ಸುಧಾಕರ್‌ ಸ್ಪಷ್ಟನೆ:  ಒಮಿಕ್ರೋನ್‌(omicron) ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ಮಾರ್ಗಸೂಚಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡಿದ್ದೇವೆ. ಮುಖ್ಯಮಂತ್ರಿಗಳು (CM) ಪ್ರತಿ ದಿನ ನಮ್ಮ ಜತೆ, ಹಿರಿಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಕಾಲಕಾಲಕ್ಕೆ ವಿಶೇಷ ಸಭೆ ಮಾಡಿ, ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆಂದು ಸಚಿವ ಸುಧಾಕರ್‌ (Sudhakar) ಇದೇ ವೇಳೆ ತಿಳಿಸಿದರು.

ಮೂರನೇ ಅಲೆ ಅಥವಾ ಒಮಿಕ್ರೋನ್‌ನಿಂದ ಯಾವುದೇ ದೊಡ್ಡ ರೀತಿಯ ಸಾವು, ನೋವು ಆಗುವುದಿಲ್ಲ. ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ, ಎರಡು ಡೋಸ್‌ ಲಸಿಕೆ ಪಡೆಯಬೇಕು. ಅಲ್ಲದೇ ಕೆಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಮಾಸ್ಕ… ಹಾಕುವುದನ್ನು 2022ರ ಫೆಬ್ರವರಿ, ಮಾಚ್‌ರ್‍ವರೆಗೂ ಮುಂದುವರಿಸಬೇಕು. ಶಾಲೆ, ಕಾಲೇಜುಗಳನ್ನು ಬಂದ್‌ ಮಾಡುವ ಪ್ರಸ್ತಾವನೆ, ಆಲೋಚನೆ ಇಲ್ಲ. ಈ ವಿಷಯವಾಗಿ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಯಾರೂ ಮಾಡಬಾರದು. ಕಳೆದ ಎರಡು ವರ್ಷದಿಂದ ಕಲಿಕೆ ಇಲ್ಲವಾಗಿತ್ತು. ಇದರಿಂದ ಅನೇಕರು ಬಾಲ ಕಾರ್ಮಿಕರಾಗಿದ್ದಾರೆ. ಇವೆಲ್ಲವನ್ನು ಮನಗಾಣಬೇಕು. ಈಗ ಶಾಲೆ ಆರಂಭ ಮಾಡಲಾಗಿದೆ. ಆತಂಕ ದಿನಗಳು, ಆತಂಕದ ವಾತಾವರಣ ನಿರ್ಮಾಣವಾದರೆ, ಮೊದಲು ಸರ್ಕಾರ ಜೀವ ಉಳಿಸುವ ಕೆಲಸ ಮಾಡಲಿದೆಂದರು.

ಒಮಿಕ್ರೋನ್‌ ವೈರಸ್‌ ಹರಡುವಿಕೆಯನ್ನು ಮೊದಲು ಯಾವ ರೀತಿ ನಿಯಂತ್ರಣ ಮಾಡಬೇಕು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಿ, ವೈಜ್ಞಾನಿಕ ನೆಲಗಟ್ಟಿನ ಆಧಾರದ ಮೇಲೆ ಕ್ರಮಕ್ಕೆ ಮುಂದಾಗುತ್ತೇವೆ. ವೈರಸ್‌ ಪ್ರಬೇಧದ ಅನಾವರಣ ಯಾವರೀತಿ ಆಗಲಿದೆ ಎಂಬುದನ್ನು ಮನಗಂಡು, ಅದನ್ನು ನಿಯಂತ್ರಿಸಲು ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು.

- ಡಾ.ಕೆ.ಸುಧಾಕರ್‌, ಆರೋಗ್ಯ ಸಚಿವ.

click me!