ಉಪ್ಪಿನಂಗಡಿ (ಡಿ.11): ಕೇರಳದ (Kerala) ಪ್ರಸಿದ್ಧ ಶ್ರೀ ಅನಂತ ಪದ್ಮನಾಭ ದೇವಸ್ಥಾನದ (Temple) ಪ್ರಧಾನ ಅರ್ಚಕರಾಗಿ (Main priest) ದ. ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಮೂಲದ ಪ್ರವೀಣ್ ಯಡಪಡಿತ್ತಾಯ (54) ಅವರು ಬುಧವಾರ ನಿಯುಕ್ತಿಗೊಂಡಿದ್ದಾರೆ.ಕೇರಳದ ಅನಂತ ಪದ್ಮನಾಭ ದೇವಸ್ಥಾನಕ್ಕೂ ದ.ಕ ಜಿಲ್ಲೆಯ ಕೊಕ್ಕಡಕ್ಕೂ ಪರಂಪರಾಗತವಾದ ನಂಟಿದ್ದು, ಇಲ್ಲಿನ ಎಂಟು ಮನೆತನದ ಅರ್ಚಕರು ಈ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುತ್ತಾರೆ. ಪ್ರಸಕ್ತ ಪ್ರಧಾನ ಅರ್ಚಕರಾಗಿ ಕಾರ್ಯನಿರ್ವಹಿಸಲು ನಿಯುಕ್ತಿಗೊಂಡ ಪ್ರವೀಣ್ ಯಡಪಡಿತ್ತಾಯ ಅವರು ಪ್ರಸಕ್ತ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಪಿಲಪಿಂಜ ಎಂಬಲ್ಲಿ ಕೃಷಿಕರಾಗಿ ವೇದಾಧ್ಯಾಯನ - ಪೌರೋಹಿತ್ಯ ಕಾರ್ಯವನ್ನು ನಡೆಸುತ್ತಾ ಬರುತ್ತಿದ್ದರು.
ಅನಂತ ಪದ್ಮನಾಭ ದೇವಾಲಯದ (Temple) ಪರಂಪರೆಯಂತೆ ಪ್ರಧಾನ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿರುವವರು ದೇವಾಲಯದ ನಿರ್ದಿಷ್ಠ ವ್ಯಾಪ್ತಿಯೊಳಗೆ ಮಾತ್ರ ಸಂಚರಿಸಬಹುದಾಗಿದ್ದು, ಹೊರಗೆ ಸಂಚರಿಸುವಂತಿಲ್ಲ. ಪ್ರವೀಣ್ ಯಡಪಡಿತ್ತಾಯ ಅವರ ಅಜ್ಜನೂ ಅನಂತ ಪದ್ಮನಾಭ ದೇವಾಲಯದಲ್ಲಿ ಸಹಾಯಕ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಅವರ ಮೂರನೇ ತಲೆಮಾರಿನ ವ್ಯಕ್ತಿಯೋರ್ವ ಪ್ರಧಾನ ಅರ್ಚಕರಾಗಿ ಆಯ್ಕೆಯಾದಂತಾಗಿದೆ.
undefined
ಯಾರ ವಶ : ನೆಲಮಾಳಿಗೆಯಲ್ಲಿ 1 ಲಕ್ಷ ಕೋಟಿ ರು.ಗೂ ಅಧಿಕ ಮೌಲ್ಯದ ಚಿನ್ನಾಭರಣ ಹೊಂದಿರುವ ಕೇರಳದ ತಿರುವನಂತಪುರದಲ್ಲಿರುವ ಅನಂತಪದ್ಮನಾಭ ದೇವಾಲಯದ ಆಡಳಿತ ಮಂಡಳಿಯ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಲಿದೆ.
ದಕ್ಷಿಣ ಕೇರಳ ಮತ್ತು ತಮಿಳುನಾಡಿನಲ್ಲಿ ಆಡಳಿತ ನಡೆಸಿದ್ದ ತಿರುವಾಂಕೂರು ರಾಜಮನೆತನ 18ನೇ ಶತಮಾನದಲ್ಲಿ ಅನಂತ ಪದ್ಮನಾಭ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿತ್ತು. ಸ್ವಾತಂತ್ರ್ಯಾನಂತರ ಟ್ರಸ್ಟ್ ಮಾಡಿಕೊಂಡು ದೇಗುಲವನ್ನು ರಾಜಮನೆತನದವರೇ ನೋಡಿಕೊಳ್ಳುತ್ತಿದ್ದರು. ಆದರೆ, ದೇಗುಲದ ನಿರ್ವಹಣೆಗೆ ಪ್ರತ್ಯೇಕ ಟ್ರಸ್ಟ್ ರಚಿಸಿ, ದೇಗುಲವನ್ನು ವಶಕ್ಕೆ ಪಡೆಯಬೇಕು 2011ರ ಜ.31ರಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ರಾಜಮನೆತನ ಪ್ರಶ್ನಿಸಿದ್ದು, ಕಳೆದ 9 ವರ್ಷಗಳಿಂದ ದಾವೆ ನಡೆಯುತ್ತಿದೆ. ಏ.10ರಂದು ಸುಪ್ರೀಂಕೋರ್ಟ್ ತೀರ್ಪು ಕಾದಿರಿಸಿತ್ತು.
ಕಟ್ಮಂಡು ಪಶುಪತಿ ಆಸ್ತಿ ಬಹಿರಂಗ, ಎಷ್ಟೆ ಇದ್ರೂ ತಿರುಪತಿ ತಿಮ್ಮಪ್ಪನೇ ಶ್ರೀಮಂತ!
ಅನಂತ ಪದ್ಮನಾಭ ದೇವಸ್ಥಾನದ ನೆಲ ಮಾಳಿಗೆಯಲ್ಲಿ 6 ಗುಪ್ತ ಕೋಣೆಗಳಿವೆ. ಈ ಕೋಣೆಗಳಲ್ಲಿ ಅಪರಿಮಿತವಾದ ಚಿನ್ನಭರಣಗಳನ್ನು ಹೊಂದಿವೆ ಎನ್ನಲಾಗಿದೆ. ಈ ಪೈಕಿ A ಮತ್ತು F ಕೋಣೆಗಳು ಅತಿದೊಡ್ಡ ರೂಂ ಗಳಾಗಿವೆ. ಈಗಾಗಲೇ A ಮತ್ತು B ರೂಂಗಳ ಬಾಗಿಲುಗಳನ್ನು ತೆರೆಯಲಾಗಿದೆ. C ಮತ್ತು F ರೂಂಗಳಲ್ಲಿ ಊಹಿಸಲಾಧ್ಯವಾದಷ್ಟು ಆಭರಣಗಳಿವೆ ಎನ್ನಲಾಗಿದೆ.
ತಿಮ್ಮಪ್ಪನೇ ಶ್ರೀಮಂತ :
ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಕಡ್ಮಂಡು ಪಶುಪತಿನಾಥ ದೇವಾಲಯ ಸೇರಿಕೊಂಡಿದೆ. 9.276 ಕೆಜಿ ಚಿನ್ನ ಜತೆಗೆ 1.3 ಬಿಲಿಯನ್ ರೂ. ಹಣ ಹೊಂದಿದೆ.
ನೇಪಾಳದ ಸರಕಾರ ನೇಮಕ ಮಾಡಿದ್ದ ಸಮಿತಿ ಮೊದಲ ಸಾರಿ ದೇವಾಲಯದ ಆಸ್ತಿ ಮೊತ್ತ ಬಹಿರಂಗ ಮಾಡಿದೆ. ಕಳೆದ ಹತ್ತು ತಿಂಗಳಿನಿಂದ ಸಮಿತಿ ಅಧ್ಯಯನ ನಡೆಸಿತ್ತು.
ಪಶುಪತಿ ಏರಿಯಾ ಡೆವಲಪ್ ಮೆಂಟ್ ಟ್ರಸ್ಟ್ ಮೂಲಕ ದೇವಾಲಯದ ಆಸ್ತಿ ವಿವರ ಲೆಕ್ಕ ಹಾಕಲಾಗಿದ್ದು 1.3 ಬಿಲಿಯನ್ ರೂಪಾಯಿ ದೇವಾಲಯದ ಹೆಸರಿನಲ್ಲಿ ಡಿಪಾಸಿಟ್ ಆಗಿದೆ ಎಂಬ ಅಂಶ ಬಹಿರಂಗ ಮಾಡಲಾಗಿದೆ.
ಚಿನ್ನಾಭರಣ ಕೊಳ್ಳುವ ಮುನ್ನ ಇದನ್ನೆಲ್ಲ ಓದಿ
5ನೇ ಶತಮಾನದ ಕಾಲದಲ್ಲಿ ನಿರ್ಮಾಣವಾದ ದೇವಾಲಯ ಏಷ್ಯಾ ಖಂಡದಲ್ಲಿಯೇ ಶಿವ ಭಕ್ತರ ಪುಣ್ಯ ಕ್ಷೇತ್ರವಾಗಿದೆ. 994.14 ಹೆಕ್ಟೇರ್ ಪ್ರದೇಶ ಸಹ ದೇವಾಲಯದ ಒಡೆತನದಲ್ಲಿದೆ.
ಇದಲ್ಲದೇ ದೇವಾಲಯುದ ಮುಖ್ಯ ಖಜಾನೆಯಲ್ಲಿರುವ ಚಿನ್ನಾಭರಣ, ಬೆಳ್ಳಿ ಆಭರಣ ಮತ್ತು ಹಣವನ್ನು ಸಮಿತಿ ಇನ್ನು ಲೆಕ್ಕ ಮಾಡಿಲ್ಲ. ನೇಪಾಳದ ಸುಪ್ರೀಂ ಕೋರ್ಟ್ ಖಜಾನೆಯನ್ನು ಸದಾ ಬಂದ್ ಮಾಡಿರುವಂತೆ ಹೇಳಿದೆ.
ಏನೇ ಆದರೂ ನಮ್ಮ ತಿರುಪತಿ ತಿರುಮಲನ ಆಸ್ತಿ ಮೀರಿಸಲು ಸಾಧ್ಯವೇ ಇಲ್ಲ ಬಿಡಿ. ಏಪ್ರಿಲ್ ತಿಂಗಳ ವರದಿಯಂತೆ 12 ಸಾವಿರ ಕೋಟಿ ರೂ. ಗಳನ್ನು ತಿಮ್ಮಪ್ಪ ವಿವಿಧ ಬ್ಯಾಂಕ್ ನಲ್ಲಿ ಇಟ್ಟಿದ್ದರೆ 8.7 ಟನ್ ಶುದ್ಧ ಬಂಗಾರವೇ ತಿಮ್ಮಪ್ಪನ ಬಳಿ ಇದೆ.