ಆನೇಕಲ್‌ ವ್ಯಾಪ್ತಿಯಲ್ಲಿ ಬರಲಿದೆ ಖಡಕ್ ಖಾಕಿ ಪಡೆ

By Kannadaprabha NewsFirst Published Jan 25, 2020, 9:45 AM IST
Highlights

ಆನೇಕಲ್ ವ್ಯಾಪ್ತಿಯಲ್ಲಿ ಬರಲಿದೆ ಖಡಕ್ ಪೊಲೀಸ್  ಪಡೆ. ಶೀಘ್ರದಲ್ಲೇ ರಕ್ಷಣೆಗೆ ಆಗಮಿಸಲಿದೆ ಖಾಕಿ ಟೀಂ ಎಂದು ಸ್ವತಃ ರವಿ ಡಿ ಚನ್ನಣ್ಣನವರ್ ಹೇಳಿದ್ದಾರೆ. 

ಆನೇಕಲ್‌ [ಜ.25]: ಆನೇಕಲ್‌ ಠಾಣಾ ವ್ಯಾಪ್ತಿಯಲ್ಲಿ ಯುವ ಜನತೆಯನ್ನು ಒಳಗೊಂಡ ಸಮುದಾಯ ಪೊಲೀಸ್‌ ಓಬವ್ವ ಪಡೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಸಮುದಾಯ ಪೊಲೀಸ್‌ ಮೂಲಕ ಪಟ್ಟಣದಲ್ಲಿ ಯುವಕರ ಪಡೆಯೊಂದಿಗೆ ಗಸ್ತು ತಿರುಗುವ ಮೂಲಕ ಅಪರಾಧಗಳಿಗೆ ಕಡಿವಾಣ ಹಾಕಲು ಸಿಪಿಐ ಮತ್ತು ಪಿಎಸ್‌ಐ ನೇತೃತ್ವದಲ್ಲಿ ಕಾರ್ಯಪಡೆ ಸಜ್ಜಾಗಿದ್ದು, 10-15ದಿನಗಳಲ್ಲಿ ಬಂದೋಬಸ್‌್ತನಲ್ಲಿ ಉತ್ತಮ ಫಲಿತಾಂಶ ಹೊರಬರಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ತಿಳಿಸಿದರು.

ಅವರು ಆನೇಕಲ್‌ನ ಖಾಸಗೀ ಕಲ್ಯಾಣ ಮಂಟಪದಲ್ಲಿ ಆನೇಕಲ್‌ ಮತ್ತು ಬನ್ನೇರುಘಟ್ಟಪೊಲೀಸ್‌ ಠಾಣಾ ವ್ಯಾಪ್ತಿಯ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿದಲ್ಲಿ ಅಪಘಾತ ಹಾಗೂ ಅಪರಾಧ ಪ್ರಕರಣಗಳು ಇಳಿಮುಖವಾಗುತ್ತದೆ ಎಂದರು.

ರವಿ ಚನ್ನಣ್ಣನವರ್ ಡಿಐಜಿ ಆದರೆ ಮಾಡುವ ಮೊದಲ ಕೆಲಸ!

ಪೊಲೀಸ್‌ ಸಿಬ್ಬಂದಿ ಕೊರತೆ ನಿವಾರಣೆಗಾಗಿ ಗ್ರಾಮಾಂತರ ಜಿಲ್ಲೆಯಲ್ಲಿ 94 ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆನೇಕಲ್‌ ಠಾಣೆಗೆ 10 ಹಾಗೂ ಬನ್ನೇರುಘಟ್ಟಠಾಣೆಗೆ 5 ಸೇರಿದಂತೆ 15 ಮಂದಿ ನೂತನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಸಾರ್ವಜನಿಕರು ಮತ್ತು ಪೊಲೀಸರಿಗೆ ರವಿ ಚನ್ನಣ್ಣನವರ್ ಖಡಕ್ ಸೂಚನೆ..

ತಹಸೀಲ್ದಾರ್‌ ಸಿ.ಮಹಾದೇವಯ್ಯ, ಡಿವೈಎಸ್‌ಪಿ ಕೆ.ನಂಜುಂಡೇಗೌಡ, ಸಿಪಿಐಗಳಾದ ಕೃಷ್ಣ, ವಿಶ್ವನಾಥ್‌, ಪಿಎಸ್‌ಐಗಳಾದ ಡಿ.ಮುರಳೀಧರ, ಪ್ರೀತಮ್‌ ವೇದಿಕೆಯಲ್ಲಿದ್ದರು.

click me!