ಚಿಕ್ಕಬಳ್ಳಾಪುರ (ನ.20): ಸತತ ಎರಡು ವಿಧಾನ ಸಭೆಯ (Assembly) ಸಾರ್ವತ್ರಿಕ ಚುನಾವಣೆಗಳಲ್ಲಿ (Election) ಕೈಗೆ ಬಂದಿದ್ದ ಕಾಂಗ್ರೆಸ್ (Congress) ಬಿ.ಫಾರಂ ತಳ್ಳಿ ಸ್ವತಂತ್ರ್ಯವಾಗಿ ಸ್ಪರ್ಧಿಸಿ ಎರಡು ಬಾರಿಯು ಸೋತಿದ್ದ ಜಿಲ್ಲೆಯ ಚಿಂತಾಮಣಿಯ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ (MC Sudhakar) ಮತ್ತೆ ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದು, ಬಿಜೆಪಿ (BJP) ಸೇರುವ ವದಂತಿಗೆ ತೆರೆ ಎಳೆದಿದ್ದಾರೆ. ಗುರುವಾರ ಚಿಂತಾಮಣಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಎಂ.ಸಿ.ಸುಧಾಕರ್, ಕೆಪಿಸಿಸಿ (KPCC) ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಾಗಿದೆ. ಹಿಂದೆ ಪಕ್ಷದಲ್ಲಿ ರಕ್ಷಣೆ ಸಿಗದೇ ಹೋಗಿದ್ದಕ್ಕೆ ನಾನೇ ಕಾಂಗ್ರೆಸ್ ಪಕ್ಷ ತೊರೆದು ಹೋಗಿದ್ದೆ. ಈಗ ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ. ಮುಳಬಾಗಿಲಿನ ಕೊತ್ತನೂರು ಮಂಜುನಾಥ ಹಾಗೂ ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ನಿರ್ಧರಿಸಿದ್ದೇವೆ ಎಂದರು.
ವಿಧಾನ ಪರಿಷತ್ತು ಚುನಾವಣೆಯಲ್ಲಿ (MLC Election) ಕಾಂಗ್ರೆಸ್ ಅಭ್ಯರ್ಥಿ ಯಾರಾದರೇ ಸೂಕ್ತ ಎಂಬುದನ್ನು ನಾವು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ (Kolar - chikkaballapura) ಜಿಲ್ಲೆಯ ಹಾಲಿ, ಮಾಜಿ ಶಾಸಕರು ಒಗ್ಗೂಡಿ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆಂದರು.
ಕೋಲಾರ ಕ್ಷೇತ್ರದ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ (KH Muniyappa) ಅವರೊಂದಿಗೆ ರಾಜಕೀಯ ವೈಮನಸ್ಸು ಬೆಳೆಸಿಕೊಂಡಿದ್ದ ಡಾ.ಎಂ.ಸಿ.ಸುಧಾಕರ್, 2013, 2018 ರಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬಿ ಫಾರಂ ತಿರಸ್ಕರಿಸಿ ಸ್ವಾತಂತ್ರ್ಯವಾಗಿ ಸ್ಪರ್ಧಿಸಿ ಸೋತಿದ್ದರು. ಈಗ ಯಾವುದಾದರೊಂದು ಪಕ್ಷದ ಅಶ್ರಯ ಅವಶ್ಯಕ ಎಂಬುದನ್ನು ಅರಿತಿರುವ ಅವರು ಕಾಂಗ್ರೆಸ್ ಪಕ್ಷವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಕೈ ಹಿಡಿದ ನಟಿ ಭಾವನಾ : ರಾಜಕಾರಣ (Karnataka Politics) ನಿಂತ ನೀರಲ್ಲ.. ಬದಲಾವಣೆ ನಿರಂತರ.. ಹೌದು ನಟಿ ಭಾವನಾ (Bhavana) ಬಿಜೆಪಿಯನ್ನು (BJP) ತೊರೆದು ಕಾಂಗ್ರೆಸ್ (Congress) ಸೇರಿದ್ದಾರೆ. ಭಾವನಾ ತಮ್ಮ ರಾಜಕಾರಣವನ್ನು ಆರಂಭ ಮಾಡಿದ್ದು ಕಾಂಗ್ರೆಸ್ ಪಕ್ಷದಿಂದಲೇ!
ನಟಿ ಭಾವನಾ ಅವರು ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ (Randeep Surjewala) ಶುಭಾಶಯ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ವಿಚಾರವನ್ನು ಹಂಚಿಕೊಂಡಿದ್ದಾರೆ. ನಟಿ ಭಾವನಾ ಅವರು ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ (Randeep Surjewala) ಶುಭಾಶಯ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ವಿಚಾರವನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್‌ನ ಮಾಜಿ ಕಾರ್ಯಕರ್ತೆ ಹಾಗೂ ನಟಿ ಭಾವನಾ ರಾಮಣ್ಣ ಅವರು ನನ್ನನ್ನು ಭೇಟಿಯಾದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸೇರಿ, ಪಕ್ಷಕ್ಕಾಗಿ ದುಡಿಯುವ ಸಂಕಲ್ಪ ಮಾಡಿದ್ದಾರೆ. ಪ್ರತಿಯೊಬ್ಬರ ಸೇರ್ಪಡೆಯೊಂದಿಗೆ ಕಾಂಗ್ರೆಸ್ ಪಕ್ಷವು ಪ್ರಾಬಲ್ಯ ಸಾಧಿಸಲಿದೆ ಎಂದು ಸುರ್ಜೆವಾಲಾ ತಿಳಿಸಿದ್ದಾರೆ.
ಕಾಂಗ್ರಸ್ ನಲ್ಲಿಯೇ ಇದ್ದ ಭಾವನಾ 2018ರ ಮೇ 10ರಂದು ಬಿಜೆಪಿ ಸೇರಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಭಾವನಾ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಇವರಿಗೆ ಟಿಕೆಟ್ ಕೊಡಲು ಕಾಂಗ್ರೆಸ್ ಹೈ ಕಮಾಂಡ್ ನಿರಾಕರಿಸಿತ್ತು. ಕಾಂಗ್ರೆಸ್ ಮೇಲೆ ಮುನಿಸಿಕೊಂಡು ಸಭೆಯಿಂದ ಹೊರ ನಡೆದಿದ್ದರು. ಅದಾದ ಮೇಲೆ ಕೈ ಗೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಿರು. ಬಿಜೆಪಿ ಪರ ಹಲವು ಚುನಾವಣಾ ಕ್ಯಾಂಪೇನ್ ನಲ್ಲಿ ಕಾಣಿಸಿಕೊಂಡು ಮತಯಾಚನೆ ಮಾಡಿದ್ದರು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಭಾವನಾ ಬಾಲಭವನದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು. ಬದಲಾದ ರಾಜಕಾರಣದ ಪರಿಸ್ಥಿತಿ ಅವರನ್ನು ಬಿಜೆಪಿ ಕಡೆ ಮುಖ ಮಾಡುವಂತೆ ಮಾಡಿತ್ತು.
ಈಗ ಭಾವನಾ ಮತ್ತೆ ತಮ್ಮ ಮಾತೃಪಕ್ಷವನ್ನು ಸೇರಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಹೆಸರು ಮಾಡಿದ್ದ ಭಾವನಾ ನಂತರ ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು .