Vijayanagara| ಟಿಬಿ ಡ್ಯಾಂನಿಂದ 40 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

By Kannadaprabha NewsFirst Published Nov 20, 2021, 1:27 PM IST
Highlights

*  ಹೊಸಪೇಟೆಯಲ್ಲಿ 580 ಎಕರೆ ಬೆಳೆಹಾನಿ
*  ಈರುಳ್ಳಿ, ಮೆಕ್ಕೆಜೋಳ ಬೆಳೆದ ರೈತರು ಕಂಗಾಲು
*  ಸಮರ್ಪಕ ಪರಿಹಾರಕ್ಕೆ ಆಗ್ರಹ
 

ಹೊಸಪೇಟೆ(ನ.20): ತುಂಗಭದ್ರಾ ಜಲಾಶಯದ(Tungabhadra Dam) ಒಳಹರಿವಿನಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆ ಜಲಾಶಯದ 12 ಗೇಟ್‌ಗಳನ್ನು ತೆರೆದು 40,882 ಕ್ಯುಸೆಕ್‌ ನೀರು ನದಿಗೆ(River) ಹೊರಬಿಡಲಾಯಿತು. ಜಲಾಶಯದ ಒಳ ಹರಿವು(Inflow) 40 ಸಾವಿರ ಕ್ಯುಸೆಕ್‌ ದಾಟಿರುವ ಹಿನ್ನೆಲೆ ಜಲಾಶಯದ 12 ಗೇಟ್‌ಗಳನ್ನು 2 ಅಡಿ ಎತ್ತರಿಸಿ ಜಲಾಶಯಕ್ಕೆ ನೀರು(Water) ಹರಿಸಲಾಯಿತು. 

ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಒಳಹರಿವಿನಲ್ಲಿ ಭಾರಿ ಏರಿಕೆಯಾಗಿದೆ. ಹೀಗಾಗಿ ತುಂಗಭದ್ರಾ ಮಂಡಳಿ ಅಧಿಕಾರಿಗಳು ಜಲಾಶಯದಿಂದ ನದಿಗೆ ನೀರು ಹರಿಸಿದರು. ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಮಂಡಳಿ ಅಧಿಕಾರಿಗಳು ಸೂಚಿಸಿದ್ದಾರೆ.

ಹೊಸಪೇಟೆಯಲ್ಲಿ 580 ಎಕರೆ ಬೆಳೆಹಾನಿ

ಅಕಾಲಿಕ ಮಳೆಯಿಂದ(Untimely Rain) ಹೊಸಪೇಟೆ(Hosapete) ತಾಲೂಕಿನ ರೈತರು(Farmers) ಕಂಗಾಲಾಗಿದ್ದು, ಕೈಗೆ ಬಂದ ಫಸಲು ಬಾಯಿಗೆ ಬಾರದೇ ಅನ್ನದಾತರು ಪರಿತಪಿಸುವಂತಾಗಿದೆ. ಅಕಾಲಿಕ ಮಳೆಯಿಂದಾಗಿ ಪ್ರಾಥಮಿಕ ಸಮೀಕ್ಷೆಯಲ್ಲಿ 580 ಎಕರೆಯಷ್ಟು ಬೆಳೆಹಾನಿಯಾಗಿದ್ದು(Crop Loss), 3 ಮನೆಗಳು ಬಿದ್ದಿವೆ.

Tomato ಬಾಕ್ಸ್‌ಗೆ 1200 ರೂ. ಬಂಪರ್‌ ಬೆಲೆ, ರೈತರಿಗೆ ಸಂತಸ..!

ತಾಲೂಕಿನಾದ್ಯಂತ ಶುಕ್ರವಾರ ಬೆಳಗಿನ ಜಾವ 3 ಗಂಟೆಯಿಂದ ಮಳೆ ಸುರಿದಿದ್ದು, ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ 2 ಮನೆಗಳು ಹಾಗೂ ನಗರದ ಕೊಂಡನಾಯಕನಹಳ್ಳಿಯಲ್ಲಿ ಒಂದು ಮನೆ ಬಿದ್ದಿದೆ. ಎರಡ್ಮೂರು ದಿನಗಳ ಹಿಂದೆ ಜಿಟಿ ಜಿಟಿ ಮಳೆಗೆ ಕಾಕುಬಾಳು ಗ್ರಾಮದಲ್ಲಿ ಎರಡು ಮನೆಗಳು ಬಿದ್ದಿದ್ದವು. ಒಟ್ಟಾರೆ ತಾಲೂಕಿನಲ್ಲಿ ಐದು ಮನೆಗಳು ಬಿದ್ದಿವೆ.

ಈರುಳ್ಳಿ, ಮೆಕ್ಕೆಜೋಳ ಹಾಳು:

ಶುಕ್ರವಾರ ಬೆಳಗಿನ ಜಾವ ಸುರಿದ ಮಳೆಗೆ ತಾಲೂಕಿನ ಕಲ್ಲಹಳ್ಳಿ ರಾಜಾಪುರ ಭಾಗದಲ್ಲಿ ಬೆಳೆದಿರುವ ನೂರಾರು ಎಕರೆ ಈರುಳ್ಳಿ ಬೆಳೆ ಹಾಳಾಗಿದೆ. ಇನ್ನೂ ಕಟಾವು ಮಾಡಿದ್ದ ಮೆಕ್ಕೆಜೋಳ ಬೆಳೆ ಮೊಳಕೆ ಒಡೆದಿವೆ. ಸತತ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಬೆಳೆಗಳು ಮೊಳಕೆ ಒಡೆದಿವೆ.

ಕಲ್ಲಹಳ್ಳಿ, ರಾಜಾಪುರ ಭಾಗದಲ್ಲಿ 80 ಎಕರೆಗೂ ಅಧಿಕ ಈರುಳ್ಳಿ ಬೆಳೆ ಹಾಳಾಗಿದೆ. ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಭತ್ತದ ಬೆಳೆಯೂ ಹಾಳಾಗಿದೆ. ಇನ್ನೂ ಕಲ್ಲಹಳ್ಳಿ, ರಾಜಾಪುರ ಭಾಗದಲ್ಲಿ ಮೆಕ್ಕೆಜೋಳ ಬೆಳೆ ಮೊಳಕೆ ಒಡೆದಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾಳಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇನ್ನೂ ಮೆಣಸಿನಕಾಯಿ ಬೆಳೆಯೂ ಸಂಪೂರ್ಣ ಹಾಳಾಗಿದೆ. ಮರಿಯಮ್ಮನಹಳ್ಳಿ ಭಾಗದಲ್ಲಿ ಭತ್ತದ(Paddy) ಬೆಳೆಯೂ ಹಾಳಾಗಿದೆ.
ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ತಾಲೂಕಾಡಳಿತ ಸಮೀಕ್ಷೆ(Survey) ನಡೆಸುತ್ತಿದೆ. ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ರೈತರು ಬೆಳೆಗಳು ಕಳೆದುಕೊಂಡು ಕಣ್ಣೀರು ಸುರಿಸುವಂತಾಗಿದೆ.

ಹರಪನಹಳ್ಳಿ: 5 ಮನೆಗಳಿಗೆ ಹಾನಿ

ಹರಪನಹಳ್ಳಿ(Harapanahalli): ಗುರುವಾರ ರಾತ್ರಿಯಿಂದ ಸತತವಾಗಿ ಸುರಿದ ಮಳೆಯಿಂದ ತಾಲೂಕಿನಾದ್ಯಂತ 2.22 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. 5 ಮನೆಗಳು ಭಾಗಶಃ ಕುಸಿದಿವೆ.

ಈ ಕುರಿತು ಮಾಹಿತಿ ನೀಡಿರುವ ತಹಸೀಲ್ದಾರ್‌ ಎಲ್‌.ಎಂ. ನಂದೀಶ ಅವರು, ಭಾರತೀಯ ಹವಾಮಾನ ಇಲಾಖೆ(Indian Meteorological Department) ಮೂನ್ಸೂಚನೆ ಪ್ರಕಾರ ಇನ್ನೂ ಹೆಚ್ಚಿನ ಮಳೆ ಬೀಳುವ ಸಂಭವವಿರುವುದರಿಂದ ತಾಲೂಕು ಆಡಳಿತದ ವತಿಯಿಂದ ತಾಲೂಕು ಕಚೇರಿಯಲ್ಲಿ ಕಂಟ್ರೋಲ್‌ ರೂಂ(Control Room) ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

Karnataka| ಭಾರೀ ಮಳೆಗೆ 7.31 ಲಕ್ಷ ಹೆಕ್ಟೇರ್‌ ಬೆಳೆ ಹಾನಿ

ದೂ. 08398-280262, ತಹಸೀಲ್ದಾರರ ವ್ಯಾಟ್ಸ್‌ಆ್ಯಪ್‌ ಮೊ. 9448056860, ಕಂದಾಯ ನಿರೀಕ್ಷಕರು- ತೆಲಿಗಿ ಹೋಬಳಿ- ಮೊ. 9980602731, ಕಂದಾಯ ನಿರೀಕ್ಷಕರು ಅರಸಿಕೇರಿ ಹೋಬಳಿ ಮೊ. 9620361086 ಈ ಮೊಬೈಲ್‌ ಸಂಖ್ಯೆಗಳಿಗೆ ಮಳೆಯಿಂದ ಹಾನಿಯಾದ ಕುರಿತು ಸಾರ್ವಜನಿಕರು ಮಾಹಿತಿ ನೀಡಬಹುದು ಎಂದರು.

ಶಾಸಕ ಜಿ. ಕರುಣಾಕರರೆಡ್ಡಿಯವರು ಹೇಳಿಕೆ ನೀಡಿದ್ದು, ತಾವರಗೊಂದಿ ಗ್ರಾಮದ ನದಿ ದಡದಲ್ಲಿ ಮೂರು ಸಾವಿರ ಚೀಲಗಳ ಭತ್ತ ನದಿ ನೀರಿನಲ್ಲಿ ಕೊಚ್ಚಿ ಕೊಂಡು ಹೋದ ಕುರಿತು ತಹಸೀಲ್ದಾರರ ಬಳಿ ಮಾತನಾಡಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಎಂದು ಸೂಚಿಸಲಾಗಿದೆ ಎಂದರು.

ಹುಲ್ಲಿಕಟ್ಟಿಯಲ್ಲಿ ಬೆಳೆಹಾನಿ:

ಮಳೆಯಿಂದ ತಾಲೂಕಿನ ಹಾರಕನಾಳು, ಹುಲ್ಲಿಕಟ್ಟಿ ಭಾಗದಲ್ಲಿ ಸಾಕಷ್ಟು ಬೆಳೆಹಾನಿ ಸಂಭವಿಸಿದೆ. ಹುಲ್ಲಿಕಟ್ಟಿ ಗ್ರಾಮದಲ್ಲಿ ವೀರಾಪುರ ಹೊಳಿಯಪ್ಪ ಎಂಬವರ ಹೊಲದಲ್ಲಿ ರಾಗಿ ಬೆಳೆ ಮಳೆ ಹೊಡೆತಕ್ಕೆ ಸಂಪೂರ್ಣ ಹಾಳಾಗಿದೆ.
ಈ ಭಾಗದಲ್ಲಿ ಅಲಸಂದಿ, ತೊಗರಿ, ಟೊಮೇಟೊ ಸೇರಿದಂತೆ ಅನೇಕ ಬೆಳೆಗಳು ಹಾನಿಯಾಗಿವೆ. ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರ ನೆರವಿಗೆ ಸ್ಪಂದಿಸಬೇಕು. ಸಮರ್ಪಕ ಪರಿಹಾರ(compensation) ನೀಡಬೇಕು ಎಂದು ತಾಪಂ ಮಾಜಿ ಸದಸ್ಯ ಹುಲ್ಲಿಕಟ್ಟಿ ಚಂದ್ರಪ್ಪ ಆಗ್ರಹಿಸಿದ್ದಾರೆ.
 

click me!