Corona 3rd Wave: ಕೋವಿಡ್‌ನಿಂದ ಮೃತಪಟ್ಟವರಿಗೆ ಶೀಘ್ರ ಪರಿಹಾರ: ಸಚಿವ ಆಚಾರ್‌

Kannadaprabha News   | Asianet News
Published : Jan 27, 2022, 04:09 AM ISTUpdated : Jan 27, 2022, 04:15 AM IST
Corona 3rd Wave: ಕೋವಿಡ್‌ನಿಂದ ಮೃತಪಟ್ಟವರಿಗೆ ಶೀಘ್ರ ಪರಿಹಾರ: ಸಚಿವ ಆಚಾರ್‌

ಸಾರಾಂಶ

*  ಎಡಿಸಿ ನೇತೃತ್ವದಲ್ಲಿ ಒಂದು ಸಮಿತಿ ರಚನೆ  *  ಸರ್ಕಾರಕ್ಕೆ ವರದಿ ಕಳುಹಿಸಿಕೊಡಲಾಗಿದೆ. *  ವರದಿ ಬಂದ ಮೇಲೆ ಪರಿಹಾರ ಸಿಗಲಿದೆ 

ಧಾರವಾಡ(ಜ.27):  ಜಿಲ್ಲೆಗೊಂದು ಗೋಶಾಲೆ ಕಾರ್ಯಕ್ರಮದಡಿ ಸಮೀಪದ ಮಾದನಭಾವಿ ಗ್ರಾಮದಲ್ಲಿ 10 ಎಕರೆ ಪ್ರದೇಶದಲ್ಲಿ ಗೋಶಾಲೆ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಗಣಿ, ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಹಾಗೂ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ಹೇಳಿದರು. ಇಲ್ಲಿಯ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ 73ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಸಚಿವರು ಭಾಷಣ ಮಾಡಿದರು.

ಈಗಾಗಲೇ ಗೋಶಾಲೆಗೆ 36 ಲಕ್ಷ ಅನುದಾನವನ್ನು ಸರ್ಕಾರ(Government of Karnataka) ಬಿಡುಗಡೆ ಮಾಡಿದೆ. ಹೆಚ್ಚುವರಿಯಾಗಿ  1.5 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಬಂದಿದೆ. ಗೋಶಾಲೆಯ ಕಾಮಗಾರಿ ಶೀಘ್ರವಾಗಿ ಪ್ರಾರಂಭವಾಗಲಿದೆ ಎಂದರು.

Mekedatu project ಮೇಕೆದಾಟು ವಿರೋಧಿಸಲು ತಮಿಳನಾಡಿಗೆ ಹಕ್ಕಿಲ್ಲ, ಡಬಲ್‌ ಇಂಜಿನ್‌ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದು ಕಿಡಿ!

ಕಳೆದ 2 ವರ್ಷಗಳ ಹಿಂದೆ ಕಾಣಿಸಿಕೊಂಡ ಕೋವಿಡ್‌ ವೈರಾಣು ತಡೆಯುವಲ್ಲಿ ಭಾರತ ದೇಶ ಮತ್ತು ಕರ್ನಾಟಕ ರಾಜ್ಯ ಯಶಸ್ವಿ ಕ್ರಮಗಳನ್ನು ಕೈಗೊಂಡಿದೆ. 130 ಕೋಟಿಗೂ ಅ​ಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಜಗತ್ತಿನಲ್ಲಿಯೇ ಬೃಹತ್‌ ಪ್ರಮಾಣದ ಕೋವಿಡ್‌ ಲಸಿಕಾಕರಣ ಕಾರ್ಯಕ್ರಮ ನಡೆಯುತ್ತಿದೆ. ಜಿಲ್ಲೆಯಲ್ಲಿ ಕೊವಿಡ್‌ ಲಸಿಕಾಕರಣ ಕಾರ್ಯವು ಉತ್ತಮವಾಗಿದ್ದು, ಇಲ್ಲಿ ವರೆಗೆ ಸುಮಾರು 15.50 ಲಕ್ಷ ಜನರಿಗೆ ಕೋವಿಡ್‌ ಮೊದಲ ಡೋಸ್‌, 12 ಲಕ್ಷ ಜನರಿಗೆ 2ನೇ ಡೋಸ್‌ ಹಾಗೂ 10 ಸಾವಿರ ಜನರಿಗೆ ಮುನ್ನೆಚ್ಚರಿಕೆ ಡೋಸ್‌ ನೀಡಲಾಗಿದೆ. 15 ರಿಂದ 18 ವಷÜರ್‍ದೊಳಗಿನ ವಯೋಮಾನದವರಿಗೆ 73 ಸಾವಿರ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ನೀಡಿದರು.

ಕೋವಿಡ್‌ನಿಂದ ಮೃತಪಟ್ಟವರಿಗೆ ಶೀಘ್ರ ಪರಿಹಾರ

ಕೋವಿಡ್‌ನಿಂದ ಮೃತಪಟ್ಟವರಿಗೆ(Death) ಶೀಘ್ರ ಪರಿಹಾರ(compensation) ದೊರೆಯುವಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದ ಮೃತಪಟ್ಟವರ ಪರೀಕ್ಷೆ ಅಥವಾ ಅವರ ಹೆಸರು ನೋಂದಣಿ ಕಡೆ ವ್ಯತ್ಯಾಸವಾಗಿರುತ್ತದೆ. ಹೀಗಾಗಿ, ಪರಿಹಾರ ದೊರೆಯುವುದು ಸ್ವಲ್ಪ ವಿಳಂಬವಾಗಲು ಕಾರಣವಾಗಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಎಡಿಸಿ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಲಾಗಿದೆ. ಸರ್ಕಾರಕ್ಕೆ 518 ಜನರ ವರದಿ ಕಳುಹಿಸಿಕೊಡಲಾಗಿದೆ. ಅಲ್ಲಿಂದ ವರದಿ(Report) ಬಂದ ಮೇಲೆ ಪರಿಹಾರ ಸಿಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಪ್ರತಿದಿನ 5ರಿಂದ 6 ಸಾವಿರ ಕೋವಿಡ್‌ ಪರೀಕ್ಷೆಗಳು(Covid Test) ನಡೆಯುತ್ತಿವೆ. ವಾರದಲ್ಲಿ 7882 ಪಾಸಿಟಿವ್‌ ಬಂದಿವೆ. ಶೇ. 20ರಷ್ಟು ಪಾಸಿಟಿವ್‌ ದರ ಕಂಡು ಬಂದಿದೆ. ಹೆಚ್ಚು ಜನ ಹೋಂ ಐಸೊಲೆಷನ್‌ನಲ್ಲಿದ್ದಾರೆ. ಅವರಿಗೆ ಮನೆಗೆ ಔಷಧಿ ಕೊಡುವ ಕೆಲಸ ನಡೆದಿದೆ ಎಂದ ಅವರು, ಈ ಹಿಂದೆ ರಾಜ್ಯದಲ್ಲಿ ಆಕ್ಸಿಜನ್‌ ಸಮಸ್ಯೆಯನ್ನು ತುಂಬಾ ಎದುರಿಸಿದ್ದೇವೆ. ಆದರೆ, ಈ ಬಾರಿ ಎಲ್ಲ ಕಡೆ ಆಕ್ಸಿಜನ್‌ ವ್ಯವಸ್ಥೆ ಮಾಡಲಾಗಿದೆ.

Karnataka Politics: ಡಬಲ್‌ ಇಂಜಿನ್‌ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ(Basavaraj Bommai) ನೇತೃತ್ವದಲ್ಲಿ ಕೋವಿಡ್‌ ನಿರ್ವಹಣೆ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ರಾಜ್ಯದಲ್ಲಿ 3 ಸಾವಿರ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಜಾತ್ರೆಗಳು ನಡೆಯುವ ಸಮಯವಾಗಿದ್ದರಿಂದ ಅನುಮತಿ ನೀಡಲಾಗಿರುವುದಿಲ್ಲ. ಗ್ರಾಮೀಣ ಭಾಗದಲ್ಲಿ ಹೆಚ್ಚು ಜನ ಸೇರುವುದು ಸಾಮಾನ್ಯ. ಒಬ್ಬರಿಂದ ಮತ್ತೊಬ್ಬರಿಗೆ ಕೋವಿಡ್‌ ಹರಡುತ್ತಿದೆ. ಹೀಗಾಗಿ ಪೊಲೀಸ್‌(Police) ಇಲಾಖೆಗೆ ಮಾಸ್ಕ್‌ ಬಗ್ಗೆ ಜನರಿಗೆ ತಿಳಿ ಹೇಳಲು ಸೂಚನೆ ನೀಡಲಾಗಿದೆ. ಪ್ರಸಂಗ ಬಂದರೆ ದಂಡ ಹಾಕಬಹುದು. ನಾವು ಕೋವಿಡ್‌ ಪರಿಣಾಮ ಅನುಭವಿಸಿದ ನಂತರವೂ ಜಾಗೃತವಾಗಬೇಕು ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಹೀಗಾಗಿ, ಸಭೆಗೆ ಆಗಮಿಸಿಲ್ಲ. ಜಿಲ್ಲಾಧಿಕಾರಿಗಳು ಅವರಿಗೆ ಮಾಹಿತಿ ಕೊಟ್ಟಿರುತ್ತಾರೆ ಎಂದ ಅವರು, ಆಯಾ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ಕೊಟ್ಡಿದ್ದರೆ ಚೆನ್ನಾಗಿರುತಿತ್ತು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ರಾಜ್ಯದ ಹಿರಿಯ ನಾಯಕರು. ಹೀಗಾದರೆ ಚೆನ್ನಾಗಿರುತಿತ್ತು ಎಂದು ಹೇಳಿರಬಹುದು ಎಂದರು.
 

PREV
Read more Articles on
click me!

Recommended Stories

ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!