Republic Day 2022: ತಲೆಕೆಳಗಾಗಿ ರಾಷ್ಟ್ರ ಧ್ವಜ ಹಾರಿಸಿದ ಸಚಿವ ಅಹ್ಮದ್

By Suvarna NewsFirst Published Jan 26, 2022, 2:39 PM IST
Highlights

ಕೇರಳದ ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ಎಡವಟ್ಟಿನಿಂದ ರಾಷ್ಟ್ರಧ್ವಜವನ್ನು ತಲೆಗೆಳಗಾಗಿ ಹಾರಿಸಿದ್ದಾರೆ. ರಾಷ್ಟ್ರಗೀತೆ ಮುಗಿಯುವವರೆಗೂ ಧ್ವಜ ತಲೆಗೆಳಗಾಗಿಯೇ ಇತ್ತು.=

ಮಂಗಳೂರು(ಜ.26): ಕೇರಳದ ಕಾಸರಗೋಡಿನಲ್ಲಿ ತಲೆಕೆಳಗಾಗಿ ರಾಷ್ಟ್ರ ಧ್ವಜ ಹಾರಿಸಿದ ಸಚಿವ ಅಹ್ಮದ್ ದೇವರ್‌ಕೋವಿಲ್ ವಿವಾದಕ್ಕೆ ಗುರಿಯಾಗಿದ್ದಾರೆ. ಕೇರಳದ(Kerala) ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ಅವರು ಗಣರಾಜ್ಯೋತ್ಸವ ಸಂದರ್ಭ ಧ್ವಜಾರೋಹಣ ಮಾಡಿದ್ದು, ಇದೇ ಸಂದರ್ಭ ಎಡವಟ್ಟು ಮಾಡಿದ್ದಾರೆ. ಕಾಸರಗೋಡು ಜಿಲ್ಲಾಡಳಿತದ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವರು(Minister) ಅತಿಥಿಗಳಾಗಿ ಧ್ವಜಾರೋಹಣ ನೆರವೇರಿಸಿದ್ದರು. ಕಾಸರಗೋಡಿನ‌ ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಘಟನೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಧ್ವಜ ಏರಿಸಿ ರಾಷ್ಟ್ರಗೀತೆ ಮುಗಿಯುವವರೆಗೂ ರಾಷ್ಟ್ರ ಧ್ವಜ ತಲೆಗೆಳಗಾಗಿಯೇ ಇತ್ತು. ವ್ಯಕ್ತಿಯೋರ್ವರು ಇದನ್ನು ಗಮನಿಸಿ ತಕ್ಷಣ ವಿಷಯ ತಿಳಿಸಿದ ಬಳಿಕ ಧ್ವಜ ಕೆಳಗಿಳಿಸಿ ಮತ್ತೆ ಹಾರಾಟ ನಡೆಸಿದ್ದಾರೆ. ಘಟನೆ ಕುರಿತು ಎಡಿಎಂ ( ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್) ತನಿಖೆಗೆ ಸೂಚಿಸಿದ್ದಾರೆ.

ಮಣಿಪುರಿ ಶಾಲ್‌ ಉತ್ತರಾಖಂಡ್ ಟೋಪಿ... ಪ್ರಧಾನಿ ಧಿರಿಸಿನ ಬಗ್ಗೆ ಭಾರಿ ಚರ್ಚೆ

ಕಳೆದ ವರ್ಷ ಕೇರಳದಲ್ಲಿ ಇದೇ ರೀತಿಯ ಇನ್ನೊಂದು ಘಟನೆ ನಡೆದಿತ್ತು. ಕೇರಳದ ಬಿಜೆಪಿ ಅಧ್ಯಕ್ಷರಾಗಿದ್ದ ಕೆ ಸುರೇಂದ್ರನ್ ಅವರು ತಲೆಗೆಳಗಾಗಿ ಧ್ವಜ ಹಾರಿಸಿದ ನಂತರ ವಿವಾದಕ್ಕೆ ಗುರಿಯಾಗಿದ್ದರು. ಕೇರಳ ಬಿಜೆಪಿ ಸ್ಟೇಟ್ ಕಮಿಟಿ ಆಫೀಸ್‌ನಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭಅವರು ತಲೆಗೆಳಗಾಗಿ ಧ್ವಜಾರೋಹಣ ಮಾಡಿದ್ದರು. ಸುರೇಂದ್ರನ್ ಅವರು ಧ್ವಜಾರೋಹಣ ಮಾಡಿ ಧ್ವಜ ಅರ್ಧಕ್ಕೆ ತಲುಪಿತ್ತು. ತಕ್ಷಣ ಧ್ವಜ ತಲೆಗೆಳಾಗಿದ್ದದ್ದು ಗಮನಿಸಿ ಮತ್ತೆ ಕೆಳಗೆಳೆದು ಸರಿ ಮಾಡಿ ಹಾರಿಸಲಾಗಿದೆ. 

click me!