ಬೆಂಗಳೂರು (ಮೆ.13): ಮಹಾಮಾರಿ ಕೊರೋನಾ ವೈರಸ್ ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿದ್ದು ಸಾವು ನೋವಿಗೆ ಕಾರಣವಾಗುತ್ತಿದೆ. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ತಡರಾತ್ರಿ ಆಕ್ಸಿಜನ್ ಲೀಕೆಜ್ ಆಗಿದ್ದು, ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಶ್ರೇಯಸ್ ಆಸ್ಪತ್ರೆಯ ಆಕ್ಸಿಜನ್ ಫ್ಲಾಂಟ್ ನಲ್ಲಿ ಬುಧವಾರ ತಡರಾತ್ರಿ ಆಕ್ಸಿಜನ್ ಲೀಕೇಜ್ ಆಗಿತ್ತು. ಈ ವೇಳೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಿಸಿದರೆ, ಸೋನುಸೂದ್ ಚಾರಿಟೆಬಲ್ ಟ್ರಸ್ಟ್ ರೋಗಿಗಳ ಪ್ರಾಣ ಉಳಿಸಿದೆ.
ಕೊರೋನಾ ಫೈಟ್: ಸೋನು ಸೂದ್‌ಗೆ ಸಾಥ್ ಕೊಟ್ಟ ಸೈಫ್ ಮಗಳು ..
ಶ್ರೇಯಸ್ ಆಸ್ಪತ್ರೆಯ ಐಸಿಯುನಲ್ಲಿ 30 ಕ್ಕೂ ಹೆಚ್ಚು ರೋಗಿಗಳಿದ್ದು, ಈ ವೇಳೆ ದಿಢೀರನೆ ಆಕ್ಸಿಜನ್ ಕೊರತೆ ಕಂಡು ಬಮದಿದೆ. ಈ ಬಗ್ಗೆ ಮಾಹಿತಿ ರವಾನೆಯಾಗುತ್ತಿದ್ದಂತೆ ಎಸಿಪಿ ರೀನಾ ಸುವರ್ಣ ಹಾಗೂ ಸೋನು ಸೂದ್ ಚಾರಿಟೆಬಲ್ ಟ್ರಸ್ಟ್ ಸ್ಥಳಕ್ಕೆ ಆಗಮಿಸಿದೆ.
ರೈನಾ ಕುಟುಂಬಕ್ಕೆ 10 ನಿಮಿಷದೊಳಗೆ ಆಕ್ಸಿಜನ್ ಸಿಲಿಂಡರ್ ಒದಗಿಸಿದ ಸೋನು ಸೂದ್ ..
ರಾತ್ರಿ 12 ಗಂಟೆಗೆ ಮಹಾಲಕ್ಷ್ಮಿ ಲೇಔಟ್ ನ ಶ್ರೇಯಸ್ ಆಸ್ಪತ್ರೆಗೆ ಸೋನುಸೂದ್ ಚಾರಿಟೆಬಲ್ ಟ್ರಸ್ಟ್ ಕೂಡಲೇ 6 ಜಂಬೋ ಸಿಲಿಂಡರ್ ತಂದು ಆಸ್ಪತ್ರೆಗೆ ಕೊಟ್ಟು ರೋಗಿಗಳ ಪ್ರಾಣ ಉಳಿಸಿದೆ.
ಅಲ್ಲದೇ ಲೀಕೇಜ್ ಆಗಿದ್ದ ಆಕ್ಸಿಜನ್ ಫ್ಲಾಂಟ್ ರಿಪೇರಿ ಮಾಡಲೂ ಸೋನುಸೂದ್ ಚಾರಿಟೆಬಲ್ ಟ್ರಸ್ಟ್ ನೆರವಾಗಿ ಮಾನವೀಯತೆ ಮೆರೆದಿದೆ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona