ಆದಿಚುಂಚನಗಿರಿ ಶಾಖಾಮಠದ ಸ್ವಾಮೀಜಿ ಕೋವಿಡ್‌ಗೆ ಬಲಿ

Suvarna News   | Asianet News
Published : May 13, 2021, 02:42 PM IST
ಆದಿಚುಂಚನಗಿರಿ ಶಾಖಾಮಠದ ಸ್ವಾಮೀಜಿ ಕೋವಿಡ್‌ಗೆ ಬಲಿ

ಸಾರಾಂಶ

ಆದಿಚುಂಚನಗಿರಿ ಶಾಖಾ ಮಠದ  ಶಿವಾನಂದ ಸ್ವಾಮೀಜಿ ಕೊರೋನಾಗೆ ಬಲಿ ಚಿಕಿತ್ಸೆ ಫಲಿಸದೆ ಇಂದು ಶಿವಾನಂದ ಸ್ವಾಮೀಜಿ ನಿಧನ  25 ವರ್ಷಗಳಿಂದ  ಆದಿಚುಂಚನಗಿರಿ ಶಾಖಾ ಮಠದಲ್ಲಿ ಸ್ವಾಮೀಜಿಯಾಗಿದ್ದರು

ಮೈಸೂರು (ಮೇ.13): ಮೈಸೂರು ಜಿಲ್ಲೆ ಕೆ.ಆರ್‌ ನಗರದ ಚುಂಚನಕಟ್ಟೆಯ ಆದಿಚುಂಚನಗಿರಿ ಶಾಖಾ ಮಠದ  ಶಿವಾನಂದ ಸ್ವಾಮೀಜಿ ಕೊರೋನಾಗೆ ಬಲಿಯಾಗಿದ್ದಾರೆ. 

ಎರಡು ದಿನದ ಹಿಂದೆ ಕೊರೋನಾ ಸೋಂಕು ತಗುಲಿದ್ದು, ಚಿಕಿತ್ಸೆ ಫಲಿಸದೆ ಇಂದು ಶಿವಾನಂದ ಸ್ವಾಮೀಜಿ (62) ಮೃತಪಟ್ಟಿದ್ದಾರೆ. 

ಕಳೆದ ಎರಡು ದಿನದ ಹಿಂದೆ ಸ್ವಾಮೀಜಿಯನ್ನು ಮಂಡ್ಯ ಜಿಲ್ಲೆಯ ನಾಗಮಂಗಲದ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಂಕು ಉಲ್ಬಣಗೊಂಡು ಸ್ವಾಮೀಜಿ ನಿಧನರಾಗಿದ್ದಾರೆ. 

ಕಳೆದ 25 ವರ್ಷಗಳಿಂದ  ಆದಿಚುಂಚನಗಿರಿ ಶಾಖಾ ಮಠದಲ್ಲಿ ಸ್ವಾಮೀಜಿಯಾಗಿದ್ದರು. 

ಪಿಪಿಇ ಕಿಟ್ ಧರಿಸಿ ಕೊರೋನಾ ಸೋಂಕಿತರ ಭೇಟಿ ಮಾಡಿದ ಆದಿಚುಂಚನಗಿರಿ ಸ್ವಾಮೀಜಿ ...

ವಿವಿಧ ವಿದ್ಯಾಸಂಸ್ಥೆಗಳು ಸೇರಿದಂತೆ ಮಠದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸ್ವಾಮೀಜಿ ಮಾಡಿದ್ದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು