ಲಾಕ್‌ಡೌನ್‌ ಎಫೆಕ್ಟ್‌: ಮೂರು ಕಿಮೀ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ

By Kannadaprabha News  |  First Published May 13, 2021, 2:41 PM IST

* ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದ ಘಟನೆ
* ಲಾಕ್‌ಡೌನ್‌ನಿಂದ ಸಾರಿಗೆ ಸಂಚಾರ ಸ್ಥಗಿತ 
* ತಾಳಿಕೋಟೆಯ ಸಿದ್ದಬಸವ ಆಸ್ಪತ್ರೆಯಲ್ಲಿ ಚಿಕಿತ್ಸೆ


ತಾಳಿಕೋಟೆ(ಮೇ.13):  ಸೆಮಿ ಲಾಕ್‌ಡೌನ್‌ನಿಂದಾಗಿ ಸಾರಿಗೆ ಸಂಚಾರ ಇಲ್ಲದ್ದಕ್ಕೆ ಕಾಲು ಮುರಿದುಕೊಂಡಿದ್ದ ವ್ಯಕ್ತಿಯನ್ನು ಆತನ ಸಹೋದರನೇ ಬರೋಬ್ಬರಿ ಮೂರು ಕಿಮೀ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ ಘಟನೆ ಬುಧವಾರ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.

ತಾಳಿಕೋಟೆ ತಾಲೂಕಿನ ಹರನಾಳ ಗ್ರಾಮದ ಶಿವಪ್ಪ ಅಂಬಳನೂರ ಎಂಬಾತನನ್ನೇ ಆತನ ಸಹೋದರ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾನೆ. ಹರನಾಳದಲ್ಲಿ ಬಿದ್ದು ಶಿವಪ್ಪ ಕಾಲು ಮುರಿದುಕೊಂಡಿದ್ದಾನೆ. ಈ ವೇಳೆ ಊರಲ್ಲಿ ಕೂಡ ವೈದ್ಯರು ಇರಲಿಲ್ಲ. ಜತೆಗೆ ತಕ್ಷಣ ಹೋಗಿ ಚಿಕಿತ್ಸೆ ಕೊಡಿಸೋಣ ಎಂದರೆ ವಾಹನಗಳ ಸೌಕರ್ಯವೂ ಇಲ್ಲ. ಹೀಗಾಗಿ ಏನು ಮಾಡಬೇಕು ಎಂಬುದು ತೋಚದೆ ಆತನ ಸಹೋದರನನ್ನು ಮೂರು ಕಿಮೀ ದೂರವಿರುವ ತಾಳಿಕೋಟೆವರೆಗೂ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾನೆ. ತಾಳಿಕೋಟೆಯ ಸಿದ್ದಬಸವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾನೆ ಎಂದು ತಿಳಿದು ಬಂದಿದೆ.

Tap to resize

Latest Videos

ಮುದ್ದೇಬಿಹಾಳ: ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಕೊರೋನಾಗೆ ಬಲಿ

ಇಷ್ಟು ಮಾತ್ರವಲ್ಲ, ಚಿಕಿತ್ಸೆ ಕೊಡಿಸಿದ್ದು ಮಾತ್ರವಲ್ಲ, ಆತನನ್ನು ಮತ್ತೆ ಮೂರು ಕಿಮೀ ಹೊತ್ತುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಸರ್ಕಾರ ಸೆಮಿ ಲಾಕ್‌ಡೌನ್‌ ಜಾರಿ ಮಾಡಿತು. ಆದರೆ, ಇಂತಹ ತುರ್ತು ಚಿಕಿತ್ಸೆ ಅಗತ್ಯ ಇದ್ದವರಿಗಾದರೂ ವಾಹನಗಳ ಸೌಕರ್ಯಕ್ಕೆ ಅನುಮತಿ ನೀಡಬೇಕಿತ್ತು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
 

click me!