Koppal: ಹೆತ್ತ ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟು ಹೋದ ಮಗ

By Govindaraj SFirst Published Aug 4, 2022, 4:14 PM IST
Highlights

ತಾಯಿಗಿಂತ ಬಂಧು ಇಲ್ಲ, ಉಪ್ಪಿಗಿಂತ ರುಚಿ ಇಲ್ಲ‌ ಎನ್ನುವ ಮಾತಿದೆ. ‌ಅಷ್ಟೇ ಅಲ್ಲ ತಾಯಿಯೇ ದೇವರು ಎನ್ನುತ್ತಾರೆ. ಆದರೆ, ಇಲ್ಲೊಬ್ಬ ಮಗ ತನ್ನ ಹೆತ್ತ ತಾಯಿಯನ್ನು ನಡು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದಾನೆ. 

ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

ಕೊಪ್ಪಳ (ಆ.04):
ತಾಯಿಗಿಂತ ಬಂಧು ಇಲ್ಲ, ಉಪ್ಪಿಗಿಂತ ರುಚಿ ಇಲ್ಲ‌ ಎನ್ನುವ ಮಾತಿದೆ. ‌ಅಷ್ಟೇ ಅಲ್ಲ ತಾಯಿಯೇ ದೇವರು ಎನ್ನುತ್ತಾರೆ. ಆದರೆ, ಇಲ್ಲೊಬ್ಬ ಮಗ ತನ್ನ ಹೆತ್ತ ತಾಯಿಯನ್ನು ನಡು ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದಾನೆ. ಅಷ್ಟಕ್ಕೂ ಏನಿದು ಪ್ರಕರಣ.

ಎಲ್ಲಿ ಈ ಪ್ರಕರಣ ನಡೆದಿರೋದು: ಕೊಪ್ಪಳ ತಾಲೂಕಿನ ಹುಲಗಿ ಅಂದರೆ ಯಾರಿಗೆ ತಾನೇ ಗೋತ್ತಿಲ್ಲ ಹೇಳಿ. ಪುರಾಣ ಪ್ರಸಿದ್ಧ  ಹುಲಿಗೇಮ್ಮ ದೇವಸ್ಥಾನ ಇರುವುದು ಇದೇ ಹುಲಗಿ ಗ್ರಾಮದಲ್ಲಿ. ಈ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಜನರು ಹಾಗೂ ಮಂಗಳವಾರ, ಹುಣ್ಣಿಮೆ ದಿನದಂದು ಲಕ್ಷಾಂತರ ಭಕ್ತರು ಬರುತ್ತಾರೆ. ಇಂತಹ ಪ್ರಸಿದ್ದವಾದ ದೇವಸ್ಥಾನದ ಆವರಣದಲ್ಲಿ ಮಗನೊಬ್ಬ ತನ್ನ ತಾಯಿಯನ್ನು ಬಿಟ್ಟು ಹೋಗಿರುವ ಪ್ರಕರಣ ನಡೆದಿದೆ.

ಕೊಪ್ಪಳ: 100 ಕೋಟಿ ಮೊತ್ತದ ಅಂಜನಾದ್ರಿ ಮಾಸ್ಟರ್‌ ಪ್ಲಾನ್‌ ರೆಡಿ

ಏನಿದು ತಾಯಿಯನ್ನು ಬಿಟ್ಟು ಹೋದ ಮಗನ ಪ್ರಕರಣ: ಕಳೆದ ಎರಡು ದಿನಗಳ ಹಿಂದೆ ಹುಲಿಗೇಮ್ಮ ದೇವಸ್ಥಾನಕ್ಕೆ ಮಗನೊಬ್ಬ ತನ್ನ ತಾಯಿಯನ್ನು‌ ಕರೆದುಕೊಂಡು ಬಂದಿದ್ದಾನೆ.‌ ಜೊತೆಗೆ ದೇವಿಯ ದರ್ಶನ ಸಹ ಮಾಡಿಸಿದ್ದಾನೆ. ಬಳಿಕ ತನ್ನ ಹೆತ್ತಮ್ಮನನ್ನೇ ಒಂಟಿಯಾಗಿ ದೇವಸ್ಥಾನದ ಬಳಿ ಬಿಟ್ಟು ತೆರಳಿದ್ದಾನೆ.

ಯಾರು ಈ ಹಿರಿಯ ಜೀವಿ: ಸುಮಾರು 80 ವರ್ಷ ವಯಸ್ಸಿನ ವೃದ್ಧೆಯೊಬ್ಬಳು, . ಎರಡು ದಿನದ ಹಿಂದೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಮಗನೊಡನೆ ಬಂದಿದ್ದಾಳೆ. ಈ ವೃದ್ಧೆಯಯನ್ನು ಉಜ್ಜಯನಿ ಗ್ರಾಮದ ಖಾಸೀಂ ಬಿ ಎಂದು ಗುರುತಿಸಲಾಗಿದ್ದು, ಇತರ ವಿವರಗಳನ್ನು ಸರಿಯಾಗಿ ನೀಡಿಲ್ಲ.

ಸಿಮ್‌ ಕಾರ್ಡ್ ಇರದ ಮೊಬೈಲ್‌‌ ಕೊಟ್ಟು ಹೋದ ಮಗ: ಅಜ್ಜಿಯನ್ನು ತನ್ನ ಮಗ ಬಿಟ್ಟು ಹೋದ ಕೂಡಲೇ ಅಜ್ಜಿಗೆ ದಿಕ್ಕು ತೋಚದಂತಾಗಿದೆ. ಆಗ ಸ್ಥಳೀಯರು ಅಜ್ಜಿಯ ನೆರವಿಗೆ ಬಂದಿದ್ದಾರೆ. ಅಷ್ಟೇ ಅಲ್ಲದೇ ಸ್ಥಳೀಯರು ಅಜ್ಜಿಗೆ ಊಟ ನೀಡಿದ್ದಾರೆ. ಸದ್ಯ ಸ್ಥಳೀಯರು ಅಜ್ಜಿಯ ಬಳಿ ಇದ್ದ ಚೀಲ ಚೆಕ್ ಮಾಡಿದಾಗ ಅಜ್ಜಿಯ ಮಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆ ಕೈಗಿತ್ತು ತೆರಳಿದ್ದಾನೆ ಎನ್ನಲಾಗಿದೆ. 

ಹಿರಿಯರ ನಾಗರಿಕರ ಸಹಾಯವಾಣಿಗೆ ಮಾಹಿತಿ ಮುಟ್ಟಿಸಿದ ಸ್ಥಳೀಯರು: ಇನ್ನು ರಾತ್ರಿಯಾದರೂ ಅಜ್ಜಿ ಬಳಿ ಯಾರೂ ಬರದಿರುವುದನ್ನು ಗಮನಿಸಿದ ಸ್ಥಳೀಯರು ತಿನ್ನಲು ಆಹಾರ ನೀಡಿದ್ದಾರೆ. ಮಲಗಲು ಹಾಸಿಗೆ, ದಿಂಬು ನೀಡಿದ್ದಾರೆ. ಬಳಿಕ ಮೊಬೈಲ್ ಪರಿಶೀಲಿಸಿದಾಗ ಸಿಮ್ ಕಾರ್ಡ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಅಜ್ಜಿ ಯಾರು, ಯಾವ ಊರು ಎಂಬಿತ್ಯಾದಿ ವಿವರ  ಸಿಕ್ಕಿಲ್ಲ‌. ಕೂಡಲೇ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.  ಕೂಡಲೇ ಸಿಬ್ಬಂದಿ ಹುಲಿಗೇಮ್ಮ ದೇವಸ್ಥಾನದ ಬಳಿ ಬಂದು ಅಜ್ಜಿಯನ್ನು ರಕ್ಷಿಸಿದ್ದಾರೆ. ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

ಬೆಂಗ್ಳೂರು ಬಿಡು, ಕ್ಷೇತ್ರದಲ್ಲಿ ಸುತ್ತಾಡು: ಸಂಸದ ಕರಡಿ ಪುತ್ರ ಅಮರೇಶಗೆ ಸಿಎಂ ಬೊಮ್ಮಾಯಿ ಸೂಚನೆ

ಒಟ್ಟಾರೆಯಾಗಿ 9 ತಿಂಗಳು ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯನ್ನು ಪಾಪಿ ಮಗ ಬಿಟ್ಟು ಹೋಗಿರುವುದು ದುರಂತರವೇ ಸರಿ.‌ ಇಂತಹ ಮಕ್ಕಳಿಗೆ ಆ ಕಾಲವೇ ಬುದ್ದಿ ಕಲಿಸಲಿದೆ ಎನ್ನುವುದು ಸ್ಥಳೀಯರ ಮಾತು. ಇನ್ನಾದರೂ ಆ ಪಾಪಿ ಮಗ ತನ್ನ ತಾಯಿಯನ್ನು ಕರೆದುಕೊಂಡು ಹೋಗಬೇಕಿದೆ.

click me!