
ಮಂಡ್ಯ: ಯುವಕನೋರ್ವ ತನ್ನ ತಂದೆಯನ್ನೇ ಬ್ಲ್ಯಾಕ್ ಮೇಲ್ ಮಾಡಿ ಜೈಲುಪಾಲಾಗಿರುವ ಘಟನೆಯೊಂದು ಮಂಡ್ಯ ಜಿಲ್ಲೆಯ ಮದ್ದೂರು ನಗರದಲ್ಲಿ ನಡೆದಿದೆ. 25 ವರ್ಷದ ಪ್ರಣಮ್ ಜನ್ಮಕೊಟ್ಟ ಅಪ್ಪನಿಗೇ ಖೆಡ್ಡಾ ತೋಡಿದ ಕುಲಪುತ್ರ. ಮಗನ ವಿರುದ್ಧ ತಂದೆಯೇ ದೂರು ದಾಖಲಿಸಿದ್ದರು. ಮದ್ದೂರಿನ ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ಮಗನಿಂದಲೇ ಬ್ಲ್ಯಾಕ್‌ಮೇಲ್‌ಗೆ ಒಳಗಾದ ತಂದೆ. ರಾಣಿ ಐಶ್ವರ್ಯ ಡೆವಲಪರ್ಸ್ ಹೆಸರಲ್ಲಿ ಸತೀಶ್ ಅವರು ರಿಯಲ್ ಎಸ್ಟೇಟ್ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಪ್ರಣಮ್ ದುಶ್ಚಟಗಳಿಗೆ ಬಲಿಯಾಗಿದ್ದಾರೆ. ವಿರೋಧಿಗಳೊಂದಿಗೆ ಸೇರಿಕೊಂಡು ಮಗ ಈ ಕೆಲಸ ಮಾಡಿದ್ದಾನೆ ಎಂದು ಸತೀಶ್ ಹೇಳುತ್ತಾರೆ.
ಈಗಾಗಲೇ ತಂದೆಯ ಕೋಟ್ಯಾಂತರ ರೂ. ಹಣವನ್ನು ಪ್ರಣಮ್ ಹಾಳುಮಾಡಿದ್ದನು. ಮತ್ತೆ ಹಣಕ್ಕಾಗಿ ತಂದೆ ಮುಂದೆ ಬೇಡಿಕೆಯಿರಿಸಿದ್ದನು. ತಂದೆ ಹಣ ಕೊಡಲು ಒಪ್ಪದಿದ್ದಾಗ ಕೆಲವರ ಜೊತೆ ಸೇರಿ ಅಪ್ಪನಿಗೆ ಖೆಡ್ಡಾ ತೋಡಲು ಮುಂದಾಗಿದ್ದನು. ಅಪ್ಪನ ಭಾವಚಿತ್ರಕ್ಕೆ ಅಶ್ಲೀಲ ಚಿತ್ರ, ವಾಯ್ಸ್ ಎಡಿಟ್ ಮಾಡಿ ಆ ಫೋಟೋಗಳನ್ನು ವಾಟ್ಸಪ್ ಗ್ರೂಪ್‌ಗೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಿದ್ದನು.
ಈ ಬ್ಲ್ಯಾಕ್‌ಮೇಲ್ ಸಂಬಬಂಧ ಸತೀಶ್ ಅರು ಮಗ ಸೇರಿ ನಾಲ್ಕು ಮಂದಿ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಗ ಪ್ರಣಮ್, ಮಹೇಶ್, ಈಶ್ವರ್ ಮತ್ತು ಪ್ರೀತಮ್ ಎಂಬವರನ್ನು ಬಂಧಿಸಿದ್ದಾರೆ.
ಮಗನ ಹೆಸರಿಗೆ 6 ಕೋಟಿ ಆಸ್ತಿ ಮಾಡಿದ್ದೆ. ಸಿನಿಮಾ, ಶೇರು, ಜೂಜಿನ ಶೋಕಿಗೆ ಸಿಲುಕಿ 2 ಕೋಟಿ ಕಳೆದುಕೊಂಡಿದ್ದಾನೆ. ನಂತರ ನಾನು ಅವನ ಹೆಸರಿನಲ್ಲಿದ್ದ ಜಾಯಿಂಟ್ ಪ್ರಾಪರ್ಟಿಯನ್ನೆಲ್ಲಾ ಮಾರಾಟ ಮಾಡದಂತೆ ತಡೆದೆ. ಇದರಿಂದ ನನಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.
ಇದನ್ನೂ ಓದಿ: 26ರ ಲೇಡಿ, 52ರ ಅಂಕಲ್ ಲವ್ ಸ್ಟೋರಿ; ಹೊಸ ಗೆಳೆಯನ ಹಿಂದೆ ಹೋಗಿದ್ದಕ್ಕೆ ಬೆಂಕಿ ಇಟ್ಟ!
ಸಿನಿಮಾ ಮಾಡಬೇಕು ಅಂತ ಹಣ ಕೇಳಿದ್ದ, ಆದ್ರೆ ನಾನು ಕೊಡಲಿಲ್ಲ. ಕೆಲವು ಫೋಟೋಗಳನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ನನ್ನ ಗೌರವಕ್ಕೆ ಧಕ್ಕೆಯನ್ನುಂಟು ಮಾಡಿದೆ. ಈಶ್ವರ್ ಮತ್ತು ಮಹೇಶ್ ಎಂಬವರ ಸಪೋರ್ಟ್‌ನಿಂದ ಈ ಎಲ್ಲಾ ಕೆಲಸಗಳನ್ನು ಮಾಡಿದ್ದಾನೆ. ನನ್ನ ಕೆಲವೊಂದು ಖಾಸಗಿ ಫೋಟೋಗಳನ್ನು ಅಪ್ಲೋಡ್ ಮಾಡೋದಾಗಿ ಹೇಳಿ ಧಮ್ಕಿ ಹಾಕಿದ್ದ ಎಂದು ಸತೀಶ್ ಹೇಳಿದ್ದಾರೆ. ಇದೆಲ್ಲಕ್ಕೂ ಮಹೇಶ್ ಎಂಬಾತನೇ ಪ್ರಮುಖ ಕಾರಣ ಎಂದು ಸತೀಶ್ ಆರರೋಪ ಮಾಡಿದ್ದಾರೆ.
ನಾನು ಸಹ ಎಲ್ಲರ ಪೋಷಕರಂತೆ ಮಗನ ಹೆಸರಿನಲ್ಲಿ ಒಂದಿಷ್ಟು ಆಸ್ತಿಯನ್ನು ಮಾಡಿದ್ದೆ. ಮಗ ಪ್ರಣಮ್ ಹೆಸರಿನಲ್ಲಿಯೇ ಒಂದೆರೆಡು ಲೇಔಟ್ ಸಹ ಮಾಡಿದ್ದೆ. ಇದೀಗ ಅವೆಲ್ಲವನ್ನು ಬದಲಾಯಿಸಿ ಕಂಪನಿಯ ಹೆಸರು ಇಟ್ಟಿದ್ದೇನೆ. ನನ್ನ ಖಾಸಗಿ ವಿಡಿಯೋಗಳು ಅಪರಿಚಿತ ಮಹಿಳೆಯರ ಫೋಟೋಗಳೊಂದಿಗೆ ಸೇರಿಸಿದ್ದನು. ಈ ವಿಡಿಯೋ ತೋರಿಸಿ 5 ಕೋಟಿ ರೂಪಾಯಿ ನೀಡಬೇಕೆಂದು ಬೆದರಿಕೆ ಹಾಕಿದ್ದನು. ಹಣ ನೀಡದಿದ್ದರೆ ಮಾನಹಾನಿ ಮಾಡೋದಾಗಿ ಹೇಳಿದ್ದ, ಇದರಿಂದ ನಾನು ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಪೊಲೀಸರು ಬಂಧಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯ ಎಲ್ಲರನ್ನು ಮಂಡ್ಯ ಜೈಲಿಗೆ ಹಾಕಲಾಗಿದೆ ಎಂದು ಸತೀಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೊಡೀತಾರೆ, ದುಡ್ ಕಿತ್ಕೋತಾರೆ.. ಮೇಲೆ ಹೋದ್ರೂ ಕಾಟ, ಕೆಳಗೂ ಕಾಟ: ಸಂಜೆಯ ದಂಧೆಗೆ ಪುರುಷರು ಹೈರಾಣು