ಸೈನಿಕನಿಗೆ ಕನ್ನಡ ರಾಜ್ಯೋತ್ಸವ ದಿನ ನಿವೃತ್ತಿ; ಗ್ರಾಮಸ್ಥರು, ಗೆಳೆಯರಿಂದ ಅದ್ಧೂರಿ ಸ್ವಾಗತ

By Ravi Janekal  |  First Published Nov 1, 2022, 11:03 PM IST

ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಮಡಿವಾಳಯ್ಯ ಕುರ್ತಕೋಟಿಮಠ ಅನ್ನೋ ಸೈನಿಕನಿಗೂ ಗ್ರಾಮಸ್ಥರು ಅದ್ದೂರಿ ಸ್ವಾಗತ ಮಾಡಿದ್ದಾರೆ. ಸೇನೆಯಿಂದ ಸೇವಾ ನಿವೃತ್ತಿಯಾದ ಹಿನ್ನೆಲೆ ಗ್ರಾಮಸ್ಥರು, ಗೆಳೆಯರ ಬಳಗ ಹಾಗೂ ನಿವೃತ್ತ ಸೈನಿಕರ ಸಂಘ ಮಡಿವಾಳಯ್ಯ ಅವರನ್ನ ಸ್ವಾಗತಿಸಿದೆ.


ಗದಗ (ನ.1) : ಸೇನೆ, ಸೈನಿಕರ ಬಗ್ಗೆ ಸಮಾಜದಲ್ಲಿ ವಿಶೇಷ ಸ್ಥಾನ, ಗೌರವ ಇದ್ದೇ ಇದೆ. ಯೂನಿಫಾರ್ಮ್ ಹಾಕಿದ ಯೋಧನನ್ನ ಕಂಡರೆ ಸೆಲ್ಯೂಟ್ ಹೊಡೆಯುತ್ತಾರೆ. ಗೌರವದಿಂದ ಕಾಣ್ತಾರೆ. ಏಕೆಂದರೆ ಸೈನಿಕರ ಜೀವ್ನ ಅಷ್ಟು ಸುಲಭದ್ದಲ್ಲ. ನಮ್ಮನಿಮ್ಮ ಸುರಕ್ಷತೆಗಾಗಿ ದೇಶ ಸೇವೆಗೆ ಅಂತಾ ತಮ್ಮ ಕುಟುಂಬ, ಹೆಂಡತಿ ಮಕ್ಕಳನ್ನ ಮನೆಯಲ್ಲಿ ಬಿಟ್ಟು ಗಡಿ ಕಾಯ್ತಾರೆ.‌ ದೇಶದ ಭದ್ರತೆ ಸೈನಿಕನ ಮೊದಲ ಆದ್ಯತೆಯಾಗಿರುತ್ತೆ

ಸಲಾಂ ಸೈನಿಕ: ಇದು ವೀರಯೋಧ ಮಹೇಶ್‌ ಸಾಹಸಗಾಥೆ

Tap to resize

Latest Videos

ಹೀಗಾಗಿ ಸಮವಸ್ತ್ರದಲ್ಲಿರೋ ಸೈನಿಕರು ಎಲ್ಲೆ ಕಂಡ್ರೂ ಗೌರವ ಕೊಡ್ಬೇಕು ಅನ್ಸುತ್ತೆ. ಇನ್ನು ಸೈನಿಕರು ಸೇವಾ ನಿವೃತ್ತಿಯಾಗಿ ಮನೆಗೆ ಬಂದ್ರೆ ಕೇಳ್ಬೇಕಾ, ಸಾರ್ಥಕ ಸೇವೆಗೆ ಗೌರವ ಕೊಡ್ಬೇಕು ಅನ್ನೋ ನಿಟ್ಟಿನಲ್ಲಿ, ಅದ್ಧೂರಿ ಮೆರವಣಿಗೆಯೊಂದಿಗೆ ಜನ ಸೈನಿಕರನ್ನ ಬರಮಾಡಿಕೊಳ್ತಾರೆ. ಇದೀಗ ಅಂಥದ್ದೇ ಅಪರೂಪದ ಘಟನೆ ನಡೆದಿದೆ. 

ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಮಡಿವಾಳಯ್ಯ ಕುರ್ತಕೋಟಿಮಠ ಅನ್ನೋ ಸೈನಿಕನಿಗೂ ಗ್ರಾಮಸ್ಥರು ಅದ್ದೂರಿ ಸ್ವಾಗತ ಮಾಡಿದ್ದಾರೆ. ಸೇನೆಯಿಂದ ಸೇವಾ ನಿವೃತ್ತಿಯಾದ ಹಿನ್ನೆಲೆ ಗ್ರಾಮಸ್ಥರು, ಗೆಳೆಯರ ಬಳಗ ಹಾಗೂ ನಿವೃತ್ತ ಸೈನಿಕರ ಸಂಘ ಮಡಿವಾಳಯ್ಯ ಅವರನ್ನ ಸ್ವಾಗತಿಸಿದೆ. 17 ವರ್ಷದಿಂದ ಮದ್ರಾಸ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸ್ತಿದ್ದ ಮಡಿವಾಳಯ್ಯ ಅವರು, ಇವತ್ತು ನಿವೃತ್ತರಾದ್ದಾರೆ. ರೈಲು ನಿಲ್ದಾಣಕ್ಕೆ ಆಗಮಿಸಿದ ಮಡಿವಾಳಯ್ಯ ಅವರನ್ನ ಹಾರ ತುರಾಯಿ ಹಾಕಿ ಅದ್ಧೂರಿ ಸ್ವಾಗತ ಮಾಡ್ಲಾಗಿದೆ.

ತೆರೆದ ವಾಹನದಲ್ಲಿ ಮಡಿವಾಳಯ್ಯ ಅವರ ಮೆರವಣಿಗೆ ಮಾಡ್ಲಾಯ್ತು. ರೈಲು ನಿಲ್ದಾಣದಿಂದ ಗಾಂಧಿ ವೃತ್ತ, ತೋಂಟದಾರ್ಯ ಮಠ, ಅಲ್ಲಿಂದ ವೀರೇಶ್ವರ ಪುಣ್ಯಾಶ್ರಮಕ್ಕೆ ತೆರಳಿ ಶ್ರೀಗಳ ದರ್ಶನ ಪಡೆದು ನಂತ್ರ ನಾರಾಯಣಪುರ ಗ್ರಾಮಕ್ಕೆ ತೆರಳಿದ್ದಾರೆ.. ಸಂಜೆ ಗ್ರಾಮಸ್ಥರು ಸೇರಿ ಸರ್ಕಾರಿ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಸಿದಾರೆ. ಗ್ರಾಮದ ಯುವಕರೂ ಸೇನೆ ಸೇರೆಬೇಕೆಂದ ಹುಮ್ಮಸ್ಸು ಹುಟ್ಟಲಿ ಅನ್ನೋದು ಗ್ರಾಮಸ್ಥರ ಆಶಯ.

 

ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್‌ ತಲುಪಿದ ಪ್ರಧಾನಿ ಮೋದಿ!

ಮದ್ರಾಸ್ ರೆಜಿಮೆಂಟ್ ನಲ್ಲಿ ಸೇವೆ ಮಡಿವಾಳಯ್ಯ ಎಸ್ ಪಿ‌ಆರ್ ಆಗಿ ಸೇವೆಸಲ್ಲಿಸಿದಾರೆ.. ಮಡಿವಾಳಯ್ಯ ತಮ್ಮ 20 ವರ್ಷದ ವಯೋಮಾನದಲ್ಲೇ ಸೇನೆ ಸೇರಿದ್ರು.. ಸದ್ಯ ಮಡಿವಾಳಯ್ಯ ಅವರಿಗೆ 37 ವರ್ಷ. ಸೇವಾ ನಿವೃತ್ತಿಯ ಬಳಿಕ ಕೆಪಿಎಸ್ ಸಿ, ಯುಪಿಎಸ್ ಸಿ ಎಕ್ಸಾಂ ಬರೆಯುವ ಉಮೇದಿನಲ್ಲಿದ್ದಾರೆ. ಮಡಿವಾಳಯ್ಯ ಅವರಿಗೆ ನಮ್ಮ ಕಡೆಯಿಂದಲೂ ಬಿಗ್ ಸೆಲ್ಯೂಟ್.

click me!