Latest Videos

ರೈತರಿಗೆ ಸೌರಶಕ್ತಿ ಚಾಲಿತ ತಂಪುಕಾರಕ ಘಟಕಗಳು ತುಂಬಾ ಸಹಕಾರಿ

By Kannadaprabha NewsFirst Published Jan 6, 2024, 10:45 AM IST
Highlights

ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವವರೆಗೆ ಅವುಗಳನ್ನು ಸಂರಕ್ಷಿಸಿಡಲು ಸೌರಶಕ್ತಿ ಚಾಲಿತ ತಂಪುಕಾರಕ (ಕೋಲ್ಡ್ ಸ್ಟೋರೇಜ್) ಘಟಕಗಳು ತುಂಬಾ ಸಹಕಾರಿಯಾಗಲಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಎಲ್.ಟಿ.ಐ. ಮೈಂಡ್ ಟ್ರೀ ಫೌಂಡೇಶನ್‌ನ ಮುಖ್ಯ ಸುಸ್ಥಿರ ಅಧಿಕಾರಿ ಫಣೀಶ್ ರಾವ್ ಹೇಳಿದರು.

 ಮಲ್ಕುಂಡಿ :  ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವವರೆಗೆ ಅವುಗಳನ್ನು ಸಂರಕ್ಷಿಸಿಡಲು ಸೌರಶಕ್ತಿ ಚಾಲಿತ ತಂಪುಕಾರಕ (ಕೋಲ್ಡ್ ಸ್ಟೋರೇಜ್) ಘಟಕಗಳು ತುಂಬಾ ಸಹಕಾರಿಯಾಗಲಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಎಲ್.ಟಿ.ಐ. ಮೈಂಡ್ ಟ್ರೀ ಫೌಂಡೇಶನ್‌ನ ಮುಖ್ಯ ಸುಸ್ಥಿರ ಅಧಿಕಾರಿ ಫಣೀಶ್ ರಾವ್ ಹೇಳಿದರು.

ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದಲ್ಲಿ ರೈತರಿಗೆ ಚಾಲಿತ ತಂಪುಕಾರಕ ಘಟಕವನ್ನು ಹಸ್ತಾರಿಸಿ ಅವರು ಮಾತನಾಡಿದರು.

ಟಿ.ಐ.ಫೌಂಡೇಶನ್ ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ ಆರ್) ನಿಧಿಯ ಅಡಿ ತಲಾ ಸುಮಾರು 15 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ 5 ಸಾವಿರ ಕೆ.ಜಿ. ಸಾಮರ್ಥ್ಯದ ಎರಡು ಸೌರಶಕ್ತಿ ಚಾಲಿತ ತಂಪುಕಾರಕ ಘಟಕಗಳನ್ನು ರಿಗೆ ಅರ್ಪಿಸಿ ಅವರು ಮಾತನಾಡಿದರು.

ಸೆಲ್ಕೋ ಇಂಡಿಯಾದ ಉಪ ಮಹಾ ಪ್ರಬಂಧಕ ಸುದೀಪ್ತ ಘೋಷ್ ಮಾತನಾಡಿ, ಬೆಲೆಗಳ ಏರಿಳಿಕೆಯಿಂದ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲು ಸೌರತಂತ್ರಜ್ಙಾನ ಸಹಕಾರಿಯಾಗಿದೆ ಎಂದರು. ಮುಂದಿನ ದಿನಗಳಯ ರೈತರ ಸುಸ್ಥಿರ ಮತ್ತು ಸ್ವಾವಲಂಬಿ ಬದುಕಿಗಾಗಿ ಆಧುನಿಕ ಸೌರ ತಂತ್ರಜ್ಞಾನವನ್ನು ಹಸ್ತಾಂತರಿಸುವ ಕೆಲಸ ತ್ವರಿತವಾಗಿ ಆಗಬೇಕೆಂದರು.

ನ್ಯಾಷನಲ್ ಆಗ್ರೋ ಫೌಂಡೇಶನ್ ನಿರ್ದೇಶಕ ಡಾ. ಮುರುಗನ್ ಮಾತನಾಡಿದರು.

ಮಹೇಶ್ವರಿ ಲಿಂಗರಾಜು, ಮಹದೇಸ್ವಾಮಿ, ಎಲ್.ಟಿ.ಐ. ಮೈಂಡ್ ಟ್ರೀ ಫೌಂಡೇಶನ್ ನ ಸಿಎಸ್ ಆರ್ ವಿಭಾಗದ ಹಿರಿಯ ವ್ಯವಸ್ಥಾಪಕ ವಿನೋದ್, ಸೆಲ್ಕೋ ಇಂಡಿಯಾದ ಯೋಜನೆಗಳ ಮುಖ್ಯ ವ್ಯವಸ್ಥಾಪಕ ಪಾರ್ಥಸಾರಥಿ ಮತ್ತು ಕ್ಷೇತ್ರ ವ್ಯವಸ್ಥಾಪಕ ಅಶ್ವಿನ್, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

click me!