ರಾಮ ಮಂದಿರ ಉದ್ಘಾಟನೆ ಆಹ್ವಾನದಲ್ಲಿ ತಾರತಮ್ಯ : ರಾಜಣ್ಣ

By Kannadaprabha News  |  First Published Jan 6, 2024, 10:37 AM IST

ಅಯೋಧ್ಯ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನದಲ್ಲಿ ತಾರತಮ್ಯವಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ವಾಗ್ದಾಳಿ ನಡೆಸಿದರು.


 ತುಮಕೂರು :  ಅಯೋಧ್ಯ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನದಲ್ಲಿ ತಾರತಮ್ಯವಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ವಾಗ್ದಾಳಿ ನಡೆಸಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇದು ಯಾರು ಕೂಡ ಸಹಿಸಕ್ಕಾಗುವಂತದ್ದಲ್ಲ ಎಂದರು.

Tap to resize

Latest Videos

undefined

ಶ್ರೀ ರಾಮನನ್ನು ಬಿಜೆಪಿಯವರು ಗುತ್ತಿಗೆ ತಗೊಂಡಿಲ್ಲ ಎಂದ ಅವರು ಹಿಂದುತ್ವವನ್ನು ಯಾವುದೇ ಪಕ್ಷಕ್ಕೆ ಗುತ್ತಿಗೆ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾವೆಲ್ಲ ಹಿಂದೂಗಳೇ. ರಾಜಕಾರಣಕ್ಕಾಗಿ ವೋಟಿಗಾಗಿ ಪದೇ ಪದೇ ಹಿಂದೂ ವಿರೋಧಿ ಸರ್ಕಾರ ಅನ್ನೋದನ್ನು ಖಂಡಿಸುತ್ತೇವೆ ಎಂದರು.

ವನ್ನು ಬಂಡವಾಳ ಮಾಡಿಕೊಂಡು ಬೇರೆಲ್ಲ ಹಿಂದುಗಳಿಗೆ ಅಪಮಾನ ಮಾಡುವುದು ಸರಿಯಲ್ಲ. ಹಿಂದುತ್ವವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ನೋಡಿಯೇ ಡಾ. ಅಂಬೇಡ್ಕರ್ ಹಿಂದುತ್ವವನ್ನು ತ್ಯಜಿಸಿ ಬುದ್ಧಿಸಂಗೆ ಸೇರ್ಪಡೆಯಾದರು ಅನ್ನಿಸುತ್ತದೆ.ಹಿಂದುತ್ವವನ್ನು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದು ಯಾವುದೇ ಮುಖಂಡರಿಗೆ ಶೋಭೆ ತರುವುದಿಲ್ಲ ಎಂದರು.

ಹಿಂದೂತ್ವವನ್ನು ಪವರ್ ಆಫ್ ಆಟಾರ್ನಿ ಕೊಟ್ಟಿಲ್ಲ. ನಾವು ಹಿಂದೂಗಳೇ, ನಾವು ಹಿಂದುತ್ವ ವಾದಿಗಳೇ ಎಂದು ತಿರುಗೇಟು ನೀಡಿದರು. ಆಗ ಅಂಬೇಡ್ಕರ್ ಹಿಂದುತ್ವ ತ್ಯಜಿಸುವ ಪರಿಸ್ಥಿತಿ ಸೃಷ್ಟಿ ಮಾಡಲಾಗಿತ್ತು. ಇದೀಗ ಮತ್ತೆ ಅಂತ ಪರಿಸ್ಥಿತಿಯನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದರು.

ಹಿಂದುತ್ವ ಅನ್ನೋ ಪದವನ್ನು ಹೆಚ್ಚಿಗೆ ಬಳಸಬಾರದು. ಹಿಂದೂಗಳಿಗೆ ಅನಾನೂಕೂಲ, ದಬ್ಬಾಳಿಕೆಯಾದಾಗ ಎಲ್ಲಾರೂ ಒಟ್ಟಾಗಿ‌ ಹೋರಾಟ ಮಾಡೋಣ ಎಂದರು. ಹಿಂದೂಗಳೊಬ್ಬರಿಂದಲ್ಲೇ ದೇಶ ಕಟ್ಟಲಾಗಿಲ್ಲ. ಎಲ್ಲಾ ಧರ್ಮದವರಿಂದ ದೇಶ ಕಟ್ಟಲಾಗಿದೆ ಎಂದರು. ರಾಕೇಟ್ ಟೆಕ್ನಾಲಜಿ ಈಗಲೂ ಪ್ರಚಲಿತವಿದೆ. ಅದು ಟಿಪ್ಪು ಟೆಕ್ನಾಲಜಿನೇ, ಅದು ಈಗಲೂ ಪ್ರಚಲಿತದಲ್ಲಿದೆ. ಟಿಪ್ಪುನಿಂದ ಈ ರಾಕೇಟ್ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿಕೊಂಡು‌ ಹೋಗಿದ್ದು ಎಂದರು.

ಅಬ್ದುಲ್ ಕಲಾಂ ಅವರು ಆ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿಕೊಂಡು ಬಂದರು. ಕಲಾಂ ಅವರು ವಿಜ್ಞಾನಿಯಾಗಿದ್ದು, ರಾಷ್ಟ್ರಪತಿಯಾಗಿ ಪ್ರಪಂಚದ ಗೌರವನ್ನು ಗಳಿಸಿಕೊಂಡು ಬಂದರು ಎಂದರು.

ಗೋಡ್ಸೆಯನ್ನು ಗಾಂಧಿ ಕೊಂದವರು ಅಂತಾ ಹೇಳುತ್ತೇವೆ. ಅವರು ಹಿಂದೂ ತಾನೇ ಎಂದು ಪ್ರಶ್ನಿಸಿದ ರಾಜಣ್ಣ ಗೋಡ್ಸೆ ಪ್ರಕಾರ ಜನ ಹಿಂದೂವಾದಿ. ಮಹಾತ್ಮ ಗಾಂಧಿ ಅವರು ಕೂಡಾ ಹಿಂದೂನೆ. ಅವರು ಸದಾ ಕಾಲ ರಾಮನ ಜಪ ಮಾಡುತ್ತಿದ್ದರು. ಸಾಯುವಾಗಲು ಹೇ ರಾಮ್ ಅಂತ ಉಸಿರು ಚೆಲ್ಲಿದವರು ಎಂದರು.

ರಾಮ ಎಲ್ಲರಿಗೂ ಬೇಕಿರೋನು. ರಾಮನ ವಿರೋಧಿಗಳು ಯಾರು ಇಲ್ಲ. ನಮ್ಮೂರಿನಲ್ಲಿ ರಾಮನ ದೇವಸ್ಥಾನಗಳಿವೆ ಅದಕ್ಕೆ ಇತಿಹಾಸವು ಇದೆ ಎಂದರು. ವಿಗ್ರಹಗಳಿಗೆ ಎಷ್ಟೋ ದಶಕಗಳ ಇತಿಹಾಸ ಇರುತ್ತದೆ. ಚಿಕ್ಕ ವಯಸ್ಸಿನಲ್ಲಿ ಅದಕ್ಕೆ ಭಕ್ತಿ ಪೂರ್ವಕವಾಗಿ ನಾವು ನಡೆದುಕೊಂಡಿದಿವಿ ಎಂದರು.

ಅಲ್ಲಿ ಪೂಜೆ ಮಾಡಿದರೆ, ರಾಮ ನಮಗೆ ಒಲಿಯುತ್ತಾನೆ ಅನ್ಕೊಂಡಿದಿವಿ ಎಂದರು.

ಅಯೋಧ್ಯೆಗೆ ಹೋಗಿ ರಾಮನ ಪೂಜೆ ಮಾಡಬೇಕಾ ಎಂದು ಪ್ರಶ್ನಿಸಿದ ರಾಜಣ್ಣ ಅಯೋಧ್ಯೆಯಲ್ಲಿ ಇನ್ನು ರಾಮನ ಮೂರ್ತಿನೆ ಪ್ರತಿಷ್ಠಾಪನೆ ಆಗಿಲ್ಲ. ನಮ್ಮಲ್ಲಿ ಶತಮಾನಗಳ ಹಳೆಯ ರಾಮನ ವಿಗ್ರಹಗಳಿವೆ ಎಂದರು.

ಬಹುತೇಕ ಹಳ್ಳಿಗಳಲ್ಲಿ ಆಂಜನೇಯ ಹಾಗೂ ರಾಮನ ದೇವಾಲಯಗಳು ಇದ್ದೆ ಇವೆ. ನಮ್ಮ ನಮ್ಮ ನಂಬಿಕೆ ಭಕ್ತಿಯ ಅನುಸಾರವಾಗಿ ಪೂಜೆ ಮಾಡಿ ಆಶಿರ್ವಾದ ಪಡಿತಿವಿ ಎಂದರು. ಈಗ ಮೋದಿ‌ ಹೋಗಿ ಅಲ್ಲಿ ರಾಮನ ಪ್ರತಿಷ್ಠಾಪನೆ ಮಾಡಿದ ತಕ್ಷಣ ನಾವೆಲ್ಲ ಈ ರಾಮನ್ನ ಬಿಟ್ಟು ಆ ರಾಮನ್ನ ಹಿಡಿದುಕೊಳ್ಳೊಕೆ ಆಗುತ್ತಾ ಎಂದರು.

ನಮ್ಮ ಊರಿನಲ್ಲಿರುವ ದೇವರು ಮೊದಲಿನದು ನಮಗೆ. ಅಯೋಧ್ಯೆ ರಾಮನ ಜನ್ಮಸ್ಥಳ ಅಂತಾ ಇತಿಹಾಸದಲ್ಲಿ ಬಂದಿದೆ.

ಅದಕ್ಕೆ ಆದಂತಹ ಗೌರವಗಳು ಇರುತ್ತವೆ. ಆದರೆ ಈ ರೀತಿಯ ವಿಚಾರ ರಾಜಕೀಯಕ್ಕೆ ಬಳಸುವುದು ಸರಿಯಲ್ಲ ಎಂದರು.

ರಾಮನ ದೇವಾಲಯ ಉದ್ವಾಟನೆ ಆಗುತ್ತದೆ. ನಾವು ಬಹಳ ಸಂತೋಷಪಡುತ್ತೇವೆ. ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ ಎಂದರು. ಅಯೋಧ್ಯೆಯ ರಾಮ ಮಂದಿರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗೆ ಆಹ್ವಾನವಿಲ್ಲ. ಇನ್ನೂ ನಮಗೆ ಕೊಡುತ್ತಾರ? ಎಂದ ಅವರು ಇದು ಬಿಜೆಪಿಯವರ ಶ್ರೀರಾಮ ಅಂತಾ ಬರೆದುಕೊಳ್ಳಲಿ ನಮ್ಮದು ಅಭ್ಯಂತರವಿಲ್ಲ ಎಂದು ವ್ಯಂಗ್ಯವಾಡಿದರು.

ಶ್ರೀರಾಮ ಎಲ್ಲರಿಗೂ ಸೇರಿದ್ದವನು, ಇವರಿಗೆ ಮಾತ್ರವಲ್ಲ. ಅವರ ವಿರೋಧ ಮಾಡಿದರೂ ಅವರನ್ನ ಕರೆಯಲ್ಲ ಎನ್ನುವುದಾದರೆ ಅವರದ್ದೆ ಅಂತಾ ಬರೆದುಕೊಳ್ಳಲಿ ಎಂದರು.

ಸಿದ್ದರಾಮಯ್ಯನೇ ನಮಗೆ ರಾಮ ಎಂಬ ಎಚ್. ಆಂಜನೇಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ ಅದು ಅವರ ನಂಬಿಕೆ. ಈ ಬಗ್ಗೆ ಕಾಮೆಂಟ್ ಮಾಡುವುದಿಲ್ಲ ಎಂದರು. ನಾವು ಗೋಡ್ಸೆ ಹಿಂದೂಗಳು ಮತ್ತು ಮಹಾತ್ಮಾಗಾಂಧಿ ಹಿಂದೂಗಳು ಅಂತಾ ವಿಂಗಡಣೆ ‌ಮಾಡಬೇಕಾಗುತ್ತದೆ ಎಂದರು. ಗೋಡ್ಸೆ ಹಿಂದುತ್ವ ಪ್ರತಿಪಾದನೆ ಮಾಡುವುದು ಒಂದು ಭಾಗ. ಮಹಾತ್ಮಾ ಗಾಂಧಿ ಹಿಂದುತ್ವ ಪ್ರತಿಪಾದನೆ ಮಾಡುವುದು ಒಂದು ಭಾಗ ಎಂದರು. ನಾವೆಲ್ಲಾ ಮಹಾತ್ಮಾ ಗಾಂಧಿ ಪ್ರತಿಪಾದನೆ ಮಾಡಿದ್ದ ಅನುಯಾಯಿಗಳು. ಗೋಡ್ಸೆಯನ್ನು ವೈಭವಿಕರಿಸುವುದು, ಗಾಂಧಿ ಪೋಟೊಕೆ ಗುಂಡು ಹೊಡೆಸುವುದು. ಮಹಾತ್ಮಾ ಗಾಂಧಿ ರಾಷ್ಟ್ರಪಿತ, ಅವರಿಗೆ ಅವಮಾನ ಮಾಡುವ ಕೆಲಸ ಮಾಡ್ತರೆ ಅದು ಸರಿನಾ ಎಂದರು.

ಹಿಂದುತ್ವ ಎನ್ನುವುದು ಯಾವುದೇ ಪಕ್ಷಕ್ಕೆ ಜಾಗಿರು ಕೊಟ್ಟಿಲ್ಲ ಎಂದರು. ನಾವೆಲ್ಲಾ ಕೂಡ ಹಿಂದುತ್ವ ವಾದಿಗಳೇ. ಆದರೆ ನಾವು ಬೇರೆ ಸಮಾಜದವರನ್ನು ವಿರೋಧ ದ್ವೇಷ ಮಾಡದೇ, ಸಮನ್ವಯ ಸಹಬಾಳ್ವೆಯಿಂದ ಹೋಗುವಂತವರು ಎಂದರು.

ಸಿದ್ದರಾಮಯ್ಯ ದೇವಾಲಯಕ್ಕೆ ನಿರಾಕರಣೆ ವಿಡಿಯೋ ವೈರಲ್ ವಿಚಾರದ ಬಗ್ಗೆ ಮಾತನಾಡಿದ ಅವರು ಮಾಧ್ಯಮಗಳು ಸಕ್ರಿಯವಾಗುವ ಮುನ್ನ ಈ ರೀತಿಯಲ್ಲಿ ಎಷ್ಟೊ ನಡೆತಿದ್ವು. ಬೇಡರ ಕಣ್ಣಪ್ಪ ಲಿಂಗದ ಮೇಲೆ ಕಾಲಿಟ್ಟಿದ್ದ. ಆದಾಕ್ಷಣ ಬೇಡರ ಕಣ್ಣಪ್ಪ ಲಿಂಗಕ್ಕೆ ಒದ್ದುಬಿಟ್ಟ ಅಂತಾ ಹೇಳಲು ಆಗುತ್ತಾ. ಪರಿಸ್ಥಿತಿ ಏನಿತ್ತೋ ಅವರು ಯಾಕೆ ಒಳಗೆ ಹೋಗಿಲ್ಲ, ಅಥವಾ ಒಳಗೆ ಹೋಗೊಕ್ಕೆ ಜಾಗವಿರಲಿಲ್ಲವಾ. ವಾತಾವರಣಕ್ಕೆ ತಕ್ಕಂತೆ ಅವರ ಅಭಿಪ್ರಾಯ ಸೂಚಿಸಿರುತ್ತಾರೆ ಎಂದರು. ಅದನ್ನೇ ವೈಭವಿಕರಿಸಿ ತೋರಿಸುವುದು ಸರಿಯಲ್ಲ. ಯಾವ ಕಾರಣದಿಂದ ಹೋಗಿಲ್ಲ ಅಥವಾ ಬರಲಿಲ್ಲ ಅಥವಾ ಇನ್ನೊಂದು ಕಡೆ ಹೋದರೋ. ಅಲ್ಲಿನ ಪರಿಸ್ಥಿತಿ ತಕ್ಕ ಹಾಗೆ ನಡವಳಿಕೆ ಮಾಡಿರುತ್ತಾರೆ ಎಂದರು. ಅದನ್ನು ಮುಂದಿಟ್ಟು ಕೊಂಡು ಸಿದ್ದರಾಮಯ್ಯ ಹಿಂದು ವಿರೋಧಿ ಅಥವಾ ಮುಸ್ಲಿಂ ಸಮುದಾಯ ತುಷ್ಟಿಕರಣ ಮಾಡುತ್ತಾರೆ ಎನ್ನುವುದು ಸರಿಯಲ್ಲ ಎಂದರು.

ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ನವರು ಹಿಂಸೆಯ ಪ್ರಚೋದಕರಲ್ಲಾ. ಏನಾದರೂ ಹಿಂಸೆ ನಡೆಯುವ ಮಾಹಿತಿ ಇದ್ದರೇ ಅದನ್ನು ತಡೆಯುವ ಸಲಹೆ ಕೊಟ್ಟಿರುತ್ತಾರೆ ಎಂದರು. ಅವರು ಹೇಳಿರುವ ಅರ್ಥ ಇನ್ನೂ ನನಗೆ ಗೊತ್ತಿಲ್ಲ ಎಂದರು.

ಹಿಂದುತ್ವ ಹೆಸರಿನಲ್ಲಿ ಕರಸೇವಕನ ರಕ್ಷಣೆ ಬೇಡ

ಹುಬ್ಬಳ್ಳಿಯಲ್ಲಿ ಬಂಧಿಸಿದವನ ಮೇಲೆ 13ಕ್ಕೂ ಹೆಚ್ಚು ಕೇಸುಗಳಿವೆ. ಆತನನ್ನು ಬಂಧಿಸಿದ ಕ್ಷಣ, ಎಲ್ಲಾ ಕರಸೇವಕರನ್ನ ಬಂಧಿಸುತ್ತಾರೆ ಎಂದು ದೇಶಾದ್ಯಂತ ಇಶ್ಯೂ ಮಾಡುತ್ತಾರೆ. ಈ ರೀತಿಯ ಸಣ್ಣತನದ ರಾಜಕಾರಣ ಶೋಭೆ ತರುವುದಿಲ್ಲ. ಬಂಧಿತ ದೋಂಬಿ, ಕೊಲೆ, ಮಟ್ಕಾ, ಅಬಕಾರಿ ದಂಧೆಯಲ್ಲಿ ಸೇರಿಕೊಂಡಿದನ್ನು. ದಶಕಗಳಿಂದ ಇವುಗಳನ್ನು ಮಾಡಿಕೊಂಡು ಬಂದಿದ್ದ. ಕರಸೇವಕರನ್ನು ಗುರಿಯಾಗಿಸಿಕೊಂಡು ಬಂಧನ ಮಾಡಿಲ್ಲ. ಹಿಂದುತ್ವದ ಹೆಸರಿನಲ್ಲಿ ಅಪರಾಧಕ್ಕೆ ಒಳಗಾದವರನ್ನು ರಕ್ಷಿಸುವುದು ಸರಿಯಲ್ಲ. ಬಿಜೆಪಿಯವರು ಎಲ್ಲಾ ವಿಷಯದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ತಪಿತಸ್ಥರ ವಿಷಯವನ್ನು ರಾಜಕಾರಣಕ್ಕೆ ಬಳಸಿಕೊಂಡು ಸಮಾಜದಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ರಾಜಣ್ಣ ತಿಳಿಸಿದರು.

ವಾಲ್ಮಿಕಿ ದೇವಾಲಕ್ಕೆ ಒತ್ತಾಯ

ಶ್ರೀರಾಮನ್ನ ಇಡೀ ಪ್ರಪಂಚಕ್ಕೆ, ಭೂ ಮಂಡಲಕ್ಕೆ ಪರಿಚಯಿಸಿದ್ದು ವಾಲ್ಮೀಕಿ. ವಾಲ್ಮೀಕಿ ರಾಮಾಯಣವನ್ನು ಬರೆಯದೇ ಇದ್ದಿದ್ದರೇ ಶ್ರೀರಾಮ ಪರಿಚಯವಾಗುತ್ತಿರಲಿಲ್ಲ. ವಾಲ್ಮೀಕಿದು ಎಲ್ಲೂ ದೇವಸ್ಥಾನ ಇಲ್ಲ. ವಾಲ್ಮೀಕಿ ದೇವಸ್ಥಾನವನ್ನು ಶ್ರೀರಾಮನ ದೇವಸ್ಥಾನದಂತೆ ಕಟ್ಟಬೇಕೆಂದು ಒತ್ತಾಯಿಸಿದರು. ಈ ಸಂಬಂಧ ಮೋದಿಯವರಿಗೆ ಒತ್ತಾಯ ಮಾಡುತ್ತೇವೆ. ವಾಲ್ಮೀಕಿ ದೇವಸ್ಥಾನ ಇಲ್ಲಾಂದ್ರೆ ಇಡೀ ದೇಶದಲ್ಲಿ ಹೋರಾಟ ಮಾಡಲಾಗುವುದು ಎಂದರು.

click me!