ಸಿದ್ದರಾಮಯ್ಯರವರನ್ನು 2ನೇ ಬಾರಿ ಮುಖ್ಯಮಂತ್ರಿಯಾಗಲು ಕಾರಣರಾದ ವರುಣ ಕ್ಷೇತ್ರದ ಜನರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಹಾಗೂ ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು : ಸಿದ್ದರಾಮಯ್ಯರವರನ್ನು 2ನೇ ಬಾರಿ ಮುಖ್ಯಮಂತ್ರಿಯಾಗಲು ಕಾರಣರಾದ ವರುಣ ಕ್ಷೇತ್ರದ ಜನರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಹಾಗೂ ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಕ್ಷೇತ್ರದ ರಂಗಾಚಾರಿಹುಂಡಿ, ರಂಗನಾಥಪುರ, ಹುನಗನಹಳ್ಳಿ, ಪಟ್ಟೆಹುಂಡಿ, ರಂಗಸಮುದ್ರ, ಎಳೆವೇಗೌಡನಹುಂಡಿ, ಅಗಸ್ತೆಪುರ ಗ್ರಾಮಗಳಿಗೆ ಭೇಟಿ ನೀಡಿ ಜನಸಂಪರ್ಕ ಸಭೆಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ಪರ ಇರುವ ಸರ್ಕಾರವಾಗಿದ್ದು. ಸಾಮಾಜಿಕ ನ್ಯಾಯದಡಿ, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ ಎಂದರು.
undefined
ಹೀಗಾಗಿ, ಎಲ್ಲಾ ಬಡವರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಇದ್ದಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆ ಮಾಡದೆ ಇದ್ದುದರಿಂದ ಸಮಸ್ಯೆಗಳು ಹೆಚ್ಚಾಗಿದ್ದು. ಈಗ ನಮ್ಮ ಸರ್ಕಾರವೇ ಇದೆ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.
ರಂಗಾಚಾರಿ ಹುಂಡಿಯಲ್ಲಿ ಗ್ರಾಮಕ್ಕೆ ಗ್ರಂಥಾಲಯ ಬೇಕು, ಸಮುದಾಯ ಭವನ ರಿಪೇರಿಯಾಗಬೇಕು, ಸ್ಮಶಾನ ಬೇಕು, ಶುದ್ಧ ಕುಡಿಯುವ ನೀರಿನ ಘಟಕ ಬೇಕು, ಮಳೆಹಾನಿ ಪರಿಹಾರ ಕೊಡಿಸಿ, ಜಮೀನಿನಲ್ಲಿ ಮನೆ ಕಟ್ಟಿದ್ದೇವೆ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ ಎಂದು ದೂರಿದರು. ಅದಕ್ಕೆ ಉತ್ತರಿಸಿದ ಡಾ. ಯತೀಂದ್ರ, ಸಿದ್ದಪ್ಪಾಜಿ ದೇವಸ್ಥಾನ ನಿರ್ಮಾಣಕ್ಕೆ 5 ಲಕ್ಷ ಕೊಡುತ್ತೇವೆ. ಸ್ಮಶಾನ ಜಾಗ ಬಿಡಿಸಲು ಭೂಮಿ ಮಾಲೀಕರೊಂದಿಗೆ ಮಾತಾಡುತ್ತೇನೆ. ಉಳಿದ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸಬೇಕು ಎಂದರು.
ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್.ವಿಜಯ್, ತಹಸೀಲ್ದಾರ್ ಶ್ರೀನಿವಾಸ್, ಡಿ.ಒ.ಎಸ್.ಪಿ. ಗೋವಿಂದರಾಜು, ಎಸ್ಐ. ಮನೋಜ್ ಕುಮಾರ್, ಬಿಇಒ ಶೋಭಾ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶ್ವೇತಾ, ಎಇಇ ಚರಿತಾ ಸುಹಾಸಿನಿ, ಆರ್.ಐ.ಮಹೇಂದ್ರ, ಮುಖಂಡರಾದ ಮಹಾದೇವ್, ರಮೇಶ್ ಮುದ್ದೇಗೌಡ, ಬಾಬು ಮಹಾದೇವಣ್ಣ, ಗ್ರಾಪಂ ಅಧ್ಯಕ್ಷೆ ಸುಜಾತ, ಹೆಳವರಹುಂಡಿ ಸೋಮು, ಮಂಜುನಾಥ್, ಸುನಿಲ್ ಮೊದಲಾದವರು ಇದ್ದರು.