ಹುಣಸೂರಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಚಾಲನೆ

By Kannadaprabha NewsFirst Published Mar 19, 2023, 5:50 AM IST
Highlights

ಮಣ್ಣಿನ ಫಲವತ್ತತೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಕೈಗೊಳ್ಳುವುದು ಅಗತ್ಯವೆಂದು ಕೃ ಇಲಾಖೆ ಸಹಾಯಕ ನಿರ್ದೇಶಕ ಜೆ. ವೆಂಕಟೇಶ್‌ ತಿಳಿಸಿದರು.

  ಹುಣಸೂರು :  ಮಣ್ಣಿನ ಫಲವತ್ತತೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಕೈಗೊಳ್ಳುವುದು ಅಗತ್ಯವೆಂದು ಕೃ ಇಲಾಖೆ ಸಹಾಯಕ ನಿರ್ದೇಶಕ ಜೆ. ವೆಂಕಟೇಶ್‌ ತಿಳಿಸಿದರು.

ಪಟ್ಟಣದ ಗೋಕುಲ ರಸ್ತೆಯಲ್ಲಿ ಕೋರಮಂಡಲ್‌ ಇಂಟರ್‌ ನ್ಯಾಷನಲ್‌ ಲಿಮಿಟಿಡ್‌ ಕಂಪನಿಯಿಂದ ಆರಂಭಿಸಿರುವ ಮಣ್ಣು ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋರಮಂಡಲ್‌ ಕಂಪನಿಯವರು ರೈತರಿಗೆ ಉಚಿತವಾಗಿ ಮಣ್ಣು ಪರೀಕ್ಷೆ ಕಾರ್ಯ ನಡೆಸಿಕೊಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ರೈತರು ತಮ್ಮ ಜುೕನಿನ ಮಣ್ಣಿನ ಫಲವತ್ತತೆ, ಮಣ್ಣೀನಲ್ಲಿರುವ ಪೋಷಕಾಂಶಗಳ ಕುರಿತು ಮಾಯಿತಿ ಪಡೆದು ಕೊರತೆ ಇರುವ ಅಥವಾ ಅಧಿಕ ಪ್ರಮಾಣದಲ್ಲಿರುವ ಪೋಷಕಾಂಶಗಳು, ಲಘು ಪೋಷಕಾಂಶಗಳ ಬಗ್ಗೆ ಮಣ್ಣು ಪರೀಕ್ಷೆಯ ಮೂಲಕ ಮಾಹಿತಿ ಪಡೆದು ಅದಕ್ಕೆ ತಕ್ಕಂತೆ ರಸಗೊಬ್ಬರಗಳ ಬಳಕೆ ಮತ್ತು ಬೆಳೆಗಳನ್ನು ನಿರ್ಧರಿಸಬೇಕು. ಇದರಿಂದಾಗಿ ರಸಗೊಬ್ಬರಗಳ ತುತ ಬಳಕೆ ಮತ್ತು ಖರ್ಚು ಕಡಿಮೆ ಮಾಡಿಕೊಳ್ಳಲು ಸಾಧ್ಯವೆಂದರು. ತೋಟಗಾರಿಕೆ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾತನಾಡಿದರು.

ಎಗ್ಗಿಲ್ಲದೇ ಮಣ್ಣು ಗಣಿಗಾರಿಕೆ

ಚಿತ್ರದುರ್ಗ (ಜ.2): ಕೆರೆಯ ಮಣ್ಣು ನಮಗ್ಯಾರು ಕೇಳೋರು ಎಂದು ರಾಷ್ಟ್ರೀಯ ಹೆದ್ದಾರಿಗಾಗಿ PNC ಕಂಪನಿಯವರು ಎಗ್ಗಿಲ್ಲದೇ ಮಣ್ಣು ಗಣಿಗಾರಿಕೆ ಮಾಡ್ತಿದ್ರು ಅಧಿಕಾರಿಗಳು ಮಾತ್ರ ಫುಲ್ ಸೈಲೆಂಟ್. ನಿಯಮಕ್ಕೂ ಮೀರಿ ಮಣ್ಣು ಅಗೆಯುತ್ತಿದ್ರು ಯಾರೂ ಕೇಳ್ತಿಲ್ಲ ಎಂದು ಗೊರ್ಲಕಟ್ಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.  ಹೀಗೆ ಊರಿನವರೆಲ್ಲಾ ಒಂದೆಡೆ ಸೇರಿ ಪಂಚಾಯ್ತಿ ಮಾಡ್ತಿರೋದು ಒಂದೆಡೆಯಾದ್ರೆ, ಮತ್ತೊಂದೆಡೆ ನಮಗ್ಯಾರು ಕೇಳೋರು ಅಂತ ಕೆರೆಯಲ್ಲಿ ಮಣ್ಣು ತೆಗೆಯೋದಕ್ಕೆ ರೆಡಿ ಆಗಿ ನಿಂತಿರೋ ಲಾರಿಗಳು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಗೊರ್ಲಕಟ್ಟೆ ಗ್ರಾಮದ ಬಳಿ. ಇಡೀ ಗ್ರಾಮಕ್ಕೆ ಇರೋದು ಒಂದೇ ಕೆರೆ, ಸುಮಾರು 60ಕ್ಕೂ ಅಧಿಕ ವಿಸ್ತೀರ್ಣ ಇರುವ ಈ ಕೆರೆಯಲ್ಲಿ PNC ಕಂಪನಿಯವರು ರಾಷ್ಟ್ರೀಯ ಹೆದ್ದಾರಿ-17 ರ ಕಾಮಗಾರಿಗಾಗಿ ಮಣ್ಣು ಅಗೆದು ಸಾಗಾಟ ಮಾಡ್ತಿರೋದು ಸರಿಯಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಅಲ್ಲದೇ ಇಡೀ ಗ್ರಾಮದ ಜಾನುವಾರುಗಳು ಹಾಗೂ ರೈತರ ಜಮೀನುಗಳಿಗೆ ಮಣ್ಣು ಬೇಕಾದ್ದಲ್ಲಿ ನಮಗೆ ಅಂತ ಇರೋದು ಇದೊಂದೆ ಅಜ್ಜಯ್ಯನ‌ ಕೆರೆ‌. ಹಾಗಾಗಿ ಅಧಿಕಾರಿಗಳ ಸೂಚಿಸಿರೋ ನಿಯಮವನ್ನೇ ಮೀರಿ ಮಣ್ಣು ಗಣಿಗಾರಿಕೆ ದಂಧೆಕೋರರು ಸಿಕ್ಕಾಪಟ್ಟೆ ಮಣ್ಣು ಅಗೆದಿದ್ದಾರೆ. ಈಗಾಗಲೇ ಭದ್ರಾ ನೀರು ಬಂದಲ್ಲಿ ಈ ಕೆರೆ ತುಂಬಿಸಬೇಕು ಎನ್ನುವ ಪ್ಲಾನ್ ಬೇರೆಯಿದೆ. ಅಂತದ್ರಲ್ಲಿ ಮಣ್ಣು ಧಂಧೆಕೋರರು ರಾತ್ರೋ ಕೆರೆಯಲ್ಲಿ ಸುಮಾರು ಆಳದವರೆಗೆ ಮಣ್ಣು ಅಗೆಯುತ್ತಿರೋದು ಖಂಡನೀಯ ಅಂತ ಗೊರ್ಲಕಟ್ಟೆ ಗ್ರಾಮಸ್ಥ ಮಹಂತೇಶ್ ಆಕ್ರೋಶ ವ್ಯಕ್ತಪಡಿಸಿದರು.

ತುಂಗಾಭದ್ರ ನದಿಯ ಒಡಲು ಬರಿದು ಮಾಡುವ ಮಾಫಿಯಾ: ಅಕ್ರಮ ಮರಳು ಗಣಿಗಾರಿಕೆ ದಂಧೆ

ಇನ್ನೂ ಈ ಮಣ್ಣು ಗಣಿಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ, ಚಳ್ಳಕೆರೆ ಉಪ ತಹಶಿಲ್ದಾರ್ ಅವರನ್ನೇ ವಿಚಾರಿಸಿದ್ರೆ, ಈ ಹಿಂದೆ ಜಿಲ್ಲಾಧಿಕಾರಿಗಳು ಹೆದ್ದಾರಿ ಕಾಮಗಾರಿ ನಡೆಸೋದಕ್ಕೆ ಮಣ್ಣಿನ ಅಗತ್ಯವಿದೆ. ಅದಕ್ಕೆ ಯಾವ ಜಮೀನು ಅಗತ್ಯವಿದೆ ಎಂದು ಸೂಚನೆ ನೀಡಿದ್ದರು. ಅದರಂತೆ ಅಜ್ಜಯ್ಯನ‌ ಕೆರೆಯಲ್ಲಿ ಸೂಚನೆ ಮೇರೆಗೆ ಮಣ್ಣು ತೆಗೆಯೋದಕ್ಕೆ ಡಿಸಿ ಅವರೇ ಆದೇಶ ನೀಡಿದ್ದರು. ಆದ್ರೆ ಅಲ್ಲಿನ ಗ್ರಾಮಸ್ಥರು ಆ ಕೆರೆಯಲ್ಲಿ ಮಿತಿ ಮೀರಿ ಮಣ್ಣು ತೆಗೆಯುತ್ತಿದ್ದಾರೆ ಎಂಬ ಆರೋಪ ಮಾಡ್ತಿದ್ದಾರೆ. ಈ ಕುರಿತು ಕೂಡಲೇ ಕೆಲವೇ ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುವುದು. ಅಲ್ಲಿ ಯಾವುದೇ ಕಂಪನಿಯವರಾಗಲಿ ಮಿತಿ ಮೀರಿ ಮಣ್ಣು ಅಗೆದದ್ದೇ ಆಗಿರಲಿ, ಕಣ್ಣಿಗೆ ಬಿದ್ದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತ ಚಳ್ಳಕೆರೆ ಉಪ ತಹಶಿಲ್ದಾರ್ ಭರವಸೆ ನೀಡಿದರು.

ಚಿತ್ರದುರ್ಗದಲ್ಲಿ ಗಣಿಗಾರಿಗೆ ವಿರೋಧಿಸಿ ಅಂಬೇಡ್ಕರ್ ಸೇನೆ ಬೃಹತ್ ಪ್ರತಿಭಟನೆಗೆ ಪ್ಲಾನ್

ಒಟ್ಟಾರೆ ಜಿಲ್ಲಾಡಳಿತದ ಪರ್ಮಿಷನ್ ಇದೆ ಎಂದು ಖಾಸಗಿ ಕಂಪನಿಯವರು ಮಿತಿ ಮೀರಿ ಕೆಲಸ ಮಾಡ್ತಿರೋದು ಖಂಡನೀಯ. ಇರುವ ಒಂದು ಕೆರೆಯನ್ನು ಜನರು ಸುಮಾರು ವರ್ಷಗಳಿಂದ ಕಾಪಾಡಿಕೊಂಡು ಬರ್ತಿದ್ದಾರೆ. ಈಗ ದುರ್ಬಳಕೆ ಆಗಿ ಮುಂದೆ ಕೆರೆಯೇ ಇಲ್ಲದಂತೆ ಮಾಡಲು ಮುಂದಾಗಿರೋದು ಸರಿಯಲ್ಲ. ಆದ್ದರಿಂದ ಕೂಡಲೇ ಮಣ್ಣ ಗಣಿಗಾರಿಕೆ ನಿಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

click me!