ಉರಿಗೌಡ, ನಂಜೇಗೌಡರ ವಿಚಾರದಲ್ಲಿ ಒಕ್ಕಲಿಗರ ಸಂಘ ಮೌನ ಸರಿಯಲ್ಲ

Published : Mar 19, 2023, 05:46 AM IST
 ಉರಿಗೌಡ, ನಂಜೇಗೌಡರ ವಿಚಾರದಲ್ಲಿ ಒಕ್ಕಲಿಗರ ಸಂಘ ಮೌನ ಸರಿಯಲ್ಲ

ಸಾರಾಂಶ

ಉರಿಗೌಡ, ನಂಜೇಗೌಡ ಅವರು ಟಿಪ್ಪು ಸುಲ್ತಾನ್‌ ಅವರನ್ನು ಕೊಂದು ಹಾಕಿದ್ದಾರೆಂದು ಹೇಳಿ ರಾಜ್ಯದಲ್ಲಿ ಕಿಡಿ ಹತ್ತಿಸುವುದರ ಜೊತೆಗೆ ಮುಸಲ್ಮಾನರು ಮತ್ತು ಒಕ್ಕಲಿಗರ ಸಮುದಾಯದ ನಡುವೆ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಹೀಗಿದ್ದರೂ ಒಕ್ಕಲಿಗರ ಸಂಘ, ಒಕ್ಕಲಿಗರ ಸ್ವಾಮೀಜಿ ಮೌನವಾಗಿರುವುದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.

 ಮೈಸೂರು :  ಉರಿಗೌಡ, ನಂಜೇಗೌಡ ಅವರು ಟಿಪ್ಪು ಸುಲ್ತಾನ್‌ ಅವರನ್ನು ಕೊಂದು ಹಾಕಿದ್ದಾರೆಂದು ಹೇಳಿ ರಾಜ್ಯದಲ್ಲಿ ಕಿಡಿ ಹತ್ತಿಸುವುದರ ಜೊತೆಗೆ ಮುಸಲ್ಮಾನರು ಮತ್ತು ಒಕ್ಕಲಿಗರ ಸಮುದಾಯದ ನಡುವೆ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಹೀಗಿದ್ದರೂ ಒಕ್ಕಲಿಗರ ಸಂಘ, ಒಕ್ಕಲಿಗರ ಸ್ವಾಮೀಜಿ ಮೌನವಾಗಿರುವುದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯವನ್ನು ತೇಜೋವಧೆ ಮಾಡುತ್ತಿದ್ದರೂ ಒಕ್ಕಲಿಗರ ಸಂಘವು ನಿದ್ರೆ ಮಾಡುತ್ತಿದಿಯಾ? ಒಕ್ಕಲಿಗ ಸಂಘದವರಿಗೆ ಸ್ವಾಭಿಮಾನ ಇದ್ದರೆ ಮೊದಲು ಮಾತನಾಡಬೇಕು. ಒಕ್ಕಲಿಗರ ಸಂಘದವರು ಸಿ.ಟಿ. ರವಿ, ಅಶ್ವತ್ಥನಾರಾಯಣ್‌, ಶೋಭಾ ಕರಂದ್ಲಾಜೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಲಿಂಗಾಯತ ವೀರಶೈವರ ಮತಗಳು ಬಿಜೆಪಿಗೆ ಬೇಡ. ಬಿ.ವೈ. ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಸಂಪುಟ ವಿಸ್ತರಿಸದೆ ಕಾಲಾಹರಣ ಮಾಡಲಾಗುತ್ತಿದೆ. ಈ ಸಮುದಾಯ ಬಿಜೆಪಿಗೆ ಪಾಠ ಕಲಿಸಬೇಕು ಎಂದರು.

ಬಹಿರಂಗ ಚರ್ಚೆಗೆ ಬರಲು ಸವಾಲು

ದಲಿತರ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನೀಡಿರುವ ಕೊಡುಗೆಗಳ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರಿಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಸವಾಲು ಹಾಕಿದರು.

ಟಿಪ್ಪು ಸುಲ್ತಾನ್ ನೈಜ ಇತಿಹಾಸ ತಿರುಚಿದ ಗಿರೀಶ್‌ ಕಾರ್ನಾಡ್‌ : ಅಡ್ಡಂಡ ಕಾರ್ಯಪ್ಪ ಆರೋಪ.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಹೇಳಿಕೊಟ್ಟಂತೆ ಮಾತನಾಡುತ್ತಿರುವ ಛಲವಾದಿ ನಾರಾಯಣಸ್ವಾಮಿಗೆ ಛಲವಾದಿ ಎನ್ನುವ ಸ್ವಾಭಿಮಾನ ಇದ್ದರೆ ಮಾತನಾಡುತ್ತಿರಲಿಲ್ಲ. ಕಾಂಗ್ರೆಸ್‌ನಲ್ಲಿ ಹಲವಾರು ವರ್ಷಗಳ ಕಾಲ ತಿಂದು ಉಂಡು ಹೋಗಿರುವ ಛಲವಾದಿ ನಾರಾಯಣಸ್ವಾಮಿ ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಅವರ ಸಾವಿಗೆ ಸಿದ್ದರಾಮಯ್ಯ, ಡಾ.ಎಚ್‌.ಸಿ. ಮಹದೇವಪ್ಪ ಕಾರಣವೆಂದು ಹೇಳಿರುವುದು ನಾಚಿಕೆಗೇಡು ಎಂದು ಅವರು ಕಿಡಿಕಾರಿದರು.

ಮೈಸೂರು ಹಾಗೂ ಬೆಂಗಳೂರು ದಶಪಥ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅವೈಜ್ಞಾನಿಕ ಟೋಲ್‌ ಹಣ ಸಂಗ್ರಹಿಸಿ ಸವಾರರಿಗೆ ನಷ್ಟಕ್ಕೆ ಕಾರಣವಾಗಿದ್ದಾರೆ. ನಾಲ್ಕು ಕಡೆಗಳಲ್ಲಿ ನೀರು ಬ್ಲಾಕ್‌ ಆಗುತ್ತಿರುವ ಕಾರಣ ಹೊರ ಹೋಗುವುದಕ್ಕೆ ವ್ಯವಸ್ಥೆ ಮಾಡಿಲ್ಲ ಎಂದು ಅವರು ಕಿಡಿಕಾರಿದರು.

ಮಾಜಿ ಮೇಯರ್‌ ಅಯೂಬ್‌ ಖಾನ್‌, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ, ಮುಖಂಡರಾದ ಈಶ್ವರ್‌ ಚಕ್ಕಡಿ, ಗಿರೀಶ್‌, ಶ್ರೀಧರ್‌, ತಿವಾರಿ ಇದ್ದರು

ಟಿಪ್ಪು ಮತಾಂಧನಾಗಿರಲಿಲ್ಲ

ಚಿತ್ರದುರ್ಗ (ಮಾ.12) : ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯ ಅತ್ಯಂತ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದು ಉರಿಗೌಡ, ನಂಜೇಗೌಡ ಪಾತ್ರಗಳಿಂದ ಇತಿಹಾಸ ತಿರುಚುವ ಯತ್ನ ಮಾಡಲಾಗುತ್ತಿದೆ ಎಂದು ಕವಿ ಹಾಗೂ ವಿಮರ್ಶಕ ಚಂದ್ರಶೇಖರ ತಾಳ್ಯ ಅಭಿಪ್ರಾಯಪಟ್ಟರು.

ಬಂಡಾಯ ಸಾಹಿತ್ಯ ಸಂಘಟನೆಗೆ 44 ವರ್ಷ ಸಂದ ಹಿನ್ನೆಲೆಯಲ್ಲಿ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಕಾಲೀನ ಸಾಹಿತ್ಯ ಮತ್ತು ಸಾಂಸ್ಕೃತಿಕ ತಲ್ಲಣಗಳು ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು ಟಿಪ್ಪುವಿನ ವ್ಯಕ್ತಿತ್ವ ಹಾಗೂ ರಾಜನಾಗಿ ಆತ ಇಟ್ಟು ನಡೆಗಳ ಈಗ ಕೆಟ್ಟದಾಗಿ ವಿಮರ್ಶೆ ಮಾಡುವ ಪರಿಪಾಟಲು ಆರಂಭವಾಗಿದೆ. ಟಿಪ್ಪು(Tippu sultana) ಎಂದಿಗೂ ಧರ್ಮಾಂಧನಾಗಿರಲಿಲ್ಲ. ಒಬ್ಬ ರಾಜನನ್ನು ಕಂಡರೆ ಮತ್ತೊಬ್ಬ ರಾಜನಿಗೆ ಆಗುತ್ತಿರಲಿಲ್ಲವೆಂಬುದು ಆ ಕಾಲಘಟ್ಟದಲ್ಲಿ ರುಜುವಾತಾಗಿದೆ. ಸೋಮನಾಥ ದೇವಾಲಯವನ್ನು ಘಜ್ನಿ ಮಹಮ್ಮದ್‌ ಲೂಟಿ ಮಾಡಿದನೆಂಬುದರಲ್ಲಿ ಸತ್ಯಾಂಶವಿಲ್ಲ. ರಾಜ ಚೋಳ ಲೂಟಿ ಮಾಡಿದ್ದ. ಅಂದು ವ್ಯಾಪಕವಾಗಿದ್ದ ಸಾಮ್ರಾಜ್ಯ ವಿಸ್ತರಣೆಯ ತುಡಿತದಿಂದ ಇಂತಹ ಅವಘಡಗಳು ಸಂಭವಿಸಿರಬಹುದು. ಟಿಪ್ಪುವಿನಿಂದಲೂ ಇಂತಹ ಕೆಲ ಕೆಲಸಗಳು ನಡೆದಿರಬಹುದು. ಆದರೆ ಟಿಪ್ಪು ಒಳ್ಳೆಯ ಆಡಳಿತ ಕೊಡಲಿಲ್ಲ, ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲವೆಂದು ಹೇಳುತ್ತಾ ಉರಿಗೌಡ, ನಂಜೇಗೌಡ ಪಾತ್ರಗಳನ್ನು ಸೃಷ್ಟಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಯಾವ ಧರ್ಮದ ತಿರುಳು ಕೊಲ್ಲು ಎಂದು ಹೇಳಿಲ್ಲ. ವಚನಕಾರರ ಕಾಲದಲ್ಲಿಯೂ ದಯವೇ ಧರ್ಮದ ಮೂಲವೆಂಬ ನಿಜಾಚರಣೆಗಳು ಇದ್ದವು. ಧರ್ಮದ ಗ್ರಹಿಕೆಯಲ್ಲಿ ಲೋಪ ಗಳು ಆಗಬಾರದು. ಭಾರತೀಯ ತತ್ವಶಾಸ್ತ್ರದಲ್ಲಿ ಧರ್ಮ, ಜಾತಿಯ ಉಲ್ಲೇಖವಿಲ್ಲ. ದೇವರನ್ನೂ ಹೊರಗಿಟ್ಟು ಚಿಂತನೆಗಳನ್ನು ನಡೆಸಲಾಗಿದೆ. ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು, ಯಾವುದನ್ನು ಗೌಣವಾಗಿಸಬೇಕೆಂಬ ಆಲೋಚನೆಗಳ ಕ್ರಮದಲ್ಲಿ ವ್ಯತ್ಯಾಸಗಳಾಗಿವೆ ಎಂದರು.

PREV
click me!

Recommended Stories

ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!