ಚನ್ನರಾಯಪಟ್ಟಣ (ಜೂ.28): ತಾಲೂಕಿನ ಬಾಗೂರು ಹೋಬಳಿ ದ್ಯಾವೇನಹಳ್ಳಿ ಗ್ರಾಮದ ಬಳಿಯಲ್ಲಿನ ಹೇಮಾವತಿ ನಾಲೆಗೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಈ ಮೂಲಕ ಅಕ್ಕಪಕ್ಕದ ಗ್ರಾಮಗಳಲ್ಲಿನ ಜನರಲ್ಲಿ ಆತಂಕ ಮೂಡಿದೆ.
ಬಾಗೂರು ಬಳಿ ಹಾದು ಹೋಗಿರುವ ಹೇಮಾವತಿ ನಾಲೆಯ ಬಳಿ 2 ದಿನಗಳ ಹಿಂದೆ ಭಾರೀ ಪ್ರಮಾಣದಲ್ಲಿ ಅಂದಾಜು 80 ಅಡಿ ಎತ್ತರದಿಂದ ನಾಲೆಗೆ ಮಣ್ಣು ಕುಸಿದಿದೆ. ವಿಷಯ ತಿಳಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಧಾದೇವಿಯ ಶಾಪ, ಗಂಗೆಗಾಗಿ ಹುಡುಕಾಟ, ಮುಂದೆ ನದಿಯಾಗಿ ಅವತರಿಸಿದ ಗಂಗೆ
ನಿಗಮದ ಕಾರ್ಯಪಾಲಕ ಇಂಜಿನಿಯರ್ ಎಂಕೆ ಗುಂಡಪ್ಪ ಈ ಬಗ್ಗೆ ಮಾತನಾಡಿ ಸುರಂಗ ಮಾರ್ಗದ ಪಕ್ಕದಲ್ಲೇ ಭಾರೀ ಪ್ರಮಾಣದಲ್ಲಿ ಮನ್ಣು ಕಲ್ಲು ಕುಸಿದು ಬಿದ್ದಿರುವ ಬಗ್ಗೆ ಮಣ್ಣು ಕುಸಿದು ಬಿದ್ದಿರುವ ಬಗ್ಗೆ ಮೆಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಅತೀ ಶೀಘ್ರವಾಗಿ ನಾಲೆಯಲ್ಲಿ ಬಿದ್ದಿರುವ ಮಣ್ಣು ಹಾಗೂ ಕಲ್ಲನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಹೇಮಾವರಿ ಜಲಾಶಯ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ನೀರು ಬಿಡುವ ಸಂಭವವಿರುವುದರಿಂದ ಅತೀ ಬೇಗ ತೆರವು ಮಾಡಲಾಗುವುದು ಎಂದರು.