ಮೋಜಿಗೆ ನಂದಿ ಬೆಟ್ಟಕ್ಕೆ ಬಂದ ಪ್ರವಾಸಿಗರಿಗೆ ಕರ್ಫ್ಯೂ ಬಿಸಿ

By Kannadaprabha NewsFirst Published Jun 28, 2021, 11:36 AM IST
Highlights
  • ನೂರಾರು ಕಿ.ಮೀ ದೂರದಿಂದ ಬಂದವರಿಗೆ ಕಾಡಿದ್ದು ಮಾತ್ರ ಕೊರೋನಾ ಕರ್ಫ್ಯೂ ಬಿಸಿ.
  • ನಂದಿಗಿರಿಧಾಮಕ್ಕೆ ಭಾನುವಾರ ವಾರಾಂತ್ಯದ ಹಿನ್ನಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನ
  • ವಾರಾಂತ್ಯದ ಮೋಜು, ಮಸ್ತಿಗೆ ಬಂದವರನ್ನು ಅರ್ಧಕ್ಕೆ ಬೆಟ್ಟದಿಂದ ಕೆಳಗೆ ಇಳಿಸಿದ ಅಧಿಕಾರಿಗಳು

ಚಿಕ್ಕಬಳ್ಳಾಪುರ (ಜೂ.28):  ಅವರೆಲ್ಲಾ ವಾರಾಂತ್ಯದ ಮೋಜು, ಮಸ್ತಿಗಾಗಿ ಅಲ್ಲಿಗೆ ಭೇಟಿ ಕೊಟ್ಟಿದ್ದರು. ಜಿನುಗುಡುತ್ತಿದ್ದ ತಂಪಾದ ತುಂತರು ಮಳೆಯಲ್ಲಿ ತಮ್ಮದೇ ಆದ ಲೋಕದಲ್ಲಿ ವಿರಮಿಸುತ್ತಿದ್ದರು. ಗಿರಿಧಾಮದ ಪ್ರಾಕೃತಿಯ ಸೌಂದರ್ಯ ಸವಿಯಲು ನೂರಾರು ಕಿ.ಮೀ ದೂರದಿಂದ ಬಂದವರಿಗೆ ಕಾಡಿದ್ದು ಮಾತ್ರ ಕೊರೋನಾ ಕರ್ಫ್ಯೂ ಬಿಸಿ.

ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಭಾನುವಾರ ವಾರಾಂತ್ಯದ ಹಿನ್ನಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಪ್ರೇಮಿಗಳು ನಂದಗಿರಿಧಾಮಕ್ಕೆ ಆಗಮಿಸಿದ್ದರು. ಆದರೆ ಜನ ಹೆಚ್ಚಾದಂತೆ ಎಚ್ಚೆತ್ತಿಕೊಂಡ ಗಿಧಾಮದ ಅಧಿಕಾರಿಗಳು ವಾರಾಂತ್ಯದ ಮೋಜು, ಮಸ್ತಿಗೆ ಬಂದವರನ್ನು ಅರ್ಧಕ್ಕೆ ಬೆಟ್ಟದಿಂದ ಕೆಳಗೆ ಇಳಿಸಿ ಪ್ರವೇಶ ದ್ವಾರದ ಬಾಗಿಲಿಗೆ ಬೀಗ ಹಾಕಿದರು.

ಗಿರಿಧಾಮದಲ್ಲಿ ಆಗಿದ್ದೇನು?

ಕೊರೋನಾ ಸೆಮಿ ಲಾಕ್‌ಡೌನ್‌ ಬಳಿಕ ಬರೋಬ್ಬರಿ 2 ತಿಂಗಳ ನಂತರ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮ ಪ್ರವಾಸಿಗರಿಗೆ ಮುಕ್ತವಾಗಿತ್ತು. ಸಹಜವಾಗಿಯೆ ವೀಕೆಂಡ್‌ನಲ್ಲಿ ಗಿರಿಧಾಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ಶನಿವಾರ, ಭಾನುವಾರ ಕೂಡ ಪ್ರವಾಸಿಗರಿಗೆ ಮುಕ್ತವಾಗಿತ್ತು.

ಕೊರೋನಾ ಎಫೆಕ್ಟ್: ಭಣಗುಡುತ್ತಿದೆ ನಂದಿಗಿರಿಧಾಮ

ಆದರೆ ಭಾನುವಾರ ವಾರಾಂತ್ಯದ ಹಿನ್ನಲೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಗಿರಿಧಾಮಕ್ಕೆ ಜನ ಲಗ್ಗೆ ಇಟ್ಟಿದ್ದರು. ಕೊರೋನಾ ಕರ್ಫ್ಯೂ ಇದ್ದರೂ ಪ್ರವಾಸಿಗರನ್ನು ಮೋಜು, ಮಸ್ತಿಯಲ್ಲಿ ತೇಲಾಡಲು ಬಿಟ್ಟಜಿಲ್ಲಾಡಳಿತದ ಕ್ರಮ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಪೊಲೀಸ್‌ ಇಲಾಖೆ ಅಧಿಕಾರಿಗಳು ನಂದಿಗಿರಿಧಾಮ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಧಿಕಾರಿಗಳ ವರ್ತನೆಗೆ ಟೀಕೆ

ಆಗ ನಂದಿಗಿರಿಧಾಮದಲ್ಲಿದ್ದ ಯುವಕ, ಯುವತಿಯರನ್ನು ಹಾಗೂ ಪ್ರವಾಸಿಗರನ್ನು ಅಲ್ಲಿನ ಅಧಿಕಾರಿಗಳು ಗಿರಿಧಾಮದಿಂದ ಕೆಳಗೆ ಇಳಿಸಿ ಪ್ರವೇಶ ದ್ವಾರಕ್ಕೆ ಬೀಗ ಹಾಕಿದ್ದಾರೆ. ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದರೂ ಅಧಿಕಾರಿಗಳು ಗಿರಿಧಾಮಕ್ಕೆ ಪ್ರವಾಸಿಗರನ್ನು ಬಿಟ್ಟಪರಿ ಸಾಕಷ್ಟುಟೀಕೆಗೆ ಗುರಿಯಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!