ಲಂಡನ್‌ನಲ್ಲಿ ಟೆಕ್ಕಿ ಆತ್ಮಹತ್ಯೆ: ಇಂದು ಬೆಂಗಳೂರಿಗೆ ಶವ

By Kannadaprabha News  |  First Published May 10, 2020, 7:13 AM IST

ಲಂಡನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹುಬ್ಬಳ್ಳಿ ಮೂಲದ ಟೆಕ್ಕಿ ಶಿವರಾಜ ಪಾಟೀಲ| ಮಾ.13ರಂದು ಆತ್ಮಹತ್ಯೆ ಮಾಡಿಕೊಂಡ ಶಿವರಾಜ ಪಾಟೀಲ| ಅಂತ್ಯಸಂಸ್ಕಾರವನ್ನು ಭಾರತದಲ್ಲೇ ನಡೆಸಬೇಕೆಂದು ಪಾಲಕರು ಪಟ್ಟು ಹಿಡಿದಿದ್ದರಿಂದ 59 ದಿನಗಳಿಂದಲೂ ಶವದ ಅಂತ್ಯಸಂಸ್ಕಾರ ನಡೆಸದೆ ಲಂಡನ್‌ ಆಸ್ಪತ್ರೆಯೊಂದರಲ್ಲಿ ರಕ್ಷಿಸಿಡಲಾಗಿತ್ತು|
 


ಹುಬ್ಬಳ್ಳಿ(ಮೇ.10): ಲಂಡನ್‌ನಲ್ಲಿ 59 ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದ ಹುಬ್ಬಳ್ಳಿ ಮೂಲದ ಎಂಜಿನಿಯರ್‌(ಟೆಕ್ಕಿ) ಶಿವರಾಜ ಪಾಟೀಲ ಅವರ ಶವ ಇಂದು(ಭಾನುವಾರ) ಬರಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

ಮಾ.13ರಂದು ಆತ್ಮಹತ್ಯೆ ಮಾಡಿಕೊಂಡ ಶಿವರಾಜ ಅವರ ಅಂತ್ಯಸಂಸ್ಕಾರವನ್ನು ಭಾರತದಲ್ಲೇ ನಡೆಸಬೇಕೆಂದು ಪಾಲಕರು ಪಟ್ಟು ಹಿಡಿದಿದ್ದರಿಂದ 59 ದಿನಗಳಿಂದಲೂ ಶವದ ಅಂತ್ಯಸಂಸ್ಕಾರ ನಡೆಸದೆ ಲಂಡನ್‌ ಆಸ್ಪತ್ರೆಯೊಂದರಲ್ಲಿ ರಕ್ಷಿಸಿಡಲಾಗಿತ್ತು. ಶವ ವಾಪಸ್‌ ತರಲು ನೆರವು ನೀಡುವಂತೆ ಶಿವರಾಜ ಪೋಷಕರು 15 ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಜೋಶಿ ಅವರಿಗೆ ಮನವಿ ಮಾಡಿಕೊಂಡಿದ್ದರು. 

Tap to resize

Latest Videos

ಲಾಕ್‌ಡೌನ್‌ ಎಫೆಕ್ಟ್‌: ಲಂಡನ್‌ನಲ್ಲಿ ಟೆಕ್ಕಿ ಆತ್ಮಹತ್ಯೆ, 50 ದಿನಗಳಾದ್ರೂ ಭಾರತಕ್ಕೆ ಬಾರದ ಮೃತದೇಹ

ಈ ಪ್ರಕರಣದಲ್ಲಿದ್ದ ಕೆಲ ತಾಂತ್ರಿಕ ಅಡೆತಡೆಗಳಿದ್ದ ಕಾರಣ ಕೇಂದ್ರ ಸರ್ಕಾರದ ಮಟ್ಟದಲ್ಲಿ ಅವುಗಳನ್ನು ಪರಿಹರಿಸಿದ ಹಿನ್ನೆಲೆಯಲ್ಲಿ ಇದೀಗ ಶವವನ್ನು ಹುಟ್ಟೂರಲ್ಲೇ ಅಂತ್ಯಸಂಸ್ಕಾರ ಮಾಡುವುದು ಸಾಧ್ಯವಾಗುತ್ತಿದೆ. ಲಾಕ್‌ಡೌನ್‌ ಬಳಿಕ ಲಂಡನ್‌ನಿಂದ ಬೆಂಗಳೂರಿಗೆ ಮೇ 1೦ರಂದು ಮೊದಲ ವಿಮಾನ ಬರುತ್ತಿರುವ ಹಿನ್ನೆಲೆಯಲ್ಲಿ ಅದೇ ವಿಮಾನದಲ್ಲಿ ಶಿವರಾಜ ಪಾಟೀಲ ಶವ ಹಾಗೂ ಅವರ ಪತ್ನಿ, ಪುಟ್ಟಮಗು ಬರುವ ಸಾಧ್ಯತೆ ಇದೆ.
 

click me!