ಪತ್ನಿ ಮಕ್ಕಳ ನೋಡಲು ಟ್ರಕ್‌ನಲ್ಲಿ ಬಂದ ಬಾಗಲಕೋಟೆ ಕಾರ್ಮಿಕ!

Published : May 10, 2020, 07:09 AM IST
ಪತ್ನಿ ಮಕ್ಕಳ ನೋಡಲು ಟ್ರಕ್‌ನಲ್ಲಿ ಬಂದ ಬಾಗಲಕೋಟೆ ಕಾರ್ಮಿಕ!

ಸಾರಾಂಶ

ಬಾಗಲಕೋಟೆಯಿಂದ ತನ್ನ ಪತ್ನಿ- ಮಗುವನ್ನು ಭೇಟಿಯಾಗಲು ವಲಸೆ ಕಾರ್ಮಿಕರೊಬ್ಬರು ಟ್ರಕ್‌ನಲ್ಲಿ ಮಂಗಳೂರಿನ ಉರ್ವಕ್ಕೆ ಆಗಮಿಸಿದ ಘಟನೆ ಶನಿವಾರ ನಡದಿದೆ. ಲಾಕ್‌ಡೌನ್‌ನಿಂದ ಕುಟುಂಬ ಸದಸ್ಯರೇ ದೂರ ದೂರ ಇದ್ದಲ್ಲೇ ಉಳಿಯಬೇಕಾದ ಅನಿವಾರ್ಯತೆ ಇದೆ.  

ಮಂಗಳೂರು(ಮೇ 10): ಬಾಗಲಕೋಟೆಯಿಂದ ತನ್ನ ಪತ್ನಿ- ಮಗುವನ್ನು ಭೇಟಿಯಾಗಲು ವಲಸೆ ಕಾರ್ಮಿಕರೊಬ್ಬರು ಟ್ರಕ್‌ನಲ್ಲಿ ಮಂಗಳೂರಿನ ಉರ್ವಕ್ಕೆ ಆಗಮಿಸಿದ್ದು, ಆತಂಕಗೊಂಡ ಸ್ಥಳೀಯರು ನೀಡಿದ ಮಾಹಿತಿಯಂತೆ ಅವರನ್ನು ವೈದ್ಯಕೀಯ ತಪಾಸಣೆಗಾಗಿ ವೆನ್ಲಾಕ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಲಾಕ್‌ಡೌನ್‌ ಘೋಷಣೆಗೆ ಮೊದಲು ಈ ಕಾರ್ಮಿಕ ಬಾಗಲಕೋಟೆಗೆ ತೆರಳಿದ್ದರು. ಅವರ ಪತ್ನಿ ಮತ್ತು ಮಕ್ಕಳು ಉರ್ವದ ಬಾಡಿಗೆ ಮನೆಯಲ್ಲೇ ಇದ್ದರು. ಲಾಕ್‌ಡೌನ್‌ ಬಳಿಕ ಬಾಗಲಕೋಟೆಯಿಂದ ಬರಲು ಸಾಧ್ಯವಾಗಿರಲಿಲ್ಲ. ಕೊನೆಗೂ ಹೇಗಾದರೂ ಮಾಡಿ ಪತ್ನಿ- ಮಕ್ಕಳನ್ನು ನೋಡುವ ಬಯಕೆಯಿಂದ ಟ್ರಕ್‌ವೊಂದನ್ನು ಏರಿ ಮಂಗಳೂರಿಗೆ ಶುಕ್ರವಾರ ಬಂದಿದ್ದರು.

ಪಾಸ್ ಇಲ್ಲ, ಮಾಸ್ಕ್ ಇಲ್ಲ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕ ಮೇಲೆ ಕೇಸ್!

ಈ ವಿಚಾರ ಸ್ಥಳೀಯರಿಗೆ ಗೊತ್ತಾಗಿದ್ದು, ಆತನನ್ನು ಕೋವಿಡ್‌ 19 ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಶನಿವಾರ ಅವರನ್ನು ತಪಾಸಣೆಗೆ ವೆನ್ಲಾಕ್‌ಗೆ ಕರೆದೊಯ್ಯಲಾಯಿತು.

PREV
click me!

Recommended Stories

28 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ, 'ಇದು ಸೂಕ್ತ ಸಮಯವಲ್ಲ' ವಾರ್ನಿಂಗ್‌ ನೀಡಿದ IMD
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?