ಬಾದಾಮಿಯಲ್ಲಿ ಸಮಸ್ಯೆಗಳ ಸರಮಾಲೆ: ಶಾಸಕ ಚಿಮ್ಮನಕಟ್ಟಿಗಿದೆ ಟಫ್‌ ಚಾಲೆಂಜ್‌..!

By Kannadaprabha NewsFirst Published May 17, 2023, 11:57 AM IST
Highlights

ಒಟ್ಟಿನಲ್ಲಿ ಬಾದಾಮಿ ತಾಲೂಕಿನಲ್ಲಿ ಇನ್ನೂ ಅನೇಕ ಸಮಸ್ಯೆಗಳು ಸರಮಾಲೆಯೇ ಇದ್ದು, ಆ ಸಮಸ್ಯೆಗಳಿಗೆ ನೂತನ ಶಾಸಕರು ಮದ್ದು ನೀಡುವುದು ಅಗತ್ಯವಾಗಿದೆ. ಈ ಮೂಲಕ ಮತಕ್ಷೇತ್ರ ಅಭಿವೃದ್ಧಿ ಮಾಡಿ, ಅಲ್ಲಿಯ ಜನರಿಗೆ ಉತ್ತಮ ಜೀವನ ನಡೆಸಲು ಅನುಕೂಲ ಮಾಡಿ ಜನರ ಋುಣ ತೀರಬೇಕಾಗಿದೆ.
 

ಶಂಕರ ಕುದರಿಮನಿ

ಬಾದಾಮಿ(ಮೇ.17): ಐತಿಹಾಸಿಕ ನಗರಿ, ಚಾಲುಕ್ಯರ ರಾಜಧಾನಿ ಎಂದೇ ಕರೆಸಿಕೊಳ್ಳುವ ಬಾದಾಮಿ ತನ್ನದೇ ಆದ ಗತ ಇತಿಹಾಸದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇಂತಹ ಐತಿಹಾಸಿಕ ನಗರಿಯಲ್ಲೂ ಅನೇಕ ಸಮಸ್ಯೆ, ಸವಾಲುಗಳಿದ್ದು, ಆ ಸಮಸ್ಯೆಗಳಿಗೆ ನೂತನ ಶಾಸಕರು ಪರಿಹಾರ ಒದಗಿಸಿ, ಪ್ರವಾಸಿಗರನ್ನು ಸೆಳೆಯಲು ನಾನಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.

ಮೊದಲ ಪ್ರಯತ್ನದಲ್ಲೇ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಶಾಸಕ ಸ್ಥಾನ ಒಲಿದಿದೆ. ಹೀಗಾಗಿ ಇದೀಗ ಅವರ ಮೇಲೆ ದೊಡ್ಡ ಜವಾಬ್ದಾರಿ ಇದ್ದು, ಆ ಜವಾಬ್ದಾರಿಯನ್ನು ಹೇಗೆ ನಿಭಾಯಿಸಲಿದ್ದಾರೆ. ಜನರ ಆಶೋತ್ತರಗಳಿಗೆ ಹೇಗೆ? ಸ್ಪಂದಿಸುತ್ತಾರೆ ಎಂಬುವುದು ಜನರಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ. ಕಳೆದ ಸಾಲಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿದ ಬಾದಾಮಿ ಮತಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಕೆಲಸ ಮಾಡಿದ್ದಾರೆ. ಅದರಲ್ಲಿ ಇನ್ನು ಸ್ವಲ್ಪ ಪ್ರಮಾಣದ ಕಾಮಗಾರಿಗಳು ಚಾಲ್ತಿಯಲ್ಲಿವೆ. ಅವುಗಳು ಸರಿಯಾದ ರೀತಿಯಲ್ಲಿ ಕಾಮಗಾರಿಗಳು ಆಗುವ ಹಾಗೆ ನೂತನ ಶಾಸಕರು ಗಮನ ಹರಿಸಬೇಕು. ಕಳೆದ ಬಾರಿ ಬಾದಾಮಿ ಶಾಸಕರಾದ ಸಿದ್ದರಾಮಯ್ಯನವರು ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ಇರುವುದರಿಂದ ಬಾದಾಮಿ ತಾಲೂಕಿನ ಜನರ ಋುಣ ತೀರಿಸಲು ಅವರಿಗೆ ಸಾಕಷ್ಟುಅವಕಾಶಗಳಿವೆ.

ಲಿಂಗಾಯತರನ್ನು ಯಾಮಾರಿಸಿದೆ ಕಾಂಗ್ರೆಸ್‌: ಮುರುಗೇಶ ನಿರಾಣಿ

ಪಕ್ಷಾತೀತವಾಗಿ ಅಭಿವೃದ್ಧಿಗೆ ಶ್ರಮಿಸಲಿ:

ಸಿದ್ದರಾಮಯ್ಯ ಅವರೇ ಮಾತು ನೀಡಿದ ಹಾಗೆ ಬಾದಾಮಿ ಕ್ಷೇತ್ರವನ್ನು ದತ್ತು ಗ್ರಾಮವನ್ನಾಗಿ ಪಡೆದು ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಈ ಭಾಗದ ಜನರಿಗೆ ಚುನಾವಣೆ ಮುಂಚೆ ಪ್ರಚಾರಕ್ಕೆ ಆಗಮಿಸಿದಾಗ ಮಾತು ಕೊಟ್ಟು ಹೋಗಿದ್ದಾರೆ. ಹೀಗಾಗಿ ಬಾದಾಮಿ ಅಭಿವೃದ್ಧಿ ಬಗ್ಗೆ ಜನರಿಗೆ ಸಾಕಷ್ಟುನಿರೀಕ್ಷೆಗಳು ಇವೆ. ಆದರೆ, ನೂತನ ಶಾಸಕರು ಶ್ರಮವಹಿಸಿ ಪಕ್ಷಾತೀತವಾಗಿ ಎಲ್ಲರನ್ನು ಗಣನೆಗೆ ತೆಗೆದಕೊಂಡು ಜಾತಿ, ಮತ, ಪಂಥ, ವಿರೋಧಿಗಳು, ಬೇಧ, ಭಾವಗಳನ್ನು ಮರೆತು ತಾಲೂಕಿನ ಅಭಿವೃದ್ಧಿ ಕಾರ‍್ಯಗಳಿಗೆ ಶ್ರಮಿಸಬೇಕಾಗಿದೆ.

ಪ್ರವಾಸಿ ತಾಣ:

ಇಲ್ಲಿ ಮುಖ್ಯವಾಗಿ ಬರುವ ಪ್ರವಾಸಿಗಳಿಗೆ ಹೆಚ್ಚಿನ ಸೌಕರ್ಯಗಳನ್ನು ನೀಡಬೇಕು. ಬಾದಾಮಿ ಅಗಸ್ತ್ಯ ತೀರ್ಥ ದಂಡೆ ಮೇಲಿರುವ 96 ಮನೆಗಳ ಸ್ಥಳಾಂತರ ಮಾಡಿ ಅಲ್ಲಿರುವ ಜನರಿಗೆ ಸರಿಯಾದ ರೀತಿಯಲ್ಲಿ ಅವರ ಬೇಡಿಕೆಗಳನ್ನು ಪೂರೈಸಿ ಸ್ಥಳಾಂತರಿಸಿ ಪ್ರವಾಸಿ ತಾಣವನ್ನು ಅಭಿವೃದ್ಧಿ ಮಾಡಬೇಕಾಗಿದೆ.

ಸ್ಮಶಾನ ಇಲ್ಲ:

ಬಾದಾಮಿಯಲ್ಲಿ ಕೆಲವು ಲಿಂಗಾಯದ ಸಮುದಾಯದವರಿಗೆ ಇಲ್ಲಿವರೆಗೆ ಶವಸಂಸ್ಕಾರಕ್ಕೆ ರುದ್ರಭೂಮಿ ಇಲ್ಲ. ಇದಕ್ಕಾಗಿ ನಗರದ ಅನೇಕ ಜನರು ಹೋರಾಟ ಮಾಡಿದರೂ ಪ್ರಯೋಜವಾಗಿಲ್ಲ. ಕಳೆದ ಬಾರಿ ಶಾಸಕರಾದ ಸಿದ್ದರಾಮಯ್ಯನವರಿಗೂ ಮನವಿ ಸಲ್ಲಿಸಿದರೂ ಪ್ರಯೋಜನೆಯಾಗಿಲ್ಲ.

ಜವಳಿ ಪಾರ್ಕ್ ಬೇಕು:

ಬಾದಾಮಿ ತಾಲೂಕಿನ ಮತಕ್ಷೇತ್ರಕ್ಕೆ ಒಳಪಡುವ ದೊಡ್ಡ ನಗರ ಗುಳೇದಗುಡ್ಡದಲ್ಲಿ ಹೆಚ್ಚು ನೇಕಾರ ಸಮುದಾಯ ಇರುವುದರಿಂದ ಅವರಿಗೆ ಜವಳಿ ಪಾರ್ಕ್ ನಿರ್ಮಿಸುತ್ತೇನೆ ಎಂದು ಕಳೆದ ಬಾರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದರು. ಹೀಗಾಗಿ ನೂತನ ಶಾಸಕರ ಮುಂದೆ ಈ ಜವಳಿ ಪಾರ್ಕ್ ನಿರ್ಮಾಣದ ಹೊಣೆ ಕೂಡಾ ಇದೆ.\

ಪಾದಚಾರಿ ರಸ್ತೆ ಸಮಸ್ಯೆ:

ಬಾದಾಮಿ ನಗರದಲ್ಲಿ ಪಾದಚಾರಿ ಸಮಸ್ಯೆ ಬಳಷ್ಟು ಇದೆ. ಅದನ್ನು ನಿರ್ವಹಿಸಬೇಕು ಮತ್ತು ಸುಪ್ರಸಿದ್ಧ ಚಾಲುಕ್ಯರ ಆರಾಧ್ಯ ದೇವತೆ ಬನಶಂಕರಿ ದೇವಿ ಇರುವ ತಾಣವಾಗಿದ್ದು, ಬಾದಾಮಿಯಿಂದ ಬನಶಂಕರಿವರೆಗೆ 4 ಕಿ.ಮೀ. ಪಾದಚಾರಿ ರಸ್ತೆ ನಿರ್ಮಾಣವಾಗಿದ್ದರೂ ಅದು ಸಂಪೂರ್ಣವಾಗಿ ಕಳಪೆಯಾಗಿದೆ. ಇದರ ಬಗ್ಗೆ ಸಾಕಷ್ಟುಭಾರೀ ಪತ್ರಿಕೆಯಲ್ಲಿ ಪ್ರಕಟವಾದರೂ ಅಧಿಕಾರಿಗಳ ಸ್ಫಂದಿಸಿಲ್ಲ. ಅದನ್ನು ಗಮನ ಹರಿಸಿ ದುರಸ್ತಿ ಮಾಡುವ ಕೆಲಸವಾಗಬೇಕು. ಏಕೆಂದರೆ ಜಾತ್ರೆ ಸಂದರ್ಭದಲ್ಲಿ ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ಬರುವ ಭಕ್ತಾದಿಗಳಿಗೆ ತೊಂದರೆಯಾಗುತ್ತದೆ.

Mudhol Election Result 2023: ಮುಧೋಳದಲ್ಲಿ ಗೋವಿಂದ ಕಾರಜೋಳಗೆ ಸೋಲು

ಒಟ್ಟಿನಲ್ಲಿ ಬಾದಾಮಿ ತಾಲೂಕಿನಲ್ಲಿ ಇನ್ನೂ ಅನೇಕ ಸಮಸ್ಯೆಗಳು ಸರಮಾಲೆಯೇ ಇದ್ದು, ಆ ಸಮಸ್ಯೆಗಳಿಗೆ ನೂತನ ಶಾಸಕರು ಮದ್ದು ನೀಡುವುದು ಅಗತ್ಯವಾಗಿದೆ. ಈ ಮೂಲಕ ಮತಕ್ಷೇತ್ರ ಅಭಿವೃದ್ಧಿ ಮಾಡಿ, ಅಲ್ಲಿಯ ಜನರಿಗೆ ಉತ್ತಮ ಜೀವನ ನಡೆಸಲು ಅನುಕೂಲ ಮಾಡಿ ಜನರ ಋುಣ ತೀರಬೇಕಾಗಿದೆ.

ತಾಲೂಕಿನ ಜನ ನನಗೆ ಮತ ನೀಡಿ ಆಶೀರ್ವಾದ ಮಾಡಿದ್ದಾರೆ. ಅವರ ಋುಣ ತೀರಿಸಲು ನಿರಂತ ಶ್ರಮ ಪಡುತ್ತೇನೆ. ನಮ್ಮ ತಂದೆ ತಾಯಿ, ಕ್ಷೇತ್ರದ ಜನತೆ ಆಶೀರ್ವಾದ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಾಹೇಬ್ರ 5 ವರ್ಷಗಳ ಕಾಲ ಸಾವಿರಾರು ಕೋಟಿ ಅನುದಾನವನ್ನು ತಂದು ಕ್ಷೇತ್ರಕ್ಕೆ ಕೆಲಸವನ್ನು ಮಾಡಿದರ ಫಲವೇ ನನ್ನ ಗೆಲುವಿಗೆ ಕಾರಣವಾಗಿದೆ. ಅವರೇ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಪಡೆದರೆ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ ಅಂತ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ತಿಳಿಸಿದ್ದಾರೆ. 

click me!