ದಕ್ಷಿಣ ಕನ್ನಡದಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೇತ್ರಾವತಿ ಉಕ್ಕಿ ಹರಿಯುತ್ತಿದ್ದಾಳೆ. ಇದರಿಂದಾಗಿ ಲಕ್ಷಾಂತರ ಭಕ್ತರು ನಿತ್ಯ ಸ್ನಾನ ಮಾಡುತ್ತಿದ್ದ ಧರ್ಮಸ್ಥಳದ ಸ್ನಾನಘಟ್ಟ ಕೊಚ್ಚಿ ಹೋಗಿದೆ.
ಮಂಗಳೂರು [ ಆ.11]: ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ನೆರೆಯಿಂದ ಜನಜೀವನ ತತ್ತರಿಸಿದೆ. ಕಂಡು ಕೇಳರಿಯದ ಪ್ರವಾಹಕ್ಕೆ ಅಕ್ಷರಶಃ ರಾಜ್ಯ ನಲುಗಿದೆ.
ಲಕ್ಷಾಂತರ ಭಕ್ತರು ಸ್ನಾನ ಮಾಡುವ ಧರ್ಮಸ್ಥಳದ ಸ್ನಾನಘಟ್ಟವೀಗ ಸಂಪೂರ್ಣ ಖಾಲಿಯಾಗಿದೆ. ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ನಾನಘಟ್ಟದ ಮೆಟ್ಟಿಲುಗಳು ನದಿಯಲ್ಲಿ ಕೊಚ್ಚಿಹೋಗಿವೆ. 30ಕ್ಕೂ ಹೆಚ್ಚು ಸ್ನಾನಗೃಹಗಳು ನೀರಿನಲ್ಲಿ ತೇಲಿ ಹೋಗಿವೆ.
ಸ್ನಾನಘಟ್ಟದ ತಡೆಗೋಡೆಗಳು ಸಂಪೂರ್ಣವಾಗಿ ನೇತ್ರಾವತಿಯ ಪಾಲಾಗಿದ್ದು, ಭೀಕರ ಪ್ರವಾಹದಿಂದ ಸ್ನಾನಘಟ್ಟ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಲಕ್ಷಾಂತರ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದ ಭಕ್ತರ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ಈ ಸ್ಥಳವು ಮೊದಲಿನ ಸ್ಥಿತಿಗೆ ಬರಲು ಇನ್ನಷ್ಟು ತಿಂಗಳುಗಳೇ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.