ವೈದ್ಯರ ಎಡವಟ್ಟಿಗೆ ಆರು ತಿಂಗಳ ಹಸುಗೂಸು ಬಲಿ: ಕಿವಿ ಚುಚ್ಚಿಸಲು ಕರೆತಂದಿದ್ದ ಮಗುವಿಗೆ ಅನಸ್ತೇಷಿಯಾ ಓವರ್ ಡೋಸ್!

Published : Feb 03, 2025, 07:24 PM ISTUpdated : Feb 03, 2025, 07:38 PM IST
ವೈದ್ಯರ ಎಡವಟ್ಟಿಗೆ ಆರು ತಿಂಗಳ ಹಸುಗೂಸು ಬಲಿ: ಕಿವಿ ಚುಚ್ಚಿಸಲು ಕರೆತಂದಿದ್ದ ಮಗುವಿಗೆ ಅನಸ್ತೇಷಿಯಾ ಓವರ್ ಡೋಸ್!

ಸಾರಾಂಶ

ಆ ಮನೆಯಲ್ಲಿ ಮುದ್ದಾದ ಮಗುವಿನ ಕಿಲಕಿಲ ನಗುವಿನಿಂದ ಸಂಭ್ರಮ ತುಂಬಿತ್ತು. ತೊಟ್ಟಿಲು ಶಾಸ್ತ್ರ ಮಾಡಿ  ಮಗುವನ್ನು  ಮನೆಗೆ ಕರೆತರಬೇಕೆಂಬ ಸಡಗರದಲ್ಲಿದ್ದ ಕುಟುಂಬದವರಿಗೆ ಬರಸಿಡಿಲಿನಂತೆ ಎರಗಿದೆ ಆ ಮಗುವಿನ ಸಾವು.

ವರದಿ: ಪುಟ್ಟರಾಜು.ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್,  ಚಾಮರಾಜನಗರ.

ಚಾಮರಾಜನಗರ (ಫೆ.03): ಆ ಮನೆಯಲ್ಲಿ ಮುದ್ದಾದ ಮಗುವಿನ ಕಿಲಕಿಲ ನಗುವಿನಿಂದ ಸಂಭ್ರಮ ತುಂಬಿತ್ತು. ತೊಟ್ಟಿಲು ಶಾಸ್ತ್ರ ಮಾಡಿ  ಮಗುವನ್ನು  ಮನೆಗೆ ಕರೆತರಬೇಕೆಂಬ ಸಡಗರದಲ್ಲಿದ್ದ ಕುಟುಂಬದವರಿಗೆ ಬರಸಿಡಿಲಿನಂತೆ ಎರಗಿದೆ ಆ ಮಗುವಿನ ಸಾವು. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಈ ಸ್ಟೋರಿ ನೋಡಿ. ಗುಂಡ್ಲುಪೇಟೆ ತಾಲೂಕಿನ ಆನಂದ್ ಎರಡು ವರ್ಷಗಳ ಹಿಂದೆ ಶೆಟ್ಟಹಳ್ಳಿ ಗ್ರಾಮದ ಶುಭಮಾನಸ ಎಂಬುವರನ್ನು ವರಿಸಿದ್ದರು. ಈ ದಂಪತಿಗೆ ಆರು ತಿಂಗಳ ಹಿಂದೆ ಮುದ್ದಾದ ಗಂಡು ಮಗು ಜನಿಸಿತ್ತು. ಮಗುವಿಗೆ ಪ್ರಖ್ಯಾತ್ ಎಂದು ನಾಮಕರಣವನ್ನು ಮಾಡಲಾಗಿತ್ತು. 

ಶುಭಮಾನಸ ಅವರಿಗೆ ತಂದೆ ತಾಯಿ ಇಬ್ಬರು ಇಲ್ಲಸ ಕಾರಣ ತವರು ಮನೆಯಲ್ಲಿ ಅಜ್ಜಿಯೇ ಬಾಣಂತನ ಮಾಡುತ್ತಿದ್ದರು.  ಅಜ್ಜಿಗೆ ತೊಂದರೆಯಾಗಬಾರದು ಎಂದು ಬೇಗ ತೊಟ್ಟಿಲು ಶಾಸ್ತ್ರ ಮಾಡಿ ಮಗವನ್ನು ಹಂಗಳ ಗ್ರಾಮಕ್ಕೆ ಕರೆದೊಯ್ಯಲು ಆನಂದ್ ದಂಪತಿ ನಿರ್ಧರಿಸಿದ್ದರು. ಇದೇ ಖುಷಿಯಲ್ಲಿ ಮಗುವಿಗೆ ಚಿನ್ನದ ಓಲೆ ಮಾಡಿಸಲು ನಿರ್ಧರಿಸಿ ಅದಕ್ಕಾಗಿ ಮಗುವಿಗೆ ಕಿವಿ ಚುಚ್ಚಿಸಲೆಂದು ಶೆಟ್ಟಹಳ್ಳಿ ಗ್ರಾಮದ ಹತ್ತಿರದಲ್ಲೇ ಇರುವ ಬೊಮ್ಮಲಾಪುರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದರೆ ಅಲ್ಲಿನ ವೈದ್ಯರು ಮಗುವಿನ ಎರಡೂ ಕಿವಿಗೆ ಲೋಕಲ್ ಅನಸ್ತೇಷಿಯಾ ಕೊಟ್ಟಿದ್ದಾರೆ.

ಮೂರು ಪಟ್ಟು ಹೆಚ್ಚು ಹಣದ ಆಮಿಷ: ಇಬ್ಬರು ಮಹಿಳೆಯರಿಂದ ಬರೋಬ್ಬರಿ 246 ಜನರಿಗೆ ಮೋಸ!

ಅನಸ್ತೇಷಿಯಾ ನೀಡಿದ ಬಳಿಕ ಮಗುವಿಗೆ ಫಿಟ್ಸ್ ಬಂದು ಮೂರ್ಚೆ ಹೋಗಿದೆ. ತಕ್ಷಣ ಮಗುವನ್ನು ಗುಂಡ್ಲುಪೇಟೆ ತಾಲೋಕು ಆಸ್ಪತ್ರೆಗೆ ರವಾನಿಸಲಾಗಿದೆ.  ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಓವರ್ ಡೋಸ್ ನೀಡಿದರೆಂಬ ಆರೋಪವು ಕೇಳಿ ಬಂದಿದ್ದು ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೇ ಮಗು ಅಸುನೀಗಿದೆ.. ಮಗು ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ತಾಲೋಕು ವೈದ್ಯಾಧಿಕಾರಿ ಡಾ. ಅಲೀಂಪಾಶಾ,  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಅನಸ್ತೇಷಿಯಾ ಕೊಟ್ಟ ಮೇಲೆ ಪಿಟ್ಸ್ ಬಂದಿದೆ,ತಕ್ಷಣ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ, ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಮಗು ಅಸುನೀಗಿದೆ.  

ಚಾಮರಾಜನಗರದಲ್ಲಿ 55 ಹೊಸ ಸಿಸಿ ಕ್ಯಾಮೆರಾ ಅಳವಡಿಸಿದ ಖಾಕಿ ಪಡೆ!

ಈ ಬಗ್ಗೆ ಮೆಡಿಕಲ್ ಲೀಗಲ್ ಕೇಸ್ ಮಾಡಿ ಮಗುವಿನ ಸಾವಿಗೆ ನಿಖರ ಕಾರಣ ಏನೆಂಬುದನ್ನು ತನಿಖೆ ಮಾಡಿ  ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವಯದಾಗಿ ತಿಳಿಸಿದ್ದಾರೆ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮಗುವಿಗೆ  ಚುಚ್ಚಲು 200 ರೂಪಾಯಿ ಹಣವನ್ನು ಸಹ ಪಡೆದಿದ್ದರೂ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ನಿಜಕ್ಕೂ ವೈದ್ಯರ ಎಡವಟ್ಟಿನಿಂದ ಮಗು ಅಸುನೀಗಿತಾ  ಇಲ್ಲವಾ ಎಂಬ ಬಗ್ಗೆ  ಮರಣೋತ್ತರ ಪರೀಕ್ಷೆಯಿಂದಷ್ಟೇ ಗೊತ್ತಾಗಬೇಕಿದೆ ಒಟ್ಟಾರೆ   ಪ್ರಖ್ಯಾತನ ತುಂಟಾಟಗಳಿಂದ ಸಂಭ್ರಮ ತುಂಬಿದ್ದ ಮನೆಯುಲ್ಲೀಗ ಸೂತಕದ ಛಾಯೆ ಆವರಿಸಿದೆ.

PREV
Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ