ಕೊಪ್ಪಳ: ಈ ವರ್ಷ ‘ಪರಿಸ್ಥಿತಿ ಸ್ನೇಹಿ’ ಗವಿಮಠ ಜಾತ್ರೆ

By Kannadaprabha NewsFirst Published Jan 15, 2021, 3:17 PM IST
Highlights

ಜಾತ್ರೆಯ ಅಂಗವಾಗಿ ಸಾಮಾಜಿಕ ಕಳಕಳಿಯಡಿ ನಡೆಯುವ ವಿದ್ಯಾರ್ಥಿ ಜಾಥಾ, ತೆಪ್ಪೋತ್ಸವ ಕಾರ್ಯಕ್ರಮ ರದ್ದು| ಮಹಾರಥೋತ್ಸವ ಜಾತ್ರಾ ಮೈದಾನದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧ| ಜಗನ್ನಾಥ ರಥೋತ್ಸವ, ಮೈಸೂರು ದಸರಾ ಜಂಬೂಸವಾರಿ ರೀತಿಯಲ್ಲಿ ಸಾಂಪ್ರದಾಯಿಕ, ಸರಳವಾಗಿ ಆಚರಿಸಲು ತೀರ್ಮಾನ| 

ಕೊಪ್ಪಳ(ಜ.15): ಶತಮಾನಗಳಿಂದ ನಡೆದುಕೊಂಡು ಬಂದ ಗವಿಸಿದ್ಧೇಶ್ವರ ಜಾತ್ರೆಯನ್ನು ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುವುದು. ಶ್ರೀಮಠದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ, ಉಳಿದ ಕಾರ್ಯಕ್ರಮಗಳನ್ನು ಆಚರಿಸದಿರಲು ನಿರ್ಧರಿಸಿದ್ದು, ಒಟ್ಟಾರೆ ‘ಪರಿಸ್ಥಿತಿ ಸ್ನೇಹಿ’ ಜಾತ್ರೆಗೆ ತೀರ್ಮಾನಿಸಲಾಗಿದೆ.

ಪ್ರತಿವರ್ಷ ಜಾತ್ರೆಯ ಅಂಗವಾಗಿ ಸಾಮಾಜಿಕ ಕಳಕಳಿಯಡಿ ನಡೆಯುವ ವಿದ್ಯಾರ್ಥಿ ಜಾಥಾ, ತೆಪ್ಪೋತ್ಸವ ಕಾರ್ಯಕ್ರಮ ರದ್ದು ಮಾಡಲಾಗಿದೆ. 

'ಕಾಂಗ್ರೆಸ್‌ನಲ್ಲಿ ಚೇಲಾಗಳಿಗೆ ಅಧಿಕಾರ'

ಜ.30ರಂದು ಜರುಗುವ ಮಹಾರಥೋತ್ಸವ ಜಾತ್ರಾ ಮೈದಾನದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಪುರಿ ಜಗನ್ನಾಥ ರಥೋತ್ಸವ, ಮೈಸೂರು ದಸರಾ ಜಂಬೂಸವಾರಿ ರೀತಿಯಲ್ಲಿ ಸಾಂಪ್ರದಾಯಿಕ, ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಕೈಲಾಸ ಮಂಟಪದ ವೇದಿಕೆಯಲ್ಲಿ ಧಾರ್ಮಿಕ ಗೋಷ್ಠಿ, ಭಕ್ತ ಹಿತಚಿಂತನಾ ಸಭೆ, ಅನುಭಾವಿಗಳ ಅಮೃತಗೋಷ್ಠಿ, ಸಂಗೀತ, ಸಾಹಿತ್ಯ, ಹಾಸ್ಯ, ಸಾಧಕರ ಸನ್ಮಾನ ಕಾರ್ಯಕ್ರಮಗಳೂ ನಡೆಯುವುದಿಲ್ಲ.
 

click me!