3 ವರ್ಷದ ನಂತ್ರ ದೇವಾಲಯಕ್ಕೆ ಬಂದ ಆನೆ: ಪ್ರಸಾದ ತಿನ್ನಿಸಿದ IAS ಅಧಿಕಾರಿಗೆ ಟೀಕೆ

By Suvarna News  |  First Published Jan 15, 2021, 2:21 PM IST

ಮೂರು ವರ್ಷಗಳ ನಂತರ ದೇವಾಲಯಕ್ಕೆ ಬಂದ ಆನೆ | ಪ್ರಸಾದ ತಿನ್ನಿಸಿದ ಐಎಎಸ್ ಅಧಿಕಾರಿ ವಿರುದ್ಧ ಟೀಕೆ


ಚಾಮರಾಜನಗರ(ಜ.15): ಮೂರು ವರ್ಷಗಳ ನಂತರ ಗೋಪಾಲಸ್ವಾಮಿ ದರ್ಶನಕ್ಕೆ ಗಜರಾಜ ಮತ್ತೆ ಬಂದಿದ್ದಾನೆ. ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಗಜರಾಜನ ಆಗಮನವಾಗಿದೆ.

ಮೂರು ವರ್ಷಗಳ ಬಳಿಕ ಮತ್ತೆ ಬಂದಿರೋ ಕಾಡಾನೆ ಎಲ್ಲರನ್ನು ಅಚ್ಚರಿಗೊಳಪಡಿಸಿದೆ. ದೇವಸ್ಥಾನದ ಸಿಬ್ಬಂದಿ ನೀಡುತ್ತಿದ್ದ ಪ್ರಸಾದದ ಆಸೆಗೆ ಬರುತ್ತಿದ್ದ ಕಾಡಾನೆ ಸ್ವಲ್ಪ ಸಮಯ ಬರುತ್ತಿರಲಿಲ್ಲ.

Tap to resize

Latest Videos

undefined

ಕುಮಾರಸ್ವಾಮಿಗೆ ಕಾಡುತ್ತಿದೆಯಾ ಆ ಒಂದು ಕೊರಗು? ದೇವಸ್ಥಾನದಲ್ಲಿ ಎಚ್‌ಡಿಕೆ ತಪ್ಪುಕಾಣಿಕೆ ಸಲ್ಲಿಕೆ

ಐಎಎಸ್ ಅಧಿಕಾರಿ ಬಿ.ಬಿ.ಕಾವೇರಿ ದೇವಸ್ಥಾನ ಕ್ಕೆ ಭೇಟಿ ನೀಡಿದ್ದ ವೇಳೆಯೇ ಕಾಡಾನೆ ಮತ್ತೆ ಬಂದಿದೆ. ಬಿಬಿ ಕಾವೇರಿ ಪೌರಾಡಳಿತ ಇಲಾಖೆ ನಿರ್ದೇಶಕಿ ಹಾಗು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರೂ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು.

ಬಿ.ಬಿ.ಕಾವೇರಿ ಅವರು ಕಾಡಾನೆಗೆ ದೇವಸ್ಥಾನದ ಪ್ರಸಾದ ಸಿಹಿಪೊಂಗಲ್, ಬೆಲ್ಲ ತಿನಿಸಿದ್ದಾರೆ. ಇದೀಗ ಬಿ.ಬಿ.ಕಾವೇರಿ ಅವರು ವನ್ಯಜೀವಿ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ದೇವಾಲಯಕ್ಕೆ ಬರೋ ಭಕ್ತರಿಗೆ ಆಶಿರ್ವಾದ ಮಾಡುತ್ತೆ ಈ ಶ್ವಾನ: ಇಲ್ನೋಡಿ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಪರಿಸರವಾದಿಗಳು ಕಾವೇರಿ ಅವರ ಕ್ರಮವನ್ನು ಟೀಕಿಸಿದ್ದಾರೆ. ಪ್ರಸಾದದ ಆಮಿಷಕ್ಕೆ ಒಳಗಾಗಾಗಿ ಕಾಡಾನೆ ಮತ್ತೆ ಮತ್ತೆ ಬರಬಹುದು ಎಂದು ಹೇಳಲಾಗಿದೆ.

ಅರಣ್ಯದಂಚಿನ ಗ್ರಾಮಗಳಿಗೆ ದಾಳಿ ಮಾಡಬಹುದು. ಮಾನವ ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಬಹುದು. ಐಎಎಸ್ ಅಧಿಕಾರಿ ವಿವೇಕಯುತವಾಗಿ ವರ್ತಿಸಬೇಕಿತ್ತು ಎಂದು ಟೀಕೆ ವ್ಯಕ್ತವಾಗಿದೆ.

click me!